ಕೊಲೊಂಬೊ: ಏಷ್ಯಾ ಕಪ್ 2023ರ (Asia Cup 2023) ಸೂಪರ್ 4 ಹಂತದಲ್ಲಿ ಭಾರತ ತಂಡ ಒಂದು ನಿರಾಸೆ ಎದುರಿಸಿದೆ. ಬಾಂಗ್ಲಾದೇಶ ವಿರುದ್ಧದ ಆಟುಕ್ಕುಂಟು ಲೆಕ್ಕಕ್ಕಿಲ್ಲ ಹಣಾಹಣಿಯಲ್ಲಿ ಆರು ರನ್ಗಳ ಸೋಲಿಗೆ ಒಳಗಾಗಿದೆ. ಕೊನೇ ತನಕ ರೋಚಕವಾಗಿ ನಡೆದ ಈ ಪಂದ್ಯವು ಕೊನೇ ಹಂತದಲ್ಲಿ ಬಾಂಗ್ಲಾ ಟೈಗರ್ಗಳ (Bangladesh Cricket team) ಪರವಾಯಿತು. ಆದರೆ, ಈ ಸೋಲಿನೊಂದಿಗೆ ಭಾರತ ತಂಡದ ಪಾಲಿಗೆ ಕಾಕತಾಳೀಯ ಪ್ರಸಂಗವನ್ನು ಎದುರಿಸುವಂತಾಯಿತು. ಅದೇನೆಂದರೆ ಶುಭ್ಮನ್ ಗಿಲ್ ಅವರು ಸೆಂಚುರಿ.
A fine innings calls for a finer celebration 👏💪⚡️
— BCCI (@BCCI) September 15, 2023
Keep at it, @ShubmanGill.#TeamIndia #AsiaCup2023 pic.twitter.com/3e7F4tPnA6
ಕೊಲೊಂಬೊದ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ತಂಡ ನಾಯಕ ಶಕಿಬ್ ಅಲ್ ಹಸನ್ ಅವರ 80 ರನ್ಗಳ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 265 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ 49.5 ಓವರ್ಗಳಲ್ಲಿ 259 ರನ್ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿಕೊಂಡಿತು. ಬಾಂಗ್ಲಾದೇಶ ತಂಡಕ್ಕೆ ಇದು ಏಷ್ಯಾ ಕಪ್ ಟೂರ್ನಿಯಲ್ಲಿ ಲಭಿಸಿದ ಎರಡನೇ ಸೋಲು.
ಇದನ್ನೂ ಓದಿ: Virat kohli : ತಂಡದಲ್ಲಿ ಚಾನ್ಸ್ ಇಲ್ಲ ಎಂದು ಬ್ಯಾಟ್ ಹಿಡಿದು ಹೊರ ನಡೆದ ವಿರಾಟ್ ಕೊಹ್ಲಿ!
ಬಾಂಗ್ಲಾದೇಶ ತಂಡಕ್ಕೆ ಭಾರತ ವಿರುದ್ಧ 2012ರಲ್ಲಿ ಮೊದಲ ಗೆಲುವು ಲಭಿಸಿತ್ತು. ಬಾಂಗ್ಲಾ ಆತಿಥ್ಯದಲ್ಲಿ ನಡೆದ ಆ ಟೂರ್ನಿಯಲ್ಲಿ ಭಾರತ ವಿರುದ್ಧ 4 ವಿಕೆಟ್ಗಳ ವಿಜಯ ಸಾಧಿಸಿತ್ತು. ಅಚ್ಚರಿ ಏನೆಂದರೆ ಆ ಪಂದ್ಯದಲ್ಲಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಭಾರತ ಪರ ಅವರು 147 ಎಸೆತಗಳಲ್ಲಿ 114 ರನ್ ಬಾರಿಸಿದ್ದರು. ಅಂತೆಯೇ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ 289 ರನ್ ಬಾರಿಸಿತ್ತು. ಪ್ರತಿಯಾಗಿ ಬ್ಯಾಟ್ ಮಾಡಿದ್ದ ಬಾಂಗ್ಲಾ ದೇಶ ತಂಡ ಇನ್ನೂ ನಾಲ್ಕು ಎಸೆತಗಳು ಬಾಕಿ ಇರುವಂತೆಯೇ ವಿಕೆಟ್ ನಷ್ಟಕ್ಕೆ 293 ರನ್ ಬಾರಿಸಿ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 66 ರನ್ ಬಾರಿಸಿದ್ದರು.
ಫಲಿತಾಂಶ ಪುನರಾವರ್ತನೆ
ಕೊಲೊಂಬೊದಲ್ಲಿ ಸೆಪ್ಟೆಂಬರ್ 15ರಂದು ನಡೆದ ಹಣಾಹಣಿಯಲ್ಲಿ ಮೊದಲು ಬ್ಯಾಟ್ ಮಾಡಿದ್ದ ಬಾಂಗ್ಲಾ 265 ರನ್ ಬಾರಿಸಿತ್ತು. ಆದರೆ, ಸಾಧಾರಣ ಮೊತ್ತವನ್ನು ಬೆನ್ನಟ್ಟುವಲ್ಲಿ ಭಾರತ ಸಂಪೂರ್ಣವಾಗಿ ಎಡವಿತು. ಆದರೆ, ಗಿಲ್ ಮಾತ್ರ ಏಕಾಂಗಿ ಹೋರಾಟ ಸಂಘಟಿಸಿದರು. 133 ಎಸೆತಗಳಲ್ಲಿ 121 ರನ್ ಬಾರಿಸಿದ ಅವರು ಬ್ಯಾಟಿಂಗ್ನಲ್ಲಿ ಸಂಪೂರ್ಣ ಪಾರಮ್ಯ ಮೆರೆದರು. ಆದರೆ, ರೋಹಿತ್ ಶರ್ಮಾ (0), ಕೆ. ಎಲ್ ರಾಹುಲ್ (19) ಸೂರ್ಯಕುಮಾರ್ ಯಾದವ್ (26) ಅವರಂಥ ಅನುಭವಿ ಬ್ಯಾಟರ್ಗಳ ನೆರವು ನೀಡಿದ ಕಾರಣ ಭಾರತ ತಂಡಕ್ಕೆ ಸೋಲಾಯಿತು. ಆದರೆ, ಗಿಲ್ ಮತ್ತು ಸಚಿನ್ ಶತಕ ಬಾರಿಸಿದ ಪಂದ್ಯದಲ್ಲಿಯೇ ಭಾರತ ಸೋಲು ಕಂಡಿರುವುದು ಅಚ್ಚರಿಯ ಸಂಗತಿಯಾಯಿತು.
ಗಿಲ್ ಅಮೋಘ ಸಾಧನೆ
ಬಾಂಗ್ಲಾದೇಶ ವಿರುದ್ಧದ ಏಷ್ಯಾಕಪ್ ಸೂಪರ್ 4 ಪಂದ್ಯದಲ್ಲಿ ಭಾರತದ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್ (Shubhman Gill) ಏಕದಿನ ಕ್ರಿಕೆಟ್ನಲ್ಲಿ 5ನೇ ಶತಕ ಬಾರಿಸಿದ್ದಾರೆ. ಈ ಮೂಲಕ ಅವರು ಪ್ರಸಕ್ತ ಕ್ರಿಕೆಟ್ ಕ್ಯಾಲೆಂಡರ್ ವರ್ಷದಲ್ಲಿ ಗಿಲ್ ಅದ್ಭುತ ಕ್ರಿಕೆಟ್ ಆಡುತ್ತಿದ್ದಾರೆ. ಅವರು ಕ್ರಿಕೆಟ್ನ ಎಲ್ಲಾ ಸ್ವರೂಪಗಳಲ್ಲಿ 49ಕ್ಕೂ ಹೆಚ್ಚು ಸರಾಸರಿಯಲ್ಲಿ 1500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಹಾಲಿ ಕ್ರಿಕೆಟ್ ಕ್ಯಾಲೆಂಡರ್ನಲ್ಲಿ ಒಡಿಐ ಕ್ರಿಕೆಟ್ನಲ್ಲಿ 1000 ರನ್ಗಳ ಗಡಿಯನ್ನು ತಲುಪಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗಿಲ್ ಈ ವರ್ಷ ಕೇವಲ 17 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಏಕದಿನ ಪಂದ್ಯದಲ್ಲಿ ಅವರ ಅತ್ಯಧಿಕ ಸ್ಕೋರ್ 208 ರನ್ ಆಗಿದ್ದು, ಪುರುಷರ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದ್ವಿಶತಕ ಗಳಿಸಿದ ಅತ್ಯಂತ ಕಿರಿಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 2023ರ ಜನವರಿ 18ರಂದು ನ್ಯೂಜಿಲೆಂಡ್ ವಿರುದ್ಧ ಈ ಸಾಧನೆ ಮಾಡಿದ್ದರು.