ನವದೆಹಲಿ: ಭಾರತ ಮತ್ತು ಪಾಕಿಸ್ತಾನ ತಂಡಗಳು 14ನೇ ಆವೃತ್ತಿಯ ಸ್ಯಾಫ್ ಫುಟ್‌ಬಾಲ್(SAFF Cup) ಟೂರ್ನಿಯಲ್ಲಿ ಒಂದೇ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಟೂರ್ನಿ ಬೆಂಗಳೂರಿನಲ್ಲಿ ನಡೆಯಲಿದೆ. ಉಭಯ ತಂಡಗಳು 5 ವರ್ಷಗಳ ಬಳಿಕ ಈ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿವೆ. ಜೂನ್ 21 ರಂದು ನಡೆಯುವ ಪಂದ್ಯದಲ್ಲಿ ಇತ್ತಂಡಗಳು ಸೆಣಸಾಟ ನಡೆಸಲಿವೆ. ‘ಎ’ ಗುಂಪಿನಲ್ಲಿರುವ ಭಾರತ ಮತ್ತು ಪಾಕ್ ಜತೆಗೆ ಕುವೈತ್ ಹಾಗೂ ನೇಪಾಳ ಕೂಡ ಸ್ಥಾನ ಪಡೆದಿದೆ. ಜುಲೈ 4ಕ್ಕೆ ಫೈನಲ್ ಪಂದ್ಯ ನಡೆಯಲಿದೆ.
ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಕುವೈತ್ ಮತ್ತು ನೇಪಾಳ ತಂಡಗಳು ಸೆಣಸಾಟ ನಡೆಸಲಿವೆ. ಇದೇ ದಿನ ರಾತ್ರಿ ಬದ್ಧ ಎದುರಾಳಿಗಳಾದ ಇಂಡೋ-ಪಾಕ್ ಹಣಾಹಣಿ ನಡೆಯಲಿದೆ. ಈ ಪಂದ್ಯ ಜೂನ್ 21 ರಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯ ಎಲ್ಲ ಪಂದ್ಯಗಳು ಇಲ್ಲಿಯೇ ನಡೆಯಲಿವೆ. ಜೂನ್ 21 ರಿಂದ ಜುಲೈ 4ರ ವರೆಗೆ ಟೂರ್ನಿ ಆಯೋಜನೆಗೊಂಡಿದೆ.
ಇದನ್ನೂ ಓದಿ IPL 2023: ಕೇಶವಿನ್ಯಾಸದಲ್ಲಿ ಅರಳಿದ ಆರ್ಸಿಬಿ, ವಿರಾಟ್ ಕೊಹ್ಲಿ ಚಿತ್ರ
‘ಬಿ’ ಗುಂಪಿನಲ್ಲಿ ಲೆಬನಾನ್, ಮಾಲ್ಡೀವ್ಸ್, ಬಾಂಗ್ಲಾದೇಶ ಮತ್ತು ಭೂತಾನ್ ತಂಡಗಳು ಕಾಣಿಸಿಕೊಂಡಿವೆ. ಭಾರತ ಮತ್ತು ಪಾಕಿಸ್ತಾನದ ಫುಟ್‌ಬಾಲ್ ತಂಡಗಳು ಐದು ವರ್ಷಗಳ ಬಳಿಕ ಇದೇ ಮೊದಲ ಬಾರಿ ಮುಖಾಮುಖಿಯಾಗಲಿವೆ. 2018ರ ಸ್ಯಾಫ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಕೊನೆಯದಾಗಿ ಹೋರಾಟ ನಡೆಸಿದ್ದವು. ಬಾಂಗ್ಲಾದೇಶದ ಢಾಕಾದಲ್ಲಿ ನಡೆದಿದ್ದ ಈ ಪಂದ್ಯವನ್ನು ಭಾರತ 3-1 ಗೋಲ್ಗಳ ಅಂತರದಿಂದ ಪಾಕ್ಗೆ ಸೋಲುಣಿಸಿತ್ತು. ಟೂರ್ನಿಯಲ್ಲಿ ನೆಚ್ಚಿನ ತಂಡವಾಗಿದ್ದ ಭಾರತ ಫೈನಲ್‌ನಲ್ಲಿ ಮಾಲ್ಡೀವ್ಸ್ ವಿರುದ್ಧ 2-1 ಅಂತರದಲ್ಲಿ ಮಂಡಿಯೂರಿತ್ತು.
ಬಲಾಬಲದಲ್ಲಿ ಭಾರತ ಬಲಿಷ್ಠ
ಕ್ರಿಕೆಟ್ ಇತಿಹಾಸದಂತೆ ಫುಟ್‌ಬಾಲ್ ಕ್ರೀಡೆಯಲ್ಲೂ ಭಾರತ ತಂಡ ಪಾಕಿಸ್ಥಾನ ವಿರುದ್ಧ ಉತ್ತಮ ದಾಖಲೆ ಹೊಂದಿದೆ. ಇದುವರೆಗಿನ ಫುಟ್‌ಬಾಲ್ ಟೂರ್ನಿಯಲ್ಲಿ ಉಭಯ ತಂಡಗಳು 20ಕ್ಕೂ ಅಧಿಕ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿವೆ. ಇದರಲ್ಲಿ 12ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ಮೇಲುಗೈ ಸಾಧಿಸಿದೆ. ಹೀಗಾಗಿ ಭಾರತ ಬಲಿಷ್ಠ ತಂಡವಾಗಿದೆ. ಇನ್ನು ಭಾರತ ಫಿಫಾ ರ್‍ಯಾಂಕಿಂಗ್‌ನಲ್ಲಿ 101ನೇ ಸ್ಥಾನದಲ್ಲಿದೆ. ಎದುರಾಳಿ ಪಾಕ್ ಪಾಕಿಸ್ತಾನ 195ನೇ ಸ್ಥಾನದಲ್ಲಿದೆ.
ಇದನ್ನೂ ಓದಿ IPL 2023: ಪಂಜಾಬ್ಗೆ ಬೃಹತ್ ಮೊತ್ತದ ಗುರಿ ನೀಡಿದ ಡೆಲ್ಲಿ ಕ್ಯಾಪಿಟಲ್ಸ್
8 ಸಲ ಚಾಂಪಿಯನ್ ಪಟ್ಟ
ಸ್ಯಾಫ್ ಕಪ್ ಟೂರ್ನಿಯಲ್ಲಿ ಭಾರತ ಎಂಟು ಸಲ ಚಾಂಪಿಯನ್ ಪಟ್ಟ ಅಲಂಕರಿಸಿದೆ. ನಾಲ್ಕು ಸಲ ರನ್ನರ್ಸ್ ಅಪ್ ಆಗಿದೆ. 2003 ರಲ್ಲಿ ಢಾಕಾದಲ್ಲಿ ನಡೆದಿದ್ದ ಟೂರ್ನಿಯನ್ನು ಹೊರತುಪಡಿಸಿ ಉಳಿದ ಎಲ್ಲ ಕೂಟಗಳಲ್ಲಿಯೂ ಭಾರತ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ. ಈ ಬಾರಿಯೂ ಭಾರತ ತಂಡ ಕೂಟದ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದೆ.
ಭಾರತ ಮತ್ತು ಪಾಕ್ ತಂಡಗಳು ಐದು ವರ್ಷಗಳ ಬಳಿಕ ಎದುರಾಗಲಿವೆ. 2018ರ ಸ್ಯಾಫ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಇವೆರಡು ತಂಡಗಳು ಕೊನೆಯದಾಗಿ ಪೈಪೋಟಿ ನಡೆಸಿದ್ದವು. ಢಾಕಾದಲ್ಲಿ ನಡೆದಿದ್ದ ಪಂದ್ಯವನ್ನು ಭಾರತ 3-1 ರಲ್ಲಿ ಜಯಿಸಿತ್ತು. ಆದರೆ ಫೈನಲ್‌ನಲ್ಲಿ 1-2 ರಲ್ಲಿ ಮಾಲ್ಡೀವ್ಸ್ ಎದುರು ಸೋತಿತ್ತು.
ವೇಳಾಪಟ್ಟಿ
ಜೂನ್ 21: ಕುವೈತ್- ನೇಪಾಳ (ಆರಂಭ: ಮಧ್ಯಾಹ್ನ 3.30).
ಭಾರತ- ಪಾಕಿಸ್ತಾನ (ಆರಂಭ: ರಾತ್ರಿ 7.30)
ಜೂನ್ 22: ಲೆಬನಾನ್- ಬಾಂಗ್ಲಾದೇಶ (3.30).
ಮಾಲ್ಡೀವ್ಸ್- ಭೂತಾನ್ (7.30)
ಜೂನ್ 24: ಪಾಕಿಸ್ತಾನ- ಕುವೈತ್ (3.30)
ನೇಪಾಳ-ಭಾರತ (7.30)
ಜೂನ್ 25: ಬಾಂಗ್ಲಾದೇಶ- ಮಾಲ್ಡೀವ್ಸ್ (3.30).
ಭೂತಾನ್- ಲೆಬನಾನ್ (7.20)
ಜೂನ್ 27: ನೇಪಾಳ- ಪಾಕಿಸ್ತಾನ (3.30).
ಭಾರತ- ಕುವೈತ್ (7.30)
ಜೂನ್ 28: ಲೆಬನಾನ್- ಮಾಲ್ಡೀವ್ಸ್ (3.30).
ಭೂತಾನ್- ಬಾಂಗ್ಲಾದೇಶ (7.30)
ಜುಲೈ 1: ಸೆಮಿಫೈನಲ್ ಪಂದ್ಯಗಳು, ಜುಲೈ 4: ಫೈನಲ್