Site icon Vistara News

RCB vs RR: ಆರ್​ಸಿಬಿ-ರಾಜಸ್ಥಾನ್ ತಂಡಗಳ​ ಐಪಿಎಲ್​ ​ಪ್ಲೇ ಆಫ್/ನಾಕೌಟ್ ದಾಖಲೆ ಹೇಗಿದೆ?

RCB vs RR

RR vs RCB: Head To Head Record & Stats in Narendra Modi Stadium, Ahmedabad Ahead of IPL 2024 Eliminator

ಅಹಮದಾಬಾದ್​: ಐಪಿಎಲ್​ ಆವೃತ್ತಿಯ ಚೊಚ್ಚಲ ಚಾಂಪಿಯನ್​ ರಾಜಸ್ಥಾನ್​ ರಾಯಲ್ಸ್​(RCB vs RR) ಮತ್ತು ಮೂರು ಬಾರಿ ಫೈನಲ್​ ಪ್ರವೇಶಿಸಿದರೂ ಕಪ್​ ಗೆಲ್ಲದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು(Royal Challengers Bengaluru) ತಂಡಗಳು ನಾಳೆ(ಬುಧವಾರ) ನಡೆಯುವ ಎಲಿಮಿನೇಟರ್​ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಇತ್ತಂಡಗಳ ಇದುವರೆಗಿನ ಐಪಿಎಲ್​ನ ಸಾಧನೆಗಳ ಹಿನ್ನೋಟ ಇಂತಿದೆ.

ಸೇಡು ತೀರಿಸಿಕೊಂಡೀತೇ ಆರ್​ಸಿಬಿ?


ರಾಜಸ್ಥಾನ್​ ರಾಯಲ್ಸ್​ ಮತ್ತು ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ 2022ರಲ್ಲಿ ನಡೆದಿದ್ದ ಐಪಿಎಲ್​ ಟೂರ್ನಿಯ ಕ್ವಾಲಿಫೈಯರ್​-2 ಪಂದ್ಯದಲ್ಲಿ ಮುಖಾಮುಖಿಯಾಗಿತ್ತು. ಈ ಪಂದ್ಯ ನರೇಂದ್ರ ಮೋದಿ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದಿತ್ತು. ಪಂದ್ಯದಲ್ಲಿ ರಾಜಸ್ಥಾನ್​ 7 ವಿಕೆಟ್​ ಅಂತರದ ಭರ್ಜರಿ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿತ್ತು. ಇದೀಗ ಅಂದಿನ ಈ ಸೋಲಿಗೆ ಆರ್​ಸಿಬಿ ಈ ಬಾರಿಯ ಎಲಿಮಿನೇಟರ್​ ಪಂದ್ಯದಲ್ಲಿ ಸೇಡು ತೀರಿಸಿಕೊಂಡೀತೇ? ಎಂದು ಕಾದು ನೋಡಬೇಕಿದೆ.

ಆರ್​ಸಿಬಿ ನಾಕೌಟ್​/ ಪ್ಲೇ ಆಫ್​ ಸಾಧನೆ


2009ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

201ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2011ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2015ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2016ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

2020ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2021ರಲ್ಲಿ ಲೀಗ್​ನಲ್ಲಿ 3ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

ರಾಜಸ್ಥಾನ್​ ನಾಕೌಟ್​/ ಪ್ಲೇ ಆಫ್​ ಸಾಧನೆ


2008ರಲ್ಲಿ ಲೀಗ್​ನಲ್ಲಿ ಮೊದಲ ಸ್ಥಾನ. ಚಾಂಪಿಯನ್​

2013ರಲ್ಲಿ ಲೀಗ್​ನಲ್ಲಿ ಮೂರನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2015ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2018ರಲ್ಲಿ ಲೀಗ್​ನಲ್ಲಿ 4ನೇ ಸ್ಥಾನ. ಪ್ಲೇ ಆಫ್​ನಲ್ಲಿ ಸೋಲು

2022ರಲ್ಲಿ ಲೀಗ್​ನಲ್ಲಿ 2ನೇ ಸ್ಥಾನ. ಫೈನಲ್​ನಲ್ಲಿ ಸೋಲು (ರನ್ನರ್​ ಅಪ್​)

ಇದನ್ನೂ ಓದಿ RCB IPL Records: ಕಳೆದ 16 ಆವೃತ್ತಿಯ ಐಪಿಎಲ್​ನಲ್ಲಿ ಆರ್​ಸಿಬಿ ಎಷ್ಟು ಬಾರಿ ಪ್ಲೇ ಆಫ್​ಪ್ರವೇಶಿಸಿದೆ?: ತಂಡದ ದಾಖಲೆ ಹೇಗಿದೆ?

ಮುಖಾಮುಖಿ


ಆರ್​ಸಿಬಿ ಮತ್ತು ರಾಜಸ್ಥಾನ್​ ತಂಡಗಳು ಇದುವರೆಗಿನ ಐಪಿಎಲ್​ ಆವೃತ್ತಿಯಲ್ಲಿ ಒಟ್ಟು 31 ಬಾರಿ(RR vs RCB Head To Head Record) ಮುಖಾಮುಖಿಯಾಗಿವೆ. ಈ ಪೈಕಿ ಆರ್​ಸಿಬಿ 15, ರಾಜಸ್ಥಾನ್​ 13 ಗೆಲುವು ಸಾಧಿಸಿದೆ. 3 ಪಂದ್ಯಗಳು ಫಲಿತಾಂಶ ಇಲ್ಲದೆ ಕೊನೆಗೊಂಡಿದೆ. ಈ ಲೆಕ್ಕಾಚಾರದಲ್ಲಿ ಆರ್​ಸಿಬಿ ಬಲಿಷ್ಠ ಎನ್ನಲಡ್ಡಿಯಿಲ್ಲ. ಈ ಬಾರಿಯ ಮುಖಾಮುಖಿಯಲ್ಲಿ ರಾಜಸ್ಥಾನ್​ ಗೆಲುವು ಸಾಧಿಸಿತ್ತು.

ಸಂಭಾವ್ಯ ತಂಡಗಳು


ಆರ್​ಸಿಬಿ:
ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ರಜತ್ ಪಾಟಿದಾರ್, ಕ್ಯಾಮರೂನ್​ ಗ್ರೀನ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್ (ವಿಕೆ), ಕರ್ಣ್ ಶರ್ಮಾ, ಯಶ್ ದಯಾಳ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.

ರಾಜಸ್ಥಾನ್​ ರಾಯಲ್ಸ್​: ಯಶಸ್ವಿ ಜೈಸ್ವಾಲ್, ಟಾಮ್ ಕೊಹ್ಲರ್-ಕಾಡ್ಮೋರ್, ಸಂಜು ಸ್ಯಾಮ್ಸನ್ (ನಾಯಕ), ರಿಯಾನ್ ಪರಾಗ್, ಧ್ರುವ್ ಜುರೆಲ್, ರೋವ್ಮನ್ ಪೊವೆಲ್, ರವಿಚಂದ್ರನ್ ಅಶ್ವಿನ್, ಟ್ರೆಂಟ್ ಬೌಲ್ಟ್, ಸಂದೀಪ್ ಶರ್ಮಾ, ಅವೇಶ್ ಖಾನ್, ನಾಂದ್ರೆ ಬರ್ಗರ್.

Exit mobile version