Site icon Vistara News

SAFF Football: ನೇಪಾಳವನ್ನು ಮಣಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಭಾರತ

saff championship

ಬೆಂಗಳೂರು: ಸುನೀಲ್ ಚೆಟ್ರಿ(sunil chhetri) ಅವರ ಮತ್ತೊಂದು ಅದ್ಭುತ ಪ್ರದರ್ಶನದ ಮೂಲಕ ಭಾರತ ತಂಡ ನೇಪಾಳ(india vs nepal) ವಿರುದ್ಧ 2-0 ಗೋಲ್​ಗಳ ಅಂತರದಿಂದ ಗೆದ್ದು ಸ್ಯಾಫ್​ ಫುಟ್ಬಾಲ್(SAFF Football)​ ಟೂರ್ನಿಯಲ್ಲಿ ಸೆಮಿಫೈನಲ್​ ಪ್ರವೇಶಿಸಿದೆ. ಜತೆಗೆ ಆಡಿದ 2 ಪಂದ್ಯಗಳನ್ನು ಗೆದ್ದು ಕೂಟದಲ್ಲಿ ಅಜೇಯ ಓಟ ಕಾಯ್ದುಕೊಂಡಿದೆ. ಉದ್ಘಾಟನ ಪಂದ್ಯದಲ್ಲಿ ಬದ್ಧ ವೈರಿ ಪಾಕಿಸ್ತಾನ ತಂಡವನ್ನು 4-0 ಅಂತರದಿಂದ ಮಣಿಸಿತ್ತು.

ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ(Sree Kanteerava Stadium) ಶನಿವಾರ ನಡೆದ ಈ ಪಂದ್ಯದಲ್ಲಿ ಮೊದಲಾರ್ಧದಲ್ಲಿ ಉಭಯ ತಂಡಗಳ ಬಲಿಷ್ಠ ಡಿಫೆಂಡಿಂಗ್​ ಆಟದಿಂದ ಯಾವುದೇ ಗೋಲ್​ ದಾಖಲಾಗಲಿಲ್ಲ. ಆದರೆ ದ್ವಿತಿಯಾರ್ಧದಲ್ಲಿ ಆಕ್ರಮಣಕಾರಿ ಆಟಕ್ಕೆ ಮುಂದಾದ ಸುನೀಲ್​ ಚೆಟ್ರಿ 62ನೇ ನಿಮಿಷದಲ್ಲಿ ಎದುರಾಳಿ ಗೋಲ್​ ಕೀಪರ್​ ಅವರನ್ನು ವಂಚಿಸಿ ಚೆಂಡನ್ನು ಗೋಲು ಪಟ್ಟಿಗೆಗೆ ಸೇರಿಸುವಲ್ಲಿ ಯಶಸ್ವಿಯಾದರು. ಈ ಮೂಲಕ ಭಾರತಕ್ಕೆ ಗೋಲಿನ ಖಾತೆ ತೆರೆದರು. ಕಳೆದ ಪಾಕ್​ ವಿರುದ್ಧದ ಪಂದ್ಯದಲ್ಲಿಯೂ ಅವರು ತಂಡದ ಪರ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟಿದ್ದರು. ನೇಪಾಳ ವಿರುದ್ಧ ಗೋಲ್​ ಬಾರಿಸುವ ಮೂಲಕ ಚೆಟ್ರಿ ಅವರ ಅಂತಾರಾಷ್ಟ್ರೀಯ ಗೋಲ್​ಗಳ ಸಂಖ್ಯೆ 91ಕ್ಕೆ ಏರಿಕೆ ಕಂಡಿದೆ.

ನೇಪಾಳ ಸೋಲು ಕಂಡರೂ ಉತ್ತಮ ಪೈಪೋಟಿಯನ್ನೇ ನೀಡಿತು. ಪಾಕ್​ ತಂಡಕ್ಕೆ ಹೋಲಿಸಿದರೆ ನೇಪಾಳ ಅಷ್ಟು ಸುಲಭವಾಗಿ ಭಾರತಕ್ಕೆ ಬಗ್ಗಲಿಲ್ಲ. ಇದಕ್ಕೆ ಮೊದಲಾರ್ಧದಲ್ಲಿ ಗೋಲು ದಾಖಲಾಗದ್ದೇ ಉತ್ತಮ ಸಾಕ್ಷಿ. ಭಾರತ ಪರ ದ್ವಿತೀಯ ಗೋಲ್​ ಮಹೇಶ್​ ಸಿಂಗ್​ ಬಾರಿಸಿದರು. ಈ ಗೋಲ್​ ಮೊದಲ ಗೋಲ್​ ಬಾರಿಸಿದ ಕೇವಲ 8 ನಿಮಿಷದ ಅಂತರದಲ್ಲಿ ದಾಖಲಾಯಿತು.

ಇದನ್ನೂ ಓದಿ SAFF Football: ಭಾರತ-ಪಾಕ್​ ಫುಟ್ಬಾಲ್ ಪಂದ್ಯದಲ್ಲಿ ಕಿತ್ತಾಡಿದ ಆಟಗಾರರು; ವಿಡಿಯೊ ವೈರಲ್​

ಭಾರತ ತಂಡ ಮುಂದಿನ ಪಂದ್ಯದಲ್ಲಿ ಬಲಿಷ್ಠ ಕುವೈತ್​ ವಿರುದ್ಧ ಆಡಲಿದೆ. ಕುವೈತ್ ಕೂಡ ಈಗಾಗಲೇ ಸೆಮಿಫೈನಲ್​ಗೆ ಲಗ್ಗೆಯಿಟಿದೆ. ಹೀಗಾಗಿ ಇಲ್ಲಿ ಯಾರೇ ಸೋತರೂ ತಂಡಕ್ಕೆ ಹಿನ್ನಡೆಯಾಗದು. ಗೆದ್ದರೆ ಗ್ರೂಪ್​ನಲ್ಲಿ ಅಗ್ರಸ್ಥಾನ ಸಿಗಲಿದೆ. ಈ ಪಂದ್ಯ ಜೂನ್​ 27ಕ್ಕೆ ನಡೆಯಲಿದೆ.

Exit mobile version