ಮುಂಬಯಿ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್(Sachin Tendulkar) ಅವರು ತಮ್ಮ ಕುಟುಂಬದ ಜತೆ ಇತ್ತೀಚೆಗೆ ಕೀನ್ಯಾ ಪ್ರವಾಸ ಕೈಗೊಂಡಿದ್ದರು. ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸುತ್ತಾಡಿ ಎಂಜಾಯ್ ಮಾಡಿದ್ದರು. ಇದೇ ವೇಳೆ ಅವರಿಗೆ ಕೀನ್ಯಾದ(Kenya) ಮಸಾಯಿ ಮಾರಾದಲ್ಲಿ(Masai Mara) ಆದಿವಾಸಿ ಜನಾಂಗದವರು ತಮ್ಮ ಬಿಲ್ಲು ಬಾಣ, ಭರ್ಚಿಗಳಿಂದ ಗಾರ್ಡ್ ಆಫ್ ಹಾನರ್ ಮೂಲಕ ಗೌರವ ಸೂಚಿಸಿದ್ದಾರೆ. ಈ ಫೋಟೊವನ್ನು ಸಚಿನ್ಗೆ ತಮ್ಮ ಇನ್ಸ್ಟಾಗ್ರಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ವಾರ ಸಚಿನ್ ಅವರು ಕೀನ್ಯಾದ ಕಾಡುಗಳಲ್ಲಿ ಸುತ್ತಾಡಿ ಸಫಾರಿ ಮಾಡಿದ ಫೋಟೊವನ್ನು ಹಂಚಿಕೊಂಡಿದ್ದರು. ಇದೇ ವೇಳೆ ಮಸಾಯಿ ಮಾರ (Maasai Mara National Reserve) ರಾಷ್ಟ್ರೀಯ ಮೀಸಲು ಅರಣ್ಯವು ವಿಸ್ಮಯಕಾರಿ ಭೂದೃಶ್ಯಗಳು ಮತ್ತು ವನ್ಯಜೀವಿಗಳ ಜಾಗತಿಕ ಆಕರ್ಷಣೆಯ ತಾಣವಾಗಿದೆ. ಬಿಸಿಲಿನಲ್ಲಿ ಕುಟುಂಬ ಸದಸ್ಯರೊಂದಿಗೆ ಸುತ್ತಾಟ ನಡೆಸಿದ್ದು ಅದ್ಭತ ಅನುಭವ ನೀಡಿತು ಎಂದು ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿದ್ದರು.
ಮಸಾಯಿ ಮಾರಾ ಕಾಡು ಪ್ರದೇಶದಲ್ಲಿ ವಾಸವಾಗಿದ್ದ ಇಲ್ಲಿನ ಆದಿವಾಸಿ ಜನಾಂಗವು ಸಚಿನ್ ತೆಂಡೂಲ್ಕರ್ ಅವರನ್ನು ತಮ್ಮ ಆಯುಧಗಳಿಂದ ಗಾರ್ಡ್ ಆಫ್ ಹಾನರ್ ಮಾಡಿ ಗೌರವಿಸಿದ್ದಾರೆ. ಇದೇ ವೇಳೆ ಸಚಿನ್ ಅವರು ಇಲ್ಲಿನ ಜನಾಂಗದವರೊಂದಿಗೆ ಎರಡು ಹೆಜ್ಜೆ ಹಾಕಿ ನೃತ್ಯವನ್ನು ಮಾಡಿದ್ದಾರೆ. ಈ ಫೋಟೊ ವೈರಲ್(viral photo) ಆಗಿದೆ.
ಸಚಿನ್ ತೆಂಡೂಲ್ಕರ್(Sachin Tendulkar) ಅವರು ಎಪ್ರಿಲ್ 24ರಂದು 50ನೇ ವರ್ಷದ ಹುಟ್ಟು ಹಬ್ಬವನ್ನು ಗೋವಾದಲ್ಲಿ ಆಚರಿಸಿದ್ದರು. ಈ ವೇಳೆ ಅವರು ಹಳ್ಳಿ ಸೊಗಡಿನಲ್ಲಿ ಓಲೆಯಲ್ಲಿಯೇ ಅಡುಗೆ ಮಾಡಿ ಸಂಭ್ರಮಿಸಿದ್ದರು. ಪತ್ನಿ ಅಂಜಲಿ ಮತ್ತು ಮಗಳು ಸಾರಾ ತೆಂಡೂಲ್ಕರ್ ಅವರೊಂದಿಗೆ ಒಲೆಯ ಪಕ್ಕದಲ್ಲಿ ಕುಳಿತು ಸಚಿನ್ ಒಲೆ ಊದುತ್ತಿರುವ ಫೋಟೊ ವೈರಲ್ ಆಗಿತ್ತು.
ಇದನ್ನೂ ಓದಿ WTC Final 2023 : ಲೆಜೆಂಡ್ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ರೋಹಿತ್ ಶರ್ಮಾ
“ಹಳ್ಳಿ ಜೀವನವೆಂದರೆ ಬಲು ಸೊಗಸು. ಇದೇ ಕಾರಣಕ್ಕೆ ನಾನು 50ನೇ ವರ್ಷದ ಹುಟ್ಟು ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿಕೊಂಡೆ” ಎಂದು ಸಚಿನ್ ಹೇಳಿದ್ದರು.