ವಾರಣಾಸಿ: ಭಾರತ ಕ್ರಿಕೆಟ್ ತಂಡದ ಮಾಜಿ ದಿಗ್ಗಜ ಆಟಗಾರರಾದ ಸಚಿನ್ ತೆಂಡೂಲ್ಕರ್(Sachin Tendulkar), ಸುನಿಲ್ ಗವಾಸ್ಕರ್(sunil gavaskar), ಕಪಿಲ್ ದೇವ್(kapil dev), ರವಿಶಾಸ್ತ್ರಿ(ravi shastri) ಸೇರಿದಂತೆ ಪ್ರಮುಖರು ವಾರಣಾಸಿಯಲ್ಲಿ ಶನಿವಾರದಂದು ಶಂಕುಸ್ಥಾಪನೆಗೊಂಡ ಅಂತಾರಾಷ್ಟ್ರೀಯ(international cricket stadium in Varanasi) ಕ್ರಿಕೆಟ್ ಸ್ಟೇಡಿಯಂನ ಸಮಾರಂಭದಲ್ಲಿ ಭಾಗವಹಿಸಿದ್ದಾರೆ. ಇದಕ್ಕೂ ಮುನ್ನ
ಸಚಿನ್ ತೆಂಡೂಲ್ಕರ್ ಅವರು ವಾರಣಾಸಿಯ ಬಾಬಾ ಶ್ರೀ ಕಾಶಿ ವಿಶ್ವನಾಥ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆ ಸಲ್ಲಿಸಿದ ಬಳಿಕ ಸಚಿನ್ ಮತ್ತು ಇತರ ಗಣ್ಯರು ಕಾರ್ಯಕ್ರದಲ್ಲಿ ಪಾಲ್ಗೊಂಡರು ಈ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಾಜಿ ಕ್ರಿಕೆಟಿಗರನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಬರ ಮಾಡಿಕೊಂಡರು.
ಇದನ್ನೂ ಓದಿ Varanasi Stadium: ವಾರಾಣಸಿ ಕ್ರಿಕೆಟ್ ಸ್ಟೇಡಿಯಂ ಶಿವಮಯ; ಹೀಗಿರಲಿದೆ ಇದರ ವೈಭವ, ವೈಶಿಷ್ಟ್ಯ
ಮೋದಿಗೆ ಜೆರ್ಸಿ ನೀಡಿದ ಸಚಿನ್
ವಾರಾಣಸಿಯಲ್ಲಿ ನಿರ್ಮಿಸಲಾಗುತ್ತಿರುವ ಶಿವನ ಮಾದರಿಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತೀಯ ಕ್ರಿಕೆಟ್ ಮಂಡಳಿಯ ವತಿಯಿಂದ ಸಚಿನ್ ತೆಂಡೂಲ್ಕರ್ ಅವರು “ನವೋ” ಎಂದು ಬರೆದ ಒಂದು ನಂಬರ್ನ ಟೀಮ್ ಇಂಡಿಯಾ ಜೆರ್ಸಿಯನ್ನು ನೀಡಿ ಗೌರವಿಸಿದರು. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಮತ್ತು ಅಧ್ಯಕ್ಷ ರೋಜರ್ ಬಿನ್ನಿ ವಿಶೇಷ ಸಹಿ ಮಾಡಿದ ಬ್ಯಾಟ್ ಅನ್ನು ಉಡುಗೊರೆಯಾಗಿ ನೀಡಿದರು.
ಈ ಸ್ಟೇಡಿಯಂ ಸುಮಾರು 30,000 ಜನರು ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರಲಿದೆ. ಭವಿಷ್ಯದಲ್ಲಿ ಅದನ್ನು 45 ಸಾವಿರಕ್ಕೆ ಏರಿಕೆ ಮಾಡುವ ಗುರಿಯಿದೆ. ಅರ್ಧಚಂದ್ರಾಕಾರದ ಚಾವಣಿಯ ಕವರ್ಗಳು, ತ್ರಿಶೂಲದ ಆಕಾರದ ಫ್ಲಡ್ಲೈಟ್ಗಳು ಮತ್ತು ಬಿಲ್ವಪತ್ರೆ ಎಲೆ ಮತ್ತು ಢಮರುಗವನ್ನು ಹೋಲುವ ರಚನೆಗಳಂತಹ ವಿಶಿಷ್ಟ ವಿನ್ಯಾಸದ ಅಂಶಗಳನ್ನು ಈ ಸ್ಟೇಡಿಯಮ್ ಹೊಂದಿರಲಿದೆ.
ಪಂದ್ಯದ ವೇಳೆ ಮಳೆ ಬಂದರೆ ಕ್ಷಿಪ್ರವಾಗಿ ನೀರು ಹೀರಿಕೊಳ್ಳುವ, ಅತ್ಯಾಧುನಿಕ ಸೌಕರ್ಯಗಳುಳ್ಳ ಡ್ರೆಸ್ಸಿಂಗ್ ರೂಮ್‌ಗಳು, ಮೂರು ಪ್ರಾಕ್ಟೀಸ್ ಪಿಚ್‌ಗಳು ಸೇರಿ ಹಲವು ಸೌಲಭ್ಯಗಳಿವೆ. 2025ರ ಡಿಸೆಂಬರ್‌ನಲ್ಲಿ ಕ್ರೀಡಾಂಗಣಕ್ಕೆ ಚಾಲನೆ ನೀಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಕ್ರೀಡಾಂಗಣದ ವಿನ್ಯಾಸವು ಕಾಶಿಯ ಸಾರವನ್ನು ಸೆರೆಹಿಡಿಯುವ ಗುರಿಯನ್ನು ಹೊಂದಿದೆ, ಪ್ರೇಕ್ಷಕರ ಗ್ಯಾಲರಿ ವಾರಣಾಸಿಯ ಘಾಟ್ಗಳ ಮೆಟ್ಟಿಲುಗಳನ್ನು ಹೋಲುತ್ತದೆ. ಕ್ರೀಡಾಂಗಣವನ್ನು ಡಿಸೆಂಬರ್ 2025 ರೊಳಗೆ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
#WATCH | Uttar Pradesh: Former Indian cricketers Sachin Tendulkar Sunil Gavaskar and Kapil Dev, BCCI Secretary Jay Shah, Rajeev Shukla, BCCI Vice-President, offered prayers at Kashi Vishwanath temple in Varanasi
— ANI (@ANI) September 23, 2023
(Video source – PRO Vishwanath Temple) pic.twitter.com/pWc1qWmOqR
121 ಕೋಟಿ ರೂಪಾಯಿ ಮೌಲ್ಯದ ಭೂಪ್ರದೇಶದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣಕ್ಕೆ ಸುಮಾರು 330 ಕೋಟಿ ರೂಪಾಯಿ ಅಂದಾಜು ವೆಚ್ಚ ಹಾಕಲಾಗಿದೆ. ಹಿಂದೂಗಳಿಗೆ ಪರಮಪವಿತ್ರ ಕ್ಷೇತ್ರವಾಗಿರುವ ಕಾಶಿಯ ಸಮೀಪ ನಿರ್ಮಾಣವಾಗಲಿರುವ ಈ ಸ್ಟೇಡಿಯಮ್ ಅನ್ನು ಶಿವನಿಗೆ ಸಮರ್ಪಿಸಲಾಗುವುದು ಎಂದು ಬಿಸಿಸಿಐ ತಿಳಿಸಿದೆ.