Site icon Vistara News

ಬ್ರಿಟನ್‌ ಪ್ರಧಾನಿ​ಗೆ ವಿರಾಟ್​ ಕೊಹ್ಲಿ ಸಹಿಯುಳ್ಳ ಬ್ಯಾಟ್​ ಗಿಫ್ಟ್​ ನೀಡಿದ ಜೈಶಂಕರ್‌

Jaishankar Meets Rishi Sunak

ಲಂಡನ್​: ವಿದೇಶಾಂಗ ವ್ಯವಹಾರಗಳ ಸಚಿವ ಎಸ್.‌ ಜೈಶಂಕರ್‌ (Minister S Jaishankar) ಅವರು ಲಂಡನ್‌ ಪ್ರವಾಸದಲ್ಲಿದ್ದು, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ (Rishi Sunak) ಹಾಗೂ ಅವರ ಪತ್ನಿ ಅಕ್ಷತಾ ಮೂರ್ತಿ (Akshata Murty) ಅವರನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಜೈಶಂಕರ್‌ ಅವರು ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ ಅವರ ಹಸ್ತಾಕ್ಷರವುಳ್ಳ ಬ್ಯಾಟ್​ ಮತ್ತು ಗಣೇಶನ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಫೋಟೊ ವೈರಲ್ ಆಗಿದೆ.

ಜೈಶಂಕರ್‌ ನೀಡಿದ ವಿರಾಟ್​ ಕೊಹ್ಲಿ ಅವರ ಸಹಿಯುಳ್ಳ ಬ್ಯಾಟನ್ನು ​ರಿಷಿ ಸುನಕ್‌ ಹಿಡಿದುಕೊಂಡಿರುವ ಫೋಟೊ ವೈರಲ್​ ಆಗಿದೆ. ಹಿಂದೊಮ್ಮ ರಿಷಿ ಸುನಕ್‌ ಅವರು ತಾವು ಕೊಹ್ಲಿಯ ಅವರ ಅಭಿಮಾನಿ ಎಂದು ಹೇಳಿದ್ದರು. ಇದೀಗ ಅವರ ಸಹಿಯುಳ್ಳ ಬ್ಯಾಟ್​ ಉಡುಗೊರೆಯಾಗಿ ಪಡೆದಿರುವುದು ಅವರಿಗೆ ಬಳಹ ಸಂತಸ ತಂದಿರುತ್ತದೆ. ನಗುಮುಗದಿಂದಲೇ ಈ ಬ್ಯಾಟನ್ನು ಸ್ವೀಕರಿಸುತ್ತಿರುವು ಫೋಟೊದಲ್ಲಿ ಕಾಣಬಹುದಾಗಿದೆ.

ಇದನ್ನೂ ಓದಿ Virat kohli : ಕೊಹ್ಲಿ ಪಡೆದ ವಿಕೆಟ್​ಗಿಂತ ಪತ್ನಿ ಅನುಷ್ಕಾ ಸಂಭ್ರಮವೇ ಟ್ರೆಂಡ್ ಆಯಿತು

ಲಂಡನ್‌ನ 10 ಡೌನಿಂಗ್‌ ಸ್ಟ್ರೀಟ್‌ನಲ್ಲಿ ಪತ್ನಿ ಕ್ಯೋಕೊ ಜೈಶಂಕರ್‌ ಅವರ ಜತೆ ತೆರಳಿದ ಎಸ್‌. ಜೈಶಂಕರ್‌, ರಿಷಿ ಸುನಕ್‌ ಹಾಗೂ ಅಕ್ಷತಾ ಮೂರ್ತಿ ಅವರಿಗೆ ದೀಪಾವಳಿ ಹಬ್ಬದ ಶುಭಾಶಯ ಕೋರಿದರು. ಹಾಗೆಯೇ, ನರೇಂದ್ರ ಮೋದಿ ಅವರು ರವಾನಿಸಿದ ದೀಪಾವಳಿ ಶುಭಾಶಯಗಳನ್ನೂ ತಿಳಿಸಿದರು.

ರಿಷಿ ಸುನಕ್‌ ದಂಪತಿಯನ್ನು ಭೇಟಿಯಾದ ಬಳಿಕ ಫೋಟೊಗಳ ಸಮೇತ ಜೈಶಂಕರ್‌ ಪೋಸ್ಟ್‌ ಮಾಡಿದ್ದಾರೆ. “ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ದೀಪಾವಳಿ ಹಬ್ಬದಂದು ಭೇಟಿಯಾಗಿದ್ದು ಸಂತಸ ತಂದಿದೆ. ನರೇಂದ್ರ ಮೋದಿ ಅವರ ಪರವಾಗಿಯೂ ದೀಪಾವಳಿ ಹಬ್ಬದ ಶುಭಾಶಯ ತಿಳಿಸಿದೆ. ಭಾರತ ಹಾಗೂ ಬ್ರಿಟನ್‌ ಸಂಬಂಧವು ಅನೂಹ್ಯವಾಗಿದೆ. ನಮಗೆ ಆತಿಥ್ಯ ನೀಡಿದ ರಿಷಿ ಸುನಕ್‌ ದಂಪತಿಗೆ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಎಸ್‌. ಜೈಶಂಕರ್‌ ಹಾಗೂ ಅವರ ಪತ್ನಿಯು ಲಂಡನ್‌ನಲ್ಲಿರುವ ಶ್ರೀ ಸ್ವಾಮಿ ನಾರಾಯಣ ದೇವಾಲಯಕ್ಕೂ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. “ಬ್ಯಾಪ್ಸ್‌ ಶ್ರೀ ಸ್ವಾಮಿ ನಾರಾಯಣ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದೆ. ಜಗತ್ತಿನಾದ್ಯಂತ ಶಾಂತಿ ಹಾಗೂ ನೆಮ್ಮದಿ ನೆಲೆಸಲಿ ಎಂದು ಪ್ರಾರ್ಥಿಸಿದೆ. ಹಾಗೆಯೇ, ಲಂಡನ್‌ನಲ್ಲಿರುವ ಅನಿವಾಸಿ ಭಾರತೀಯರನ್ನು ಭೇಟಿಯಾಗುವ ಅವಕಾಶ ನನ್ನದಾಯಿತು” ಎಂದು ಪೋಸ್ಟ್‌ ಮಾಡಿದ್ದಾರೆ.

Exit mobile version