Site icon Vistara News

Ruturaj Gaikwad : ಗಾಯಕ್ವಾಡ್​ ಮುಖಕ್ಕೆ ಬಡಿದ ಟೀಮ್ ಬಸ್​ನ ಬಾಗಿಲು!

Ruturaj Gaikwad

ಡರ್ಬನ್: ಋತುರಾಜ್ ಗಾಯಕ್ವಾಡ್ ಅವರು ಗಾಬರಿಗೆ ಒಳಗಾದ ಘಟನೆ ಭಾನುವಾರ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಗಮನ ಸೆಳೆಯಿತು. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಮುಂಚಿತವಾಗಿ ಆರಂಭಿಕ ಬ್ಯಾಟರ್​​ ಟೀಮ್​ ಬಸ್​​ಗೆ ಹತ್ತಲು ಮುಂದಾದಾಗ ಏಕಾಏಕಿ ಬಾಗಿಲು ಹಾಕಿಕೊಂಡ ಕಾರಣ ಅವರು ಗಲಿಬಿಲಿಗೆ ಒಳಗಾದರು. ಈ ದೃಶ್ಯವನ್ನು ಅಭಿಮಾನಿಯೊಬ್ಬರು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​ ಮಾಡಿಕೊಂಡಿದ್ದಾರೆ.

ವೈರಲ್ ವೀಡಿಯೊದಲ್ಲಿ, ಗಾಯಕ್ವಾಡ್ ತನ್ನ ತರಬೇತಿ ಕಿಟ್ ಧರಿಸಿ ತಂಡದ ಬಸ್ ಕಡೆಗೆ ನಡೆಯುತ್ತಿರುವುದನ್ನು ಕಾಣಬಹುದು. ಆದಾಗ್ಯೂ, ಬಾಗಿಲ ಬಳಿಗೆ ತಲುಪಿದ ತಕ್ಷಣ ಚಾಲಕ ತಕ್ಷಣ ಬಾಗಿಲು ಮುಚ್ಚಿದ್ದಾನೆ. ಬಾಗಿಲು ಏಕಾಏಕಿ ಋತುರಾಜ್ ಅವರ ಮುಖದ ಹತ್ತಿರ ಬಂದಿದ್ದು ಅವರು ಗಾಯಗೊಳ್ಳುವ ಸಾಧ್ಯತೆಗಳಿದ್ದವು. ಆದರೆ, ಸುಳಿವು ಪಡೆದ ಅವರು ತಕ್ಷಣವೇ ಹಿಂದಕ್ಕೆ ಸರಿಯುತ್ತಾರೆ. ಅಲ್ಲಗೆ ಗೊಂದಲಕ್ಕೆ ಒಳಗಾಗುತ್ತಾರೆ.

ಭಾರತಕ್ಕೆ 8 ವಿಕೆಟ್​ಗಳ ಭರ್ಜರಿ ಜಯ

ಗಾಯಕ್ವಾಡ್ ಮೊದಲ ಏಕದಿನ ಪಂದ್ಯದಲ್ಲಿ ಸವಾಲು ಎದುರಿಸಿದರು. ಏಷ್ಯಾದ ಹೊರಗೆ ತಮ್ಮ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಅವರು ಕೇವಲ 5 ರನ್ ಗಳಿಸಿದರು. ಆದಾಗ್ಯೂ, ಭಾರತೀಯ ಬೌಲರ್​ಗಳು ವಿಶೇಷವಾಗಿ ಅರ್ಶ್​ದೀಪ್​ ಸಿಂಗ್ ಮತ್ತು ಅವೇಶ್ ಖಾನ್ ಅಸಾಧಾರಣ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾವನ್ನು ಕೇವಲ 116 ರನ್​ಗಳಿಗೆ ಆಲ್​ಔಟ್ ಮಾಡಿದರು. ಈ ಮೊತ್ತವು ದಕ್ಷಿಣ ಆಫ್ರಿಕಾದ ತವರು ನೆಲದಲ್ಲಿ ಗಳಿಸಿದ ಅತ್ಯಂತ ಕಡಿಮೆ ಏಕದಿನ ಸ್ಕೋರ್ ಆಗಿದೆ.

ಇದನ್ನೂ ಓದಿ : ಮುಂದುವರಿಯಲಿ ಮೊದಲ ಪಂದ್ಯದ ಜೋಶ್​; ಹರಿಣ ಪಡೆಗೆ ಬೀಳಲಿ ಸರಣಿ ಸೋಲಿನ ಏಟು!

ಚೇಸಿಂಗ್​ನಲ್ಲಿ ಪದಾಪರ್ಣೆ ಪಂಡ್ಯವಾಡಿದ ಸಾಯಿ ಸುದರ್ಶನ್ ಅವರು ಏಕದಿನ ಕ್ರಿಕೆಟ್​​ನಲ್ಲಿ ಎದುರಿಸಿದ ಮೊದಲ ಎಸೆತದಲ್ಲಿ ಬೌಂಡರಿ ಹೊಡೆಯುವ ಮೂಲಕ ಪ್ರಭಾವ ಬೀರಿದರು. ಗಾಯಕ್ವಾಡ್ ಕೂಡ ವೇಗಿ ವಿಯಾನ್ ಮುಲ್ಡರ್ ಅವರ ಫ್ರೀ ಹಿಟ್ ಎಸೆತದಲ್ಲಿ ನಾಲ್ಕು ರನ್ ಗಳಿಸಿದರು. ಆದಾಗ್ಯೂ, ಗಾಯಕ್ವಾಡ್ ಅವರ ಇನ್ನಿಂಗ್ಸ್ ಅಲ್ಪಾವಧಿಯದ್ದಾಗಿತ್ತು. ಮುಲ್ಡರ್ ಅವರನ್ನು 10 ಎಸೆತಗಳಲ್ಲಿ ಕೇವಲ 5 ರನ್​ಗಳಿಗೆ ಔಟ್ ಮಾಡಿದರು. ಇದರ ಹೊರತಾಗಿಯೂ, ಸುದರ್ಶನ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕ್ರಮಣಕಾರಿ ಅರ್ಧಶತಕಗಳ ನೆರವಿನಿಂದ ಭಾರತವು 8 ವಿಕೆಟ್​ಗಳ ಗೆಲುವು ಸಾಧಿಸಿತು, ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.

ಧೋನಿ ನಾಯಕತ್ವದ ದಾಖಲೆ ಮುರಿದ ಕನ್ನಡಿಗ ಕೆ.ಎಲ್ ರಾಹುಲ್​

ಜೊಹಾನ್ಸ್​ಬರ್ಗ್​: ದಕ್ಷೀಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡ 8 ವಿಕೆಟ್​ಗಳ ಗೆಲುವು ಸಾಧಿಸಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಕಾಯ್ದುಕೊಂಡಿದೆ. ತಂಡದ ನಾಯಕ, ಸ್ಟಾರ್​ ಆಟಗಾರ ಕೆ.ಎಲ್​ ರಾಹುಲ್(KL Rahul)​ ಅವರು ಈ ಗೆಲುವಿನ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ನಾಯಕನಾಗಿ ರಾಹುಲ್​ ಅವರು ಸತತ 10 ಪಂದ್ಯಗಳನ್ನು ಗೆಲ್ಲುವ ಮೂಲಕ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ದಾಖಲೆಯನ್ನು ಮುರಿದಿದ್ದಾರೆ. ಧೋನಿ ನಾಯಕನಾಗಿ 2013ರಲ್ಲಿ ಸತತವಾಗಿ 9 ಪಂದ್ಯಗಳನ್ನು ಗೆದ್ದಿದ್ದರು. ಇದೀಗ ರಾಹುಲ್ ಈ ದಾಖಲೆಯನ್ನು ಮುರಿದಿದ್ದಾರೆ.

ದಾಖಲೆಯ ಗೆಲುವು ರೋಹಿತ್​ ಶರ್ಮ ಹೆಸರಿನಲ್ಲಿ. ಅವರು 2019 ರಿಂದ 2022 ರವರೆಗೆ ನಾಯಕನಾಗಿ ಆಡಿದ ಎಲ್ಲ 19 ಪಂದ್ಯಗಳಲ್ಲಿ ತಂಡವನ್ನು ಗೆಲ್ಲಿಸಿದ್ದರು. ಇದು ಸದ್ಯ ದಾಖಲೆಯಾಗಿಯೇ ಉಳಿದಿದೆ. ಈ ಬಾರಿಯ ವಿಶ್ವಕಪ್​ ಟೂರ್ನಿಯಲ್ಲಿಯೂ ರೋಹಿತ್​ ನಾಯಕತ್ವದಲ್ಲಿ ಭಾರತ ತಂಡ ಸತತ 10 ಗೆಲುವು ಸಾಧಿಸಿತ್ತು.

Exit mobile version