ಮುಂಬಯಿ: ಪ್ರೇಕ್ಷಕರ ಮನರಂಜನೆಯನ್ನು ಹೆಚ್ಚಿಸುವ ಸಲುವಾಗಿ ಏಕ ದಿನ ಕ್ರಿಕೆಟ್ನಲ್ಲಿ(ODI Cricket) ಬದಲಾವಣೆ ಅಗತ್ಯ ಎಂದು ರವಿ ಶಾಸ್ತ್ರಿ (Ravi Shastri ಅವರು ಹೇಳಿಕೆ ನೀಡಿದ ಬೆನ್ನಲ್ಲೇ, ಇದೀಗ ಸಚಿನ್ ತೆಂಡೂಲ್ಕರ್(Sachin Tendulkar) ಕೂಡ ಏಕದಿನದಲ್ಲಿ ಕೆಲ ಬದಲಾವಣೆ ಅಗತ್ಯವಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಚಿನ್ ತೆಂಡೂಲ್ಕರ್ “ಪ್ರಸ್ತುತ ನಡೆಯುತ್ತಿರುವ ಏಕದಿನ ಪಂದ್ಯಗಳ ಫಲಿತಾಂಶವನ್ನು ಮೊದಲೇ ಊಹಿಸಬಹುದು. ಅದರಲ್ಲೂ 15ರಿಂದ 40 ಓವರ್ವರೆಗಿನ ಅವಧಿ ತುಂಬಾ ನೀರಸವಾಗಿರುತ್ತದೆ. ಹೀಗಾಗಿ ಏಕದಿನ ಮಾದರಿಯನ್ನು ಟೆಸ್ಟ್ ರೀತಿ ತಲಾ 25 ಓವರ್ಗಳ 2 ಇನಿಂಗ್ಸ್ ರೂಪದಲ್ಲಿ ಆಡಿಸಬೇಕು” ಎಂದು ಅವರು ಸಲಹೆ ನೀಡಿದ್ದಾರೆ.
“ಟಿ20 ಕ್ರಿಕೆಟ್ ಜಾಯಮಾನದಲ್ಲಿ ಇದೀಗ ಏಕದಿನ ಕ್ರಿಕೆಟ್ನತ್ತ ಪ್ರೇಕ್ಷಕರ ಗಮನ ಕಡಿಮೆಯಾಗಿದೆ. ಹೀಗಾಗಿ ಪ್ರೇಕ್ಷಕರನ್ನು ಆಕರ್ಷಿಸಲು ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ಕೆಲ ಬದಲಾವಣೆ ಅಗತ್ಯ” ಎಂದು ಸಚಿನ್ ಹೇಳಿದರು.
ಇದನ್ನೂ ಓದಿ Sachin Tendulkar: ಬಿಸಿಸಿಐ ಅಧ್ಯಕ್ಷರಾಗಲಿದ್ದಾರಾ ಸಚಿನ್ ತೆಂಡೂಲ್ಕರ್?
ರವಿಶಾಸ್ತ್ರಿ ಹೇಳಿದ್ದೇನು
ಏಕ ದಿನ ಕ್ರಿಕೆಟ್ ಅಳಿವಿನಂಚಿನಲ್ಲಿದ್ದು ಇದನ್ನೂ ಹೆಚ್ಚು ಆಕರ್ಷಿಸಲು ಕೆಲ ಬದಲಾವಣೆ ಮಾಡಿಕೊಳ್ಳಬೇಕು ಎಂದು ಕಳೆದ ವಾರ ರವಿಶಾಸ್ತ್ರಿ ಹೇಳಿದ್ದರು. “1983ರಲ್ಲಿ ನಾವು ವಿಶ್ವ ಕಪ್ ಗೆದ್ದಾಗ ಅದು 60 ಓವರ್ ಪಂದ್ಯವಾಗಿತ್ತು. ನಂತರ ಪ್ರೇಕ್ಷಕರ ಗಮನ ಕಡಿಮೆಯಾದ ಕಾರಣ ಇದನ್ನೂ 50 ಓವರ್ಗಳಿಗೆ ಇಳಿಸಲಾಯಿತು. ಇದೀಗ ಟಿ20 ಕ್ರಿಕೆಟ್ ಬಂದ ಬಳಿಕ ಏಕದಿನದ ಕ್ರೇಜ್ ಜನರಲ್ಲಿ ಕಡಿಮೆಯಾಗಿದೆ. ಹೀಗಾಗಿ ಸಮಯದೊಂದಿಗೆ ಸ್ವರೂಪದ ಬದಲಾವಣೆಯೂ ಮಾಡುವ ಮೂಲಕ ಏಕ ದಿನ ಕ್ರಿಕೆಟ್ ಹೆಚ್ಚು ಸ್ವಾರಸ್ಯವಾಗಲು ಇದನ್ನೂ 40 ಓವರ್ಗೆ ಇಳಿಸುವ ಅಗತ್ಯ ಇದೆ” ಎಂದು ರವಿಶಾಸ್ತ್ರಿ ಸಲಹೆ ನೀಡಿದ್ದರು.