Site icon Vistara News

SA vs USA: ನಾಳೆ ಮೊದಲ ಸೂಪರ್​-8 ಪಂದ್ಯ; ಅಮೆರಿಕ ಸವಾಲಿಗೆ ಹರಿಣ ಪಡೆ ಸಿದ್ಧ

SA vs USA

SA vs USA: First Super-8 match tomorrow; The Proteas are ready for the to challenge America

ಆಂಟಿಗುವಾ: ಹಾಲಿ ಟಿ20 ವಿಶ್ವಕಪ್​ ಟೂರ್ನಿಯ(T20 World Cup 2024) ಲೀಗ್​ ಹಂತದ ಪಂದ್ಯಗಳು ಮುಕ್ತಾಯ ಕಂಡಿದ್ದು ಇನ್ನು ಸೂಪರ್​-8 ಪಂದ್ಯಗಳು(T20 World Cup Super 8 Group) ಆರಂಭಗೊಳ್ಳಲಿದೆ. ನಾಳೆ(ಬುಧವಾರ) ನಡೆಯುವ ಮೊದಲ ಸೂಪರ್​-8 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ(south africa) ಮತ್ತು ಆತಿಥೇಯ ಅಮೆರಿಕ(United States) ಅದೃಷ್ಠ(SA vs USA) ಪರೀಕ್ಷೆಗೆ ಇಳಿಯಲಿದೆ. ಇದು ಇತ್ತಂಡಗಳ ನಡುವಣ ಮೊದಲ ಕ್ರಿಕೆಟ್​ ಮುಖಾಮುಖಿಯೂ ಹೌದು.

ಹರಿಣ ಪಡೆ ಬಲಿಷ್ಠ ಆದರೆ…

ಲೀಗ್​ ಹಂತದಲ್ಲಿ ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಪಂದ್ಯಗಳನ್ನು ಗೆದ್ದು ಅಜೇಯ ಎನಿಸಿಕೊಂಡಿದ್ದರೂ ಕೂಡ ಅಮೆರಿಕವನ್ನು ಕಡೆಗಣಿಸುವಂತಿಲ್ಲ. ಬಲಿಷ್ಠ ಪಾಕಿಸ್ತಾನಕ್ಕೆ ನೀರು ಕುಡಿಸಿದ್ದು ಮತ್ತು ಭಾರತಕ್ಕೆ ತೀವ್ರ ಪೈಪೋಟಿ ನೀಡಿದ್ದನ್ನು ಮರೆಯುವಂತಿಲ್ಲ. ಅಮೆರಿಕ ಕ್ರಿಕೆಟ್​ ಲೋಕಕ್ಕೆ ಹೊಸ ತಂಡವಾಗಿದ್ದರೂ ಕೂಡ ಆಟಗಾರರು ಮಾತ್ರ ಹೊಸಬರಲ್ಲ. ಭಾರತ, ಪಾಕಿಸ್ತಾನ, ನ್ಯೂಜಿಲ್ಯಾಂಡ್​ ತಂಡದ ಪರ ಆಡಿ ಈಗ ಅಮೆರಿಕ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಹೀಗಾಗಿ ಈ ಆಟಗಾರರಿಗೆ ಕ್ರಿಕೆಟ್​ ಹೊಸತಲ್ಲ. ಎಲ್ಲರು ಉತ್ಕೃಷ್ಟ ಮಟ್ಟದ ಆಟವನ್ನು ಆಡುವ ಸಾಮರ್ಥ್ಯ ಹೊಂದಿದ್ದಾರೆ.

ದಕ್ಷಿಣ ಆಫ್ರಿಕಾ ಆಡಿದ ಎಲ್ಲ ಲೀಗ್​ ಪಂದ್ಯಗಳಲ್ಲಿಯೂ ಪ್ರಯಾಸದ ಗೆಲುವು ಸಾಧಿಸಿತ್ತು. ಒಮ್ಮೆಯೂ 120 ಗಡಿ ದಾಟಿರಲಿಲ್ಲ. ಹಾಗಂತ ದಕ್ಷಿಣ ಆಫ್ರಿಕಾಗೆ ದೊಡ್ಡ ಮೊತ್ತ ಬಾರಿಸುವ ಸಾಮರ್ಥ ಇಲ್ಲವೆಂದಲ್ಲ. ಅದು ಆಡಿದ ಪಿಚ್ ನ್ಯೂಯರ್ಕ್​ನ ಅಪಾಯಕಾರಿ ನಾಸೌ ಕೌಂಟಿ ಸ್ಟೇಡಿಯಂನ ಪಿಚ್​ನಲ್ಲಿ. ಇಲ್ಲಿ ಹರಣಿ ಪಡೆ ಮಾತ್ರವಲ್ಲ ಆಡಿದ ಎಲ್ಲ ತಂಡಗಳು ಕೂಡ 120ಕ್ಕಿಂತ ಅಧಿಕ ಮೊತ್ತವನ್ನು ಬಾರಿಸಿಲ್ಲ. ಪಾಕ್​ ವಿರುದ್ಧ ಭಾರತ 119 ರನ್​ ಬಾರಿಸಿದ್ದೇ ಗರಿಷ್ಠ ಮೊತ್ತ. ಇದೀಗ ಸೂಪರ್​-8 ಪಂದ್ಯಗಳನ್ನು ವಿಂಡೀಸ್​ನಲ್ಲಿ ಆಡುತ್ತಿರುವ ಕಾರಣ ಮಾರ್ಕ್ರಮ್​ ಪಡೆ ದೊಡ್ಡ ಮೊತ್ತವನ್ನು ಪೇರಿಸುವ ಸಾಧ್ಯತೆ ಇದೆ.

ಲೀಗ್​ ಹಂತದ ಪಂದ್ಯದಲ್ಲಿ ಬ್ಯಾಟಿಂಗ್​ ವೈಫಲ್ಯ ಕಂಡಿದ್ದ ಕ್ವಿಂಟನ್​ ಡಿ ಕಾಕ್​, ನಾಯಕ ಐಡೆನ್​ ಮಾರ್ಕ್ರಮ್,​ ರೀಜಾ ಹೆಂಡ್ರಿಕ್ಸ್ ಸೂಪರ್​-8 ಪಂದ್ಯದಲ್ಲಾದರೂ ನಿರೀಕ್ಷಿತ ಬ್ಯಾಟಿಂಗ್​ ನಡೆಸುವ ಅನಿವಾರ್ಯತೆ ಇದೆ. ಮಧ್ಯಮ ಕ್ರಮಾಂಕದಲ್ಲಿ ಡೇವಿಡ್​ ಮಿಲ್ಲರ್​ ಮತ್ತು ಹೆನ್ರಿಚ್​ ಕ್ಲಾಸೆನ್​ ಸಿಡಿದು ನಿಂತು ಪಂದ್ಯದ ಗತಿಯನ್ನು ಬದಲಿಸುವ ಸಾಮರ್ಥ್ಯ ಹೊಂದಿದ್ದಾರೆ. ರಬಾಡ, ಜಾನ್ಸೆನ್​, ಮಹಾರಾಜ್​, ನೋರ್ಜೆ ಅವರನ್ನೊಳಗೊಂಡ ಬೌಲಿಂಗ್​ ವಿಭಾಗ ಘಾತಕವಾಗಿದೆ.

ಇದನ್ನೂ ಓದಿ T20 World Cup 2024 Super 8: ಸೂಪರ್​-8 ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಆಫ್ಘಾನ್​ ಮೊದಲ ಎದುರಾಳಿ

ಅಮೆರಿಕ ಪರ ಕನ್ನಡಿಗ ನಾಸ್ತುಷ್‌ ಕೆಂಜಿಗೆ, 2010ರಲ್ಲಿ ಭಾರತ ಪರ 19 ವಿಶ್ವಕಪ್​ ಆಡಿದ್ದ ಎಡಗೈ ವೇಗದ ಬೌಲರ್ ಸೌರಭ್ ನೇತ್ರವಲ್ಕರ್, ಮೊನಾಂಕ್ ಪಟೇಲ್, ವಿಸ್ಫೋಟಕ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಆರನ್ ಜೋನ್ಸ್ ಕೂಡ ಉತ್ತಮ ಬ್ಯಾಟಿಂಗ್​ ಫಾರ್ಮ್​ನಲ್ಲಿದ್ದಾರೆ. ವಿಂಡೀಸ್​ ಪಿಚ್​ನಲ್ಲಿ ಆಡಿದ ಅನುಭವ ಅಷ್ಟಾಗಿ ಇರದ ಕಾರಣ ನಾಳಿನ ಪಂದ್ಯದಲ್ಲಿ ಹೇಗೆ ಪ್ರದರ್ಶನ ತೋರಬಹುದು ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಸಂಭಾವ್ಯ ತಂಡ


ಅಮೆರಿಕ: ಸ್ಟೀವನ್ ಟೇಲರ್, ಮೊನಾಂಕ್ ಪಟೇಲ್ (ನಾಯಕ), ಆಂಡ್ರೀಸ್ ಗೌಸ್, ಆರನ್ ಜೋನ್ಸ್, ನಿತೀಶ್ ಕುಮಾರ್, ಕೋರಿ ಆಂಡರ್ಸನ್, ಹರ್ಮೀತ್ ಸಿಂಗ್, ಜಸ್ದೀಪ್ ಸಿಂಗ್, ನಾಸ್ತುಷ್‌ ಕೆಂಜಿಗೆ, ಸೌರಭ್ ನೇತ್ರವಲ್ಕರ್, ಅಲಿ ಖಾನ್.

ದಕ್ಷಿಣ ಆಫ್ರಿಕಾ: ಕ್ವಿಂಟನ್ ಡಿ ಕಾಕ್ (ವಿಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಆನ್ರಿಚ್ ನೋರ್ಜೆ, ಒಟ್ನೀಲ್ ಬಾರ್ಟ್‌ಮನ್.

Exit mobile version