ಮುಂಬಯಿ: ಭಾರತದ ಕ್ರಿಕೆಟ್ ಕ್ಷೇತ್ರದ ದಿಗ್ಗಜ ಹಾಗೂ ಬ್ಯಾಟಿಂಗ್ ಐಕಾನ್ ಸಚಿನ್ ತೆಂಡೂಲ್ಕರ್ (Sachin Tendulkar ) ಇತ್ತೀಚೆಗೆ ಭಾರತದ ಮಾರುಕಟ್ಟೆಗೆ ಬಿಡುಗಡೆಯಾದ ಲ್ಯಾಂಬೊರ್ಗಿನಿ ಉರುಸ್ ಎಸ್ ಕಾರನ್ನು ಖರೀದಿಸಿದ್ದಾರೆ. ಇದರೊಂದಿಗೆ ಮತ್ತೊಂದು ಐಷಾರಾಮಿ ವಾಹನಗಳ ಸಂಗ್ರಹಕ್ಕೆ ಇನ್ನೊಂದು ದುಬಾರಿ ಕಾರೊಂದು ಸೇರ್ಪಡೆಗೊಂಡಿದೆ. ಲ್ಯಾಂಬೊರ್ಗಿನಿ ಕಂಪನಿಯು ಎಸ್ ವೇರಿಯೆಂಟ್ನ ಕಾರನ್ನು ಇತ್ತೀಚೆಗೆ ಭಾರತೀಯ ಮಾರುಕಟ್ಟೆ 4.18 ಕೋಟಿ ರೂ.ಗಳ ಬೆಲೆಯೊಂದಿಗೆ ಬಿಡುಗಡೆ ಮಾಡಿತ್ತು. ಇದು ಲ್ಯಾಂಬೊರ್ಗಿನಿ ಪರ್ಫಾರ್ಮೆಂಟ್ ವೇರಿಯೆಂಟ್ಗಿಂತ ಸ್ವಲ್ಪ ಅಗ್ಗ ಬೆಲೆ ಕಾರು.
ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್ ತಮ್ಮ ಆಟದ ದಿನಗಳಲ್ಲಿ ಬ್ಯಾಟಿಂಗ್ ಮೂಲಕ ಜನರ ಆಕರ್ಷಣೆಗೆ ಕಾರಣರಾಗಿದ್ದರು. ಇದೇ ವೇಳೆ ಅವರು ತಮ್ಮ ಐಷಾರಾಮಿ ಕಾರುಗಳ ಮೇಲಿನ ಪ್ರೀತಿಯಿಂದಲೂ ಸುದ್ದಿಯಲ್ಲಿದ್ದರು. ಬ್ಯಾಟಿಂಗ್ ಮಾಂತ್ರಿಕ ಅತ್ಯಂತ ಸೌಮ್ಯ ಸ್ವಭಾವ ಹೊಂದಿದ್ದು ತಮ್ಮ ಖ್ಯಾತಿ ಮತ್ತು ಜನಪ್ರಿಯತೆಯನ್ನು ಮೀರಿ ಎಲ್ಲರೊಂದಿಗೆ ಒಂದಾಗುತ್ತಿದ್ದರು. ಆದರೆ, ಅವರಿಗೆ ಅತ್ಯಾಧುನಿಕ ಹಾಗೂ ಐಷಾರಾಮಿ ಕಾರುಗಳ ಮೇಲೆ ಬಲುಮೋಹ. ಹೀಗಾಗಿ ಅವರ ಗ್ಯಾರೇಜ್ನಲ್ಲಿ ದುಬಾರಿ ಕಾರುಗಳ ಸರತಿ ಸಾಲೇ ಇದೆ.
ಉರುಸ್ ಪರ್ಫಾರ್ಮೆಂಟ್ ವೇರಿಯೆಂಟ್ಗಿಂತ ಸ್ವಲ್ಪ ಭಿನ್ನವಾಗಿದೆ ಉರುಸ್ ಎಸ್. ಇದು ಏರ್ ಸಸ್ಪೆನ್ಷನ್ ಸಿಸ್ಟಮ್ ನೊಂದಿಗೆ ಬರುತ್ತದೆ. ಹೀಗಾಗಿ ಸವಾರರಿಗೆ ಉತ್ತಮ ಚಾಲನಾ ಅನುಭವವನ್ನು ನೀಡುತ್ತದೆ. ಈ ಸುಧಾರಿತ ತಾಂತ್ರಿಕತೆಯು ಮೂಲಕ ಕಾರನ್ನು ಮೇಲಕ್ಕೆ ಕೆಳಕ್ಕೆ ಇಳಿಸಲು ಸಾಧ್ಯವಾಗುತ್ತದೆ. ಹೀಗಾಗಿ ಭಾರತೀಯ ರಸ್ತೆಗಳಲ್ಲಿ ಸಾಟಿಯಿಲ್ಲದ ಪ್ರಯಾಣ ಮಾಡಲು ಸಾಧ್ಯವಿದೆ. ಉರುಸ್ ಎಸ್ ಮೂರು ಆಫ್-ರೋಡ್ ಮೋಡ್ಗಳನ್ನೂ ಹೊಂದಿದೆ, ಸಬ್ಬಿಯಾ (ಸ್ಯಾಂಡ್), ನೆವ್ (ಸ್ನೋ) ಮತ್ತು ಟೆರ್ರಾ (ಮಡ್) ಎಂಬ ಮೂರು ಮೋಡ್ಗಳಿವೆ. ಇದು ನಾನಾ ಭೂಪ್ರದೇಶಗಳಿಗೆ ಸೂಕ್ತವಾಗಿದೆ.
ಬಿಎಮ್ಡಬ್ಲ್ಯು ಬ್ರಾಂಡ್ ಅಂಬಾಸಿಡರ್
ಸಚಿನ್ ತೆಂಡೂಲ್ಕರ್ ಅವರುಭಾರತದಲ್ಲಿ ಬಿಎಂಡಬ್ಲ್ಯು ಕಾರು ಕಂಪನಿಯ ಬ್ರಾಂಡ್ ಅಂಬಾಸಿಡರ್ ಆಗಿದ್ದಾರೆ. ಹೀಗಾಗಿ ಬಿಎಂಡಬ್ಲ್ಯು ಕಂಪನಿಯ ಹಲವು ಕಾರುಗಳು ಅವರ ಬಳಿ ಇವೆ. ಹೀಗಾಗಿ ಇದು ಅವರ ಮೊದಲ ಲ್ಯಾಂಬೊರ್ಗಿನಿ ಖರೀದಿ ಎನಿಸಿಕೊಂಡಿದೆ. ಅವರ ಕಾರುಗಳ ಪಟ್ಟಿಯಲ್ಲಿ ಬಿಎಂಡಬ್ಲ್ಯು 7-ಸೀರಿಸ್ ಲಿ, ಬಿಎಂಡಬ್ಲ್ಯು ಎಕ್ಸ್ 5 ಎಂ, ಬಿಎಂಡಬ್ಲ್ಯು ಐ 8 ಮತ್ತು ಬಿಎಂಡಬ್ಲ್ಯು 5-ಸೀರಿಸ್ ಇತ್ತೀಚಿನ ಮಾಡೆಲ್ಗಳಿವೆ.
ಇದನ್ನೂ ಓದಿ : Sachin Tendulkar Birthday: ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಬಗೆಗಿನ ಇಂಟ್ರೆಸ್ಟಿಂಗ್ ಸ್ಟೋರಿ
ಹೈ ಎಂಡ್ ಬಿಎಂಡಬ್ಲ್ಯು ಮಾದರಿಗಳ ಹೊರತಾಗಿ, ಸಚಿನ್ ತನ್ನ ಗ್ಯಾರೇಜ್ ನಲ್ಲಿ ಪೋರ್ಷೆ 911 ಟರ್ಬೊ ಎಸ್ ಕೂಡ ಇದೆ. ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕ್ರಿಕೆಟ್ ಐಕಾನ್, ಏಳು ಬಾರಿ ಎಫ್ 1 ವಿಶ್ವ ಚಾಂಪಿಯನ್ ಮೈಕೆಲ್ ಶೂಮಾಕರ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದರು. ಶುಮಾಕರ್ ಅವರು ಫೆರಾರಿ 360 ಮೊಡೆನಾ ಕಾರನ್ನು ಉಡುಗೊರೆಯಾಗಿ ನೀಡಿದ್ದರು. ನಿಸ್ಸಾನ್ ಜಿಟಿ-ಆರ್ ಇಗೊಯಿಸ್ಟ್ ಅನ್ನು ಸಹ ಹೊಂದಿದ್ದರು. ಇಗೊಯಿಸ್ಟ್ ನಿಸ್ಸಾನ್ ಕಂಪನಿಯ ವಿಶೇಷ ಶ್ರೇಣಿಯ ಕಾರು. ಏಕೆಂದರೆ ಅಂತಹ 43 ಕಾರುಗಳನ್ನು ಮಾತ್ರ ನಿಸ್ಸಾನ್ ನಿರ್ಮಿಸಿದೆ.