Site icon Vistara News

Sachin Tendulkar Birthday: ಈ ಬಾರಿ ವಿಶೇಷವಾಗಿ ಹುಟ್ಟುಹಬ್ಬ ಆಚರಿಸಿಕೊಂಡ ಸಚಿನ್‌ ತೆಂಡೂಲ್ಕರ್‌; ವಿಡಿಯೊ ವೈರಲ್​

Sachin Tendulkar Birthday

ಮುಂಬಯಿ: ವಿಶ್ವ ಕಂಡ ಶ್ರೇಷ್ಠ ಬ್ಯಾಟ್ಸ್‌ಮನ್‌, ಲೆಜೆಂಡರಿ ಕ್ರಿಕೆಟರ್‌, ಕ್ರಿಕೆಟ್‌ ದೇವರು ಎಂದೆಲ್ಲ ನಾಮಾಂಕಿತರಾದ ಸಚಿನ್‌ ತೆಂಡೂಲ್ಕರ್‌(Sachin Tendulkar Birthday) ಅವರು ಎಪ್ರಿಲ್​ 24ರಂದು ತಮ್ಮ 51ನೇ ವರ್ಷದ ಹುಟ್ಟು ಹಬ್ಬವನ್ನು ‘ಸಚಿನ್​ ತೆಂಡೂಲ್ಕರ್​ ಫೌಂಡೇಶನ್‌’ನ(sachin tendulkar foundation) ಮಕ್ಕಳೊಂದಿಗೆ ಆಚರಿಸಿದ್ದರು. ಇದರ ವಿಡಿಯೊವನ್ನು ಸಚಿನ್(Sachin Tendulkar)​ ತಮ್ಮ ಇನ್​ಸ್ಟಾಗ್ರಾಮ್​ ಮತ್ತು ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡಿದ್ದಾರೆ. ಸಚಿನ್​ ಅವರಿಗೆ ಕೋಟ್ಯಂತರ ಕ್ರಿಕೆಟ್‌ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಹರಸಿ ಹಾರೈಸಿದ್ದಾರೆ.

ಸಚಿನ್​ ಅವರು ‘ಸಚಿನ್​ ತೆಂಡೂಲ್ಕರ್ ಫೌಂಡೇಶನ್‌’ ಎನ್ನುವ ಹೆಸರಿನ ಪ್ರತಿಷ್ಠಾನದ ಮೂಲಕ ಬಡ ಮಕ್ಕಳಿಗೆ ಶಿಕ್ಷಣ, ಕ್ರಿಡೆ ಮತ್ತು ವೈದ್ಯಕೀಯ ನೆರವನ್ನು ನೀಡುತ್ತಿದ್ದಾರೆ. ಸಮಾಜಮುಖಿ ಕಾರ್ಯವನ್ನು ಮಾಡುವ ಮೂಲಕ ಅನೇಕ ಬಡ ಮಕ್ಕಳ ಕನಸನ್ನು ನನಸು ಮಾಡುವ ಕಾರ್ಯ ಮಾಡುತ್ತಿದ್ದಾರೆ. ಈ ಪ್ರತಿಷ್ಠಾನವು ಮಕ್ಕಳಿಗೆ ಸಮಾನ ಅವಕಾಶವನ್ನು ನೀಡಲು ಮತ್ತು ಉತ್ತಮ ಜಗತ್ತನ್ನು ಸೃಷ್ಟಿಸಲು ಸಹಾಯ ಮಾಡುತ್ತದೆ.

ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಈ ಫೌಂಡೇಶನ್​ನ ಮಕ್ಕಳೊಂದಿದೆ ಕೆಲ ಕಾಲ ಫುಟ್ಬಾಲ್​ ಆಡಿ, ಊಟ ಮಾಡುವ ಜತೆಗೆ ಕೇಕ್​ ಕತ್ತರಿಸಿ ಆಚರಿಸಿದ್ದಾರೆ. ಬಳಿಕ ಮಕ್ಕಳಿಗೆ ವಿಶೇಷವಾಗಿ ಹಾರೈಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವಂತೆ ಕಿವಿ ಮಾತು ಹೇಳಿದ್ದಾರೆ.

ಇದನ್ನೂ ಓದಿ Sachin Tendulkar : ಕಾಶ್ಮೀರದ ಬಾಲಕಿಯ ಕ್ರಿಕೆಟ್​ ಪ್ರೀತಿ ಸಚಿನ್ ಫಿದಾ; ಇಲ್ಲಿದೆ ವಿಡಿಯೊ

​ಕಳೆದ ವರ್ಷ ಸಚಿನ್​ ಅವರು ತಮ್ಮ 50ನೇ ವರ್ಷದ ಜನ್ಮ ದಿನಾಚರಣೆಯನ್ನು ತಮ್ಮ ಕುಟುಂಬದೊಂದಿಗೆ ಗೋವಾದಲ್ಲಿ ಆಚರಿಸಿದ್ದರು. ಐಷಾರಾಮಿ ಜೀವನಶೈಲಿಗೆ ಹೆಸರುವಾಸಿಯಾದ ಸಚಿನ್​ ಅವರು ತಮ್ಮ ಹುಟ್ಟು ಹಬ್ಬವನ್ನು ಮಾತ್ರ ಹಳ್ಳಿ ಸೊಗಡಿನಲ್ಲಿ ಆಚರಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊವನ್ನು ಹಂಚಿಕೊಂಚಿಕೊಂಡಿದ್ದರು.

2020ರಲ್ಲಿ ಹುಟ್ಟುಹಬ್ಬ ಆಚರಿಸದ ಸಚಿನ್​!

ಪ್ರತಿ ವರ್ಷವೂ ಸಂಭ್ರಮದೊಂದಿಗೆ ಹುಟ್ಟು ಹಬ್ಬ ಆಚರಿಸುತ್ತಿದ್ದ ಸಚಿನ್​ 2020ರಲ್ಲಿ ತಮ್ಮ 47ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿರಲಿಲ್ಲ. ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದ ಕೋವಿಡ್​ ಸಂಕಷ್ಟದಲ್ಲಿ ಸೇವೆ ಸಲ್ಲಿಸಿದ್ದ ಆರೋಗ್ಯ ಸೈನಿಕರಿಗೆ ಗೌರವ ಕೊಡುವ ನಿಟ್ಟಿನಲ್ಲಿ ಅವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸಿರಲಿಲ್ಲ. ಮನೆಯಲ್ಲಿಯೇ ತಾಯಿ ಕಾಲಿಗೆ ಬಿದ್ದು ಆಶೀರ್ವಾದ ಪಡೆದಿದ್ದರು.

24 ವರ್ಷಗಳ ಕ್ರಿಕೆಟ್‌ ಬಾಳ್ವೆಯಲ್ಲಿ 664 ಪಂದ್ಯ, 34,357 ರನ್‌, 201 ವಿಕೆಟ್‌, 100 ಅಂತಾರಾಷ್ಟ್ರೀಯ ಶತಕ, 164 ಅರ್ಧ ಶತಕ, ಲೆಕ್ಕವಿಲ್ಲದಷ್ಟು ದಾಖಲೆಗಳ ಸರದಾರ, ದೇಶದ ಶ್ರೇಷ್ಠ ಗೌರವ ಭಾರತ ರತ್ನ, ಪದ್ಮ ಪ್ರಶಸ್ತಿಗಳ ಒಡೆಯ, ರಾಜೀವ್‌ ಗಾಂಧಿ ಖೇಲ್‌ರತ್ನ ಪ್ರಶಸ್ತಿಗಳಿಂದೆಲ್ಲ ಪುರಸ್ಕೃತರಾಗಿರುವ ಸಚಿನ್‌ ಸಾಧನೆ ನಿಜಕ್ಕೂ ಒಂದು ಅದ್ಭುತವೇ ಸರಿ. ಕ್ರಿಕೆಟ್​ ಬಾಳ್ವೆಯ ಆರಂಭದಿಂದ ಹಿಡಿದು ಕಡೇಯ ದಿನದವರೆಗೂ ಯಾವುದೇ ವಿವಾದವಿಲ್ಲದೆ ಸವ್ಯಸಾಚಿಯಾಗಿದ್ದ ಸಚಿನ್​ ಎಲ್ಲ ಕ್ರಿಕೆಟ್​ ಆಟಗಾರರಿಗೂ ಸ್ಫೂರ್ತಿಯಾಗಿದ್ದಾರೆ.

Exit mobile version