Site icon Vistara News

Sachin Tendulkar : ಲೋಕಲ್ ಕ್ರಿಕೆಟ್​ ಕ್ಷೇತ್ರಕ್ಕೂ ಕಾಲಿಟ್ಟ ಸಚಿನ್ ತೆಂಡೂಲ್ಕರ್​

Sachin Tendulkar

ವಿಸ್ತಾರ ನ್ಯೂಸ್​, ಬೆಂಗಳೂರು: ಭಾರತದ ಮಾಜಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ (Sachin Tendulkar) ಲೋಕಲ್​ ಕ್ರಿಕೆಟ್​ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರೆ. ಅವರು ಇಂಡಿಯನ್ ಸ್ಟ್ರೀಟ್ ಪ್ರೀಮಿಯರ್ ಲೀಗ್ (Indian Street Premier League) ನಲ್ಲಿ ಹೂಡಿಕೆ ಮಾಡಿದ್ದಾರೆ. ಭಾರತದ ಪ್ರಮುಖ ಟೆನಿಸ್ ಬಾಲ್ ಟಿ10 ಪಂದ್ಯಾವಳಿ ಆಯೋಜನೆಗೆ ವೇದಿಕೆ ಸಜ್ಜಾಗಿದೆ. ತೆಂಡೂಲ್ಕರ್ ಅವರ ಹೂಡಿಕೆಯು ಪಂದ್ಯಾವಳಿಗೆ ಹೊಸ ಎತ್ತರಕ್ಕೆ ಬೆಳೆಯಲು ಸಹಾಯ ಮಾಡುತ್ತದೆ.

ಸಮಿತಿಯ ಸದಸ್ಯರಲ್ಲಿ ಒಬ್ಬರಾಗುವ ಮೂಲಕ ಸಚಿನ್ ತೆಂಡೂಲ್ಕರ್ ಅವರ ಹೂಡಿಕೆ ಈ ಲೀಗ್​​ನಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಹೂಡಿಕೆಯ ಕುರಿತು ತಮ್ಮ ಉತ್ಸಾಹವನ್ನು ಹಂಚಿಕೊಳ್ಳಲು ಮುಂದೆ ಬಂದಿದ್ದಾರೆ. ಟೆನಿಸ್​ ಬಾಲ್​ ಕ್ರಿಕೆಟ್​ ಲೀಗ್​ ಕ್ರಿಕೆಟ್​ನ ಆಚರಣೆ ಎಂದು ಹೇಳಿದರು.

ಐಎಸ್​ಪಿಎಲ್​ ಅನ್ನು ಕ್ರಿಕೆಟ್​ನ ನಿಜವಾದ ಸಂಭ್ರಮ ಎಂದು ಭಾವಿಸಲಾಗಿದೆ. ಐಎಸ್​ಪಿಎಲ್​ನಲ್ಲಿ ನನ್ನ ಪಾಲ್ಗೊಳ್ಳುವಿಕೆಯು ನನ್ನ ಕ್ರಿಕೆಟ್​ ಪ್ರಯಾಣದ ಆರಂಭವನ್ನು ಪ್ರತಿನಿಧಿಸುತ್ತದೆ. ಇದು ನನ್ನನ್ನು ಮತ್ತೆ ನನ್ನ ಬಾಲ್ಯದ ದಿನಕ್ಕೆ ಕರೆದೊಯ್ಯುತ್ತದೆ. ಟೆನಿಸ್ ಚೆಂಡುಗಳೊಂದಿಗೆ ಆಡುವ ಪಂದ್ಯಗಳಲ್ಲಿ ನಾನು ನನ್ನ ಕೌಶಲ್ಯಗಳನ್ನು ಹೆಚ್ಚಿಸಿದೆ. ಐಎಸ್​ಪಿಎಲ್​ ಅನೇಕ ಮಹತ್ವಾಕಾಂಕ್ಷಿ ಕ್ರಿಕೆಟ್ ಉತ್ಸಾಹಿಗಳಿಗೆ ಉತ್ತಮ ಅವಕಾಶ ನೀಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂದು ಸಚಿನ್ ತಿಳಿಸಿದ್ದಾರೆ.

ಐಎಸ್​ಪಿಎಲ್​ ಕ್ರಿಕೆಟ್​​ನ ಅತ್ಯಾಕರ್ಷಕ ಸ್ವರೂಪವಾಗಿದ್ದು ಎಲ್ಲಾ ವಯೋಮಾನದವರಲ್ಲಿ ಕ್ರಿಕೆಟ್ ಪ್ರೀತಿಯನ್ನು ಬೆಳೆಸುತ್ತದೆ. ತಮ್ಮ ಅನುಭವವನ್ನು ನೆಚ್ಚಿಕೊಳ್ಳುವುದಕ್ಕೆ ಇದೊಂದು ಅಪರೂಪದ ಅವಕಾಶ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.

ಇದನ್ನೂ ಓದಿ : Sachin Tendulkar : ಮುದ್ದೇನಹಳ್ಳಿಯಲ್ಲಿ ಕ್ರಿಕೆಟ್​ ಆಡಲಿದ್ದಾರೆ ಸಚಿನ್​, ಯುವರಾಜ್​ ಸಿಂಗ್​

ಐಎಸ್​ಪಿಎಲ್​ ದೇಶದ ಪ್ರತಿಯೊಂದು ಮೂಲೆಯಲ್ಲಿರುವ ಕ್ರಿಕೆಟ್ ಅಭಿಮಾನಿಗಳನ್ನು ತಲುಪುವ ಭರವಸೆ ಇದೆ . ಅನ್ವೇಷಣೆಯಾಗದ ಪ್ರತಿಭೆಗಳಿಗೆ ಐಎಸ್​ಪಿಎಲ್​ನಲ್ಲಿ ತಮ್ಮ ಕೌಶಲ್ಯಗಳನ್ನು ಪ್ರದರ್ಶಿಸಲು ವೇದಿಕೆ ನೀಡಲಾಗುವುದು. ಟೆನಿಸ್​ ಕ್ರಿಕೆಟ್​ ಅನ್ನು ವೃತ್ತಿಪರವಾಗಿ ಆಡುವ ಅವಕಾಶವೂ ಹೆಚ್ಚಿದೆ ಎಂದು ಅವರು ಹೇಳಿದ್ದಾರೆ.

ಲೀಗ್​ನಲ್ಲಿ ತೆಂಡೂಲ್ಕರ್ ಅವರ ಪಾಲ್ಗೊಳ್ಳುವಿಕೆ ಬಗ್ಗೆ ಸಮಿತಿ ಸದಸ್ಯ ಆಶಿಶ್ ಶೆಲಾರ್ ಸಂತಸ ವ್ಯಕ್ತಪಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರನ್ನು ಮಂಡಳಿಗೆ ಸ್ವಾಗತಿಸಲು ಲೀಗ್​ಗೆ ಸಂತಸವಿದೆ ಎಂದು ಹೇಳಿದ್ದಾರೆ.

“ಸಚಿನ್ ಸರ್ ಅವರನ್ನು ಐಎಸ್​ಪಿಎಲ್​ಗೆ ಸ್ವಾಗತಿಸಲು ನಮಗೆ ಗೌರವವಿದೆ. ಲೀಗ್​ನಲ್ಲಿ ಅವರ ಹೂಡಿಕೆ ನಂಬಿಕೆ ಹೆಚ್ಚಿಸಿದೆ. ಸಚಿನ್ ತಮ್ಮ ಉತ್ಸಾಹ ಮತ್ತು ಪರಿಣತಿಯನ್ನು ಐಎಸ್​ಪಿಎಲ್​ಗೆ ನೀಡಲಿದ್ದಾರೆ. ಲೀಗ್​ನ ದೀರ್ಘಕಾಲೀನ ಅಭಿವೃದ್ಧಿ ಮತ್ತು ಬೆಳವಣಿಗೆಯನ್ನು ಬೆಂಬಲಿಸುತ್ತಾರೆ ಎಂದು ಆಶಿಶ್ ಶೆಲಾರ್ ಹೇಳಿದ್ದಾರೆ.

ರಾಮ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಕ್ರಿಕೆಟ್ ದಿಗ್ಗಜ ಸಚಿನ್‌!

ಮುಂಬಯಿ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರ (Ram Mandir) ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಇವೆ. ಪ್ರಮುಖ ಆಯ್ದ ಗಣ್ಯರಿಗೆ ರಾಮಮಂದಿರ ಉದ್ಘಾಟನೆಯ ಆಹ್ವಾನವನ್ನು ನೀಡಲಾಗುತ್ತಿದೆ. ಇದೀಗ ಟೀಮ್​ ಇಂಡಿಯಾದ ಮಾಜಿ ಕ್ರಿಕೆಟಿಗ, ಭಾರತ ರತ್ನ ಸಚಿನ್​ ತೆಂಡೂಲ್ಕರ್(Sachin Tendulkar)​ ಅವರಿಗೂ ಆಹ್ವಾನವನ್ನು ನೀಡಲಾಗಿದೆ. ಸಚಿನ್​ ಈ ಆಹ್ವಾನವನ್ನು ಸಂತಸದಿಂದಲೇ ಸ್ವೀಕರಿಸಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 6,000ಕ್ಕೂ ಹೆಚ್ಚು ಗಣ್ಯರು ಪಾಲ್ಗೊಳ್ಳುವ ನಿರೀಕ್ಷೆಯಿದೆ. ಆಹ್ವಾನ ಸ್ವೀಕರಿಸಿದ ಸಚಿನ್​ ಕೂಡ ಈ ಸಮಾರಂಭದಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಅಧಿಕವಾಗಿದೆ.

ಸೆಪ್ಟೆಂಬರ್​ನಲ್ಲಿ ವಾರಣಾಸಿಯಲ್ಲಿ ಶಂಕುಸ್ಥಾಪನೆಗೊಂಡ ಅಂತಾರಾಷ್ಟ್ರೀಯ(international cricket stadium in Varanasi) ಕ್ರಿಕೆಟ್ ಸ್ಟೇಡಿಯಂನ ಸಮಾರಂಭದಲ್ಲಿ ಸಚಿನ್​ ತೆಂಡೂಲ್ಕರ್​ ಅವರು ಗಣ್ಯ ವ್ಯಕ್ತಿಯಾಗಿ ಕಾಣಿಸಿಕೊಂಡಿದ್ದರು. ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಗೆ ಭಾರತೀಯ ಕ್ರಿಕೆಟ್​ ಮಂಡಳಿಯ ವತಿಯಿಂದ ಸಚಿನ್​ ತೆಂಡೂಲ್ಕರ್​ ಅವರು “ನವೋ” ಎಂದು ಬರೆದ ಟೀಮ್​ ಇಂಡಿಯಾ ಜೆರ್ಸಿಯನ್ನು ನೀಡಿ ಗೌರವಿಸಿದ್ದರು. ಶಿವನ ಮಾದರಿಯಲ್ಲಿ ಈ ಸ್ಟೇಡಿಯಂ ನಿರ್ಮಾಣವಾಗುತ್ತಿದೆ.

Exit mobile version