Site icon Vistara News

CWG-2022 | ಸಾಕ್ಷಿ ಮಲಿಕ್‌ಗೆ ಚಿನ್ನದ ಪದಕ, ಭಾರತದ ಚಿನ್ನದ ಪದಕಗಳ ಸಂಖ್ಯೆ 8

CWG-2022

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ಚಿನ್ನದ ಪದಕ ಗೆದ್ದಿದ್ದಾರೆ. ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಅವರಿಗೆ ಲಭಿಸುತ್ತಿರುವ ಮೊದಲ ಚಿನ್ನದ ಪದಕ ಇದಾಗಿದೆ. ೨೦೧೪ರ ಗ್ಲಾಸ್ಕೊ ಕಾಮನ್ವೆಲ್ತ್‌ನಲ್ಲಿ ಬೆಳ್ಳಿ ಗೆದ್ದಿದ್ದ ಸಾಕ್ಷಿ, ೨೦೧೮ರ ಗೋಲ್ಡ್‌ ಕೋಸ್ಟ್‌ ಕೂಟದಲ್ಲಿ ಕಂಚಿನ ಪದಕ ತಮ್ಮದಾಗಿಸಿಕೊಂಡದ್ದರು.

ಶುಕ್ರವಾರ ರಾತ್ರಿ ನಡೆದ ಮಹಿಳೆಯರ ೬೨ ಕೆ. ಜಿ ವಿಭಾಗದ ಫೈನಲ್‌ ಪಂದ್ಯದಲ್ಲಿ ಅವರು ಕೆನಡಾದ ಅನಾ ಗೊಡಿನೆಜ್ ಗೊನ್ಜಾಲೆಜ್ ವಿರುದ್ಧ ಜಯ ಸಾಧಿಸುವ ಮೂಲಕ ಸ್ವರ್ಣ ಪದಕ ತಮ್ಮದಾಗಿಸಿಕೊಂಡರು.

ಸಾಕ್ಷಿ ಬಂಗಾರ ಗೆಲ್ಲುವ ಮೂಲಕ ಭಾರತದ ಒಟ್ಟು ಬಂಗಾರದ ಪದಕಗಳ ಸಂಖ್ಯೆ ೮ಕ್ಕೇರಿದೆ. ಒಟ್ಟಾರೆ ೨೩ ಪದಕಗಳು ಲಭಿಸಿದಂತಾಗಿದ್ದು, ಅಂಕಪಟ್ಟಿಯಲ್ಲಿ ೬ನೇ ಸ್ಥಾನ ಪಡೆದುಕೊಂಡಿದೆ. ಎಂಟು ಬೆಳ್ಳಿ ಹಾಗೂ ಏಳು ಕಂಚಿನ ಪದಕಗಳು ಭಾರತದ ಖಾತೆಯಲ್ಲಿವೆ.

ಇದರೊಂದಿಗೆ ಭಾರತಕ್ಕೆ ಕುಸ್ತಿ ಸ್ಪರ್ಧೆಯಲ್ಲಿ ಎರಡನೇ ಚಿನ್ನದ ಪದಕ ಲಭಿಸಿದಂತಾಗಿದೆ. ಇದಕ್ಕಿಂತ ಮೊದಲು ಪುರುಷರ ೬೫ ಕೆ.ಜಿ ವಿಭಾಗದಲ್ಲಿ ಬಜರಂಗ್‌ ಪೂನಿಯಾ ಚಿನ್ನದ ಪದಕ ತಮ್ಮದಾಗಿಸಿಕೊಂಡಿದ್ದರು. ಮಹಿಳೆಯರ ವಿಭಾಗದಲ್ಲಿ ಸ್ಪರ್ಧಿಸಿದ್ದ ಸಾಕ್ಷಿ ಮಲಿಕ್‌ ಬೆಳ್ಳಿ ಪದಕ ಗೆದ್ದುಕೊಂಡಿದ್ದಾರೆ.

ಅದಕ್ಕಿಂತ ಮೊದಲು ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ನ ಕೆಲ್ಸಿ ಬರ್ನೆಸ್‌ ವಿರುದ್ಧ ೧೦-೦ ಅಂತರದಿಂದ ಗೆಲುವು ಸಾಧಿಸಿದ್ದರು ಭಾರತದ ಕುಸ್ತಿಪಟು.

ಇದನ್ನೂ ಓದಿ | CWG- 2022 | ಬಜರಂಗ್‌ ಪೂನಿಯಾಗೆ ಬಂಗಾರ, ಚಾಂಪಿಯನ್‌ ಪಟ್ಟ ಉಳಿಸಿಕೊಂಡ ಕುಸ್ತಿಪಟು

Exit mobile version