Site icon Vistara News

Sai Sudharsan : ಸಿಧು ಸಾಲಿಗೆ ಸೇರಿದ ಎಡಗೈ ಬ್ಯಾಟರ್​ ಸಾಯಿ ಸುದರ್ಶನ್​

Sai Sudarshan

ಬೆಂಗಳೂರು: ಯುವ ಸೆನ್ಸೇಷನ್ ಸಾಯಿ ಸುದರ್ಶನ್ ಪ್ರಸ್ತುತ ನಡೆಯುತ್ತಿರುವ ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಸರಣಿಯಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಎಡಗೈ ಬ್ಯಾಟರ್​ ಪಾದಾರ್ಪಣೆ ಮಾಡಿದ ನಂತರ ತಮ್ಮ ಎರಡನೇ ಅರ್ಧಶತಕವನ್ನು ಬಾರಿಸಿದರು. ಪದಾರ್ಪಣೆ ಮಾಡಿದ ಬಳಿಕ ಸತತ ಅರ್ಧಶತಕಗಳನ್ನು ಬಾರಿಸಿದ ವಿಶಿಷ್ಟ ಸಾಧನೆಯನ್ನು ಮಾಡಿದ ಅವರು ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್​ ಸುದರ್ಶನ್ ನವಜೋತ್ ಸಿಂಗ್ ಸಿಧು ಅವರ ಸಾಲಿಗೆ ಸೇರಿಕೊಂಡರು. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ದರ್ಶನ್ 55 ರನ್ ಬಾರಿಸಿದ್ದರು.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ 2ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಋತುರಾಜ್ ಗಾಯಕ್ವಾಡ್ ಮತ್ತೊಮ್ಮೆ ವಿಫಲರಾದರು. ಅವರನ್ನು ಬರ್ಗರ್ ಔಟ್ ಮಾಡುವ ಮೊದಲು ನಾಲ್ಕು ರನ್ ಗಳಿಸಿದ್ದರು. . ತಿಲಕ್ ವರ್ಮಾ ಕೂಡ ಅಗ್ಗವಾಗಿ ಔಟಾದರು. ಅವರು ಕೂಡ ಬರ್ಗರ್​​ಗೆ ಬಲಿಯಾದರು.

ನಾಯಕ ಕೆ.ಎಲ್.ರಾಹುಲ್ ಮತ್ತು ಸಾಯಿ ಸುದರ್ಶನ್ ಉತ್ತಮ ಜೊತೆಯಾಟದ ಮೂಲಕ ತಂಡನವನ್ನು ಮುನ್ನಡೆಸಿದರು. ಆದರೆ ಲಿಜಾದ್ ವಿಲಿಯಮ್ಸ್ ಗೆ ವಿಕೆಟ್ ಒಪ್ಪಿಸುವ ಮೊದಲು 62 ರನ್​ ಮಾಡಿದ್ದರು. ಪಂದ್ಯದಲ್ಲಿ ಸುದರ್ಶನ್ 7 ಬೌಂಡರಿ ಹಾಗೂ 1 ಸಿಕ್ಸರ್ ಬಾರಿಸಿದರು. ಆದಾಗ್ಯೂ, ಎಡಗೈ ಬ್ಯಾಟರ್​​ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೊದಲ ಶತಕ ಬಾರಿಸುವ ಅವಕಾಶ ಕಳೆದುಕೊಂಡರು.

ಏಕದಿನ ಕ್ರಿಕೆಟ್​ಗೂ ಪದಾರ್ಪಣೆ ಮಾಡಿದ ಸಿಕ್ಸರ್​ ಸಿಂಗ್​ ಖ್ಯಾತಿಯ ರಿಂಕು

ಗ್ಕೆಬರ್ಹಾ: ಟಿ20 ಕ್ರಿಕೆಟ್​ನಲ್ಲಿ ಈಗಾಗಲೇ ಭಾರತ ತಂಡದ ಪರ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡದಲ್ಲಿ ಖಾಯಂ ಸ್ಥಾನ ಪಡೆದಿರುವ ಸಿಕ್ಸರ್​ ಸಿಂಗ್​ ಖ್ಯಾತಿಯ ರಿಂಕು ಸಿಂಗ್(Rinku Singh)​ ಅವರು ಇದೀಗ ಏಕದಿನ ಕ್ರಿಕೆಟ್​ನಲ್ಲಿಯೂ ತಮ್ಮ ಚಾರ್ಮ್​ ತೋರಲು ಸಿದ್ಧರಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಣ್ಕಕ್ಕಿಳಿಯುವ ಮೂಲಕ ಏಕದಿನ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ : IPL 2024 Auction : ವಿಂಡೀಸ್ ಬೌಲರ್​ಗಾಗಿ 11.50 ಕೋಟಿ ರೂ. ಖರ್ಚು ಮಾಡಿದ ಆರ್​ಸಿಬಿ!

ರಿಂಕು ಸಿಂಗ್​ ಅವರಿಗೆ ಕುಲ್​ದೀಪ್​ ಯಾದವ್​ ಅವರು ಟೀಮ್​ ಇಂಡಿಯಾದ ಕ್ಯಾಪ್ ನೀಡಿ ತಂಡಕ್ಕೆ ಸ್ವಾಗತಿಸಿದರು. ರಿಂಕು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್​ ನಡೆಸಲಿದ್ದಾರೆ. ಮೊದಲ ಪಂದ್ಯದಲ್ಲಿ ಸಾಯಿ ಸುದರ್ಶನ್ ಪದಾರ್ಪಣೆಗೈದಿದ್ದರು. ​ಭಾರತ ಪರ 12 ಟಿ20 ಪಂದ್ಯ ಆಡಿರುವ ರಿಂಕು ಸಿಂಗ್​ ಅವರು ಒಂದು ಅರ್ಧಶತಕ ಒಳಗೊಂಡಂತೆ 262 ರನ್​ ಬಾರಿಸಿದ್ದಾರೆ.

2019ರಲ್ಲೊಮ್ಮೆ ರಿಂಕು ಸಿಂಗ್‌ ಬಿಸಿಸಿಐನಿಂದ ನಿಷೇಧಕ್ಕೂ ಒಳಗಾಗಿದ್ದರು. ಕಾರಣ, ಬಿಸಿಸಿಐ ಅನುಮತಿ ಪಡೆಯದೆ ವಿದೇಶಿ ಟಿ20 ಲೀಗ್‌ ಒಂದರಲ್ಲಿ ಆಡಿದ್ದು. ಈ 3 ತಿಂಗಳ ನಿಷೇಧವನ್ನು ಅನುಭವಿಸಿದ್ದರು.

ಕಷ್ಟಗಳನ್ನು ದಾಟಿ ಬಂದ ಪ್ರತಿಭೆ

ರಿಂಕು ಅವರು ಟೀಮ್​ ಇಂಡಿಯಾದಲ್ಲಿ ಅವಕಾಶ ಪಡೆಯಲು ತುಂಬಾ ಕಷ್ಟಗಳನ್ನು ದಾಟಿ ಬಂದ ಪ್ರತಿಭೆ. ಕಡು ಬಡತನದಲ್ಲಿ ಬೆಳೆದ ಅವರು ಕೂಲಿ ಕೆಲಸವನ್ನು ಮಾಡುವ ಜತೆಗೆ ಕ್ರಿಕೆಟ್​ ಅಭ್ಯಾಸ ನಡೆಸಿ ಇಂದು ಒಂದು ಹಂತಕ್ಕೆ ಬೆಳೆದು ನಿಂತಿದ್ದಾರೆ. ಅಂಡರ್‌-16, ಕಾಲೇಜು ಮಟ್ಟದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿದ ರಿಂಕು ರಣಜಿಗೆ ಆಯ್ಕೆಯಾದರು. ಇಲ್ಲಿನ ಯಶಸ್ಸು ಐಪಿಎಲ್‌ ಬಾಗಿಲು ತೆರೆಯಿತು.

Exit mobile version