Site icon Vistara News

Boycott Maldives : ಮಾಲ್ಡೀವ್ಸ್ ಉದ್ಧಟತನ; ಮೋದಿ ಪರ ಬ್ಯಾಟಿಂಗ್ ಮಾಡಿದ ಸಚಿನ್

Sachin Tendulkar

ನವದೆಹಲಿ: ರಜಾದಿನಗಳ ಪ್ರವಾಸಕ್ಕಾಗಿ ಭಾರತದ್ದೇ ಕರಾವಳಿ ಮತ್ತು ದ್ವೀಪಗಳಿಗೆ ಭೇಟಿ ನೀಡುವಂತೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ದೇಶದ ಜನರಿಗೆ ಸಲಹೆ ಕೊಟ್ಟಿದ್ದಾರೆ. ಅವರು ತಮ್ಮ 50ನೇ ಹುಟ್ಟುಹಬ್ಬವನ್ನು ಸಿಂಧುದುರ್ಗದಲ್ಲಿ ಕಳೆದಿದ್ದನ್ನು ಸ್ಮರಿಸಿಕೊಳ್ಳುವ ಮೂಲಕ ಈ ವಿಡಿಯೊ ಪೋಸ್ಟ್​ ಮಾಡಿದ್ದಾರೆ. ಜತೆಗೆ ತಮ್ಮ ಹುಟ್ಟುಹಬ್ಬದ ಆಚರಣೆಯ ವಿಡಿಯೊ ಮತ್ತು ಚಿತ್ರವನ್ನು ಹಂಚಿಕೊಂಡಿದ್ದಾರೆ. ಈ ಮೂಲಕ ಅವರು ಮಾಲ್ಡೀವ್ಸ್​ ಉದ್ಧಟತನದ (Boycott Maldives) ಹೇಳಿಕೆ ವಿರುದ್ಧ ಮೋದಿ ಪರ ಬ್ಯಾಟಿಂಗ್ ಮಾಡಿದ್ದಾರೆ.

ಸಚಿನ್​ ತೆಂಡೂಲ್ಕರ್ ಅವರು ಸಿಂಧುದುರ್ಗದ ಸೌಂದರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕರಾವಳಿ ಪಟ್ಟಣಗಳು ಭವ್ಯವಾಗಿದೆ ಎಂದು ಶ್ಲಾಘಿಸಿದ್ದಾರೆ.

ಸಿಂಧುದುರ್ಗದಲ್ಲಿ ನನ್ನ 50ನೇ ಹುಟ್ಟುಹಬ್ಬವನ್ನು ಆಚರಿಸಿ 250 ದಿನಗಳು ಕಳೆದಿವೆ. ಕರಾವಳಿಯ ಈ ಪಟ್ಟಣವು ನಮಗೆ ಬೇಕಾದ ಎಲ್ಲವನ್ನೂ ನೀಡಿದೆ. ಅದ್ಭುತ ಆತಿಥ್ಯದೊಂದಿಗೆ ಭವ್ಯವಾದ ಸ್ಥಳಗಳು ನೆನಪುಗಳನ್ನು ಕಟ್ಟಿಕೊಟ್ಟವು . ಭಾರತವು ಸುಂದರವಾದ ಕರಾವಳಿಗಳು ಮತ್ತು ಪ್ರಾಚೀನ ದ್ವೀಪಗಳಿಂದ ಅಲಂಕೃತಗೊಂಡಿದೆ. ನಮ್ಮ “ಅತಿಥಿ ದೇವೋ ಭವ” ತತ್ವದೊಂದಿಗೆ ನಾವು ಅನ್ವೇಷಿಸಲು ಸಾಕಷ್ಟು ಜಾಗಗಳು ಇವೆ. ನೆನಪುಗಳನ್ನು ಸೃಷ್ಟಿಸಲು ಕಾಯುತ್ತಿವೆ ” ಎಂದು ಸಚಿನ್ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾಲ್ಡೀವ್ಸ್​​ ಸಚಿವರುಗಳು ಅವಹೇಳನ ಮಾಡಿದ ಬೆನ್ನಲ್ಲಿ ಉಂಟಾದ ವಿವಾದದ ಬಳಿಕ ಸಚಿನ್​ ಈ ಪೋಸ್ಟ್​ ಹಾಕಿದ್ದಾರೆ. ಈ ಮೂಲಕ ಪ್ರಧಾನಿ ಮೋದಿ ಅವರಿಗೆ ಪರೋಕ್ಷ ಬೆಂಬಲ ನೀಡಿದ್ದಾರೆ. ಜತೆಗೆ ಪ್ರವಾಸಕ್ಕಾಗಿ ಮಾಲ್ಡೀವ್ಸ್​ಗೆ ತೆರಳದೇ ಭಾರತದ ಕಡಲ ತೀರಗಳನ್ನು ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.

ಮಾಲ್ಡೀವ್ಸ್ ಸರ್ಕಾರದ ಸಚಿವರೊಬ್ಬರು ಭಾರತವನ್ನು ಗುರಿಯಾಗಿಸಿಕೊಂಡು ಟ್ವೀಟ್ ಮಾಡಿದ್ದರು. ಬಳಿಕ ಅದು ವಿವಾದವಾಗಿ ಬಾಯ್ಕಾಟ್ ಮಾಲ್ಡೀವ್ಸ್​ ಟ್ರೆಂಡ್​ ಸೃಷ್ಟಿಯಾಯಿತು. ಬೀಚ್ ಪ್ರವಾಸೋದ್ಯಮದಲ್ಲಿ ಮಾಲ್ಡೀವ್ಸ್​ನೊಂದಿಗೆ ಸ್ಪರ್ಧಿಸಲು ಭಾರತ ಮುಂದಾಗುತ್ತಿದೆ ಎಂಬ ಅಲ್ಲಿನ ಸಚಿವರ ಹೇಳಿಕೆ ಭಾರತೀಯರ ಮನಸ್ಸಿಗೆ ಬೇಸರ ಉಂಟು ಮಾಡಿತು. ವಿವಾದ ಭುಗಿಲೆದ್ದಾಗಿನಿಂದ ಅನೇಕ ಭಾರತೀಯರು ಮಾಲ್ಡೀವ್ಸ್​​ ಪ್ರವಾಸಗಳನ್ನು ರದ್ದುಗೊಳಿಸಿದ್ದಾರೆ.

ಕ್ರಿಕೆಟಿಗರ ಅನೇಕರ ಬೆಂಬಲ

ಸಚಿನ್ ತೆಂಡೂಲ್ಕರ್ ಮಾತ್ರವಲ್ಲ, ಸುರೇಶ್ ರೈನಾ, ಇರ್ಫಾನ್ ಪಠಾಣ್ ಮತ್ತು ಆಕಾಶ್ ಚೋಪ್ರಾ ಅವರಂತಹ ಹಲವಾರು ಕ್ರಿಕೆಟಿಗರು ಮಾಲ್ಡೀವ್ಸ್ ಸರ್ಕಾರದ ಇತ್ತೀಚಿನ ‘ಇಂಡಿಯಾ ಔಟ್’ ಕಾರ್ಯತಂತ್ರದ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅಲ್ಲಿನ ಸಚಿವರ ಹೇಳಿಕೆಗಳನ್ನು ಖಂಡಿಸಿದ್ದಾರೆ

ಮಾಲ್ಡೀವ್ಸ್​ನ ಪ್ರಮುಖ ವ್ಯಕ್ತಿಗಳಿಂದ ಭಾರತೀಯರ ವಿರುದ್ಧ ದ್ವೇಷ ಮತ್ತು ಜನಾಂಗೀಯ ಟೀಕೆಗಳ ಬಗ್ಗೆ ರೈನಾ ನೋವು ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಕಡಲತೀರಗಳು ಮತ್ತು ರಜಾ ತಾಣಗಳನ್ನು ಅನ್ವೇಷಿಸುವಂತೆ ಭಾರತೀಯ ನಾಗರಿಕರಿಗೆ ಕರೆ ಕೊಟ್ಟಿದ್ದಾರೆ.

ಮಾಲ್ಡೀವ್ಸ್​​ನ ಪ್ರಮುಖ ವ್ಯಕ್ತಿಗಳು ಭಾರತೀಯರ ವಿರುದ್ಧ ದ್ವೇಷ ಮತ್ತು ಜನಾಂಗೀಯ ಟೀಕೆಗಳನ್ನು ವ್ಯಕ್ತಪಡಿಸುವ ಹೇಳಿಕೆಗಳನ್ನು ನಾನು ನೋಡಿದ್ದೇನೆ. ಅಂತಹ ನಕಾರಾತ್ಮಕತೆಗೆ ಸಾಕ್ಷಿಯಾಗುವುದು ನಿರಾಶಾದಾಯಕ ಸಂಗತಿ. ವಿಶೇಷವಾಗಿ ಭಾರತವು ಅಲ್ಲಿನ ಆರ್ಥಿಕತೆ, ಬಿಕ್ಕಟ್ಟು ನಿರ್ವಹಣೆ ಮತ್ತು ಇತರ ಅನೇಕ ಅಂಶಗಳಿಗೆ ಗಮನಾರ್ಹವಾಗಿ ಕೊಡುಗೆ ನೀಡುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Boycott Maldives ಟ್ರೆಂಡ್ ಆಗಿದ್ದೇಕೆ? ಮಾಲ್ಡೀವ್ಸ್ ಪ್ರವಾಸ ರದ್ದು ಮಾಡಿದ ಭಾರತೀಯರು!

ಮಾಲ್ಡೀವ್ಸ್ ಗೆ ಅನೇಕ ಬಾರಿ ಭೇಟಿ ನೀಡಿದ್ದೇನೆ ಮತ್ತು ಗಮ್ಯಸ್ಥಾನದ ಸೌಂದರ್ಯದ ಬಗ್ಗೆ ಯಾವಾಗಲೂ ಮೆಚ್ಚುಗೆ ವ್ಯಕ್ತಪಡಿಸಿದ್ದೇನೆ. ಆದರೆ ನಮ್ಮ ಸ್ವಾಭಿಮಾನಕ್ಕೆ ಆದ್ಯತೆ ನೀಡುವುದು ನಿರ್ಣಾಯಕ ಎಂದು ನಾನು ನಂಬುತ್ತೇನೆ. ನಮ್ಮ ಪ್ರವಾಸೋದ್ಯಮ ಬೆಂಬಲಿಸುವ ಮೂಲಕ ಒಗ್ಗೂಡೋಣ ಎಂದು ಬರೆದುಕೊಂಡಿದ್ದಾರೆ.

ಆಕಾಶ್ ಚೋಪ್ರಾ ‘ಇಂಡಿಯಾ ಔಟ್’ ಯೋಜನೆಯ ಒಂದು ಭಾಗವಾಗಿತ್ತು. ಮಾಲ್ಡೀವ್ಸ್​​ ನಮ್ಮನ್ನು ಕೆಣಕಿದೆ. , ಬುದ್ಧಿವಂತಿಕೆಯಿಂದ ಆಯ್ಕೆ ಮಾಡುವುದು ಭಾರತೀಯರಾದ ನಮಗೆ ಬಿಟ್ಟದ್ದು. ಎಂದು ಬರೆದಿದ್ದಾರೆ.

ಇರ್ಫಾನ್ ಪಠಾಣ್, “ನಾನು 15 ವರ್ಷದವನಿದ್ದಾಗಿನಿಂದ ಜಗತ್ತನ್ನು ಸುತ್ತಿದ ನಂತರ, ನಾನು ಭೇಟಿ ನೀಡುವ ಪ್ರತಿಯೊಂದು ಹೊಸ ದೇಶವು ಭಾರತೀಯ ಹೋಟೆಲ್​ಗಳು ಮತ್ತು ಪ್ರವಾಸೋದ್ಯಮ ನೀಡುವ ಅಸಾಧಾರಣ ಸೇವೆಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದೆ. ಪ್ರತಿ ದೇಶದ ಸಂಸ್ಕೃತಿಯನ್ನು ಗೌರವಿಸುವಾಗ, ನನ್ನ ತಾಯ್ನಾಡಿನ ಅಸಾಧಾರಣ ಆತಿಥ್ಯದ ಬಗ್ಗೆ ನಕಾರಾತ್ಮಕ ಟೀಕೆಗಳನ್ನು ಕೇಳುವುದು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Exit mobile version