Site icon Vistara News

CWG- 2022 | 10 ಸಾವಿರ ಮೀಟರ್‌ ರೇಸ್‌ ವಾಕ್‌ನಲ್ಲಿ ಸಂದೀಪ್‌ಗೆ ಕಂಚು

CWG- 2022

ಬರ್ಮಿಂಗ್ಹಮ್‌ : ಭಾರತದ ಅಥ್ಲೀಟ್‌ ಸಂದೀಪ್ ಕುಮಾರ್‌ ಅವರು ಬರ್ಮಿಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನ (CWG- 2022) ಪದಕದ ಪಟ್ಟಿಗೆ ಕಂಚಿನ ಪದಕವೊಂದನ್ನು ಸೇರ್ಪಡೆಗೊಳಿಸಿದ್ದಾರೆ. ಅವರು ಪುರುಷರ ೧೦ ಸಾವಿರ ಮೀಟರ್ ರೇಸ್‌ ವಾಕ್ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಈ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಪದಕ ತಂದುಕೊಟ್ಟರು. ೩೮ ನಿಮಿಷ ೪೯ ಸೆಕೆಂಡ್‌ ೨೧ ಮಿಲಿ ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ ಅವರು ಕಂಚಿನ ಪದಕಕ್ಕೆ ಭಾಜನರಾದರು. ಈ ವೇಗವು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ.

ಕೆನಡಾದ ಎವಾನ್‌ ಡನ್‌ಫೀ ೩೮: ೩೬. ೩೭ ನಿಮಿಷಗಳಲ್ಲಿ ಗುರಿ ಮುಟ್ಟಿ ಬಂಗಾರದ ಪದಕ ಗೆದ್ದುಕೊಂಡರೆ, ಆಸ್ಟ್ರೇಲಿಯಾದ ಡೆಕ್ಲಾನ್‌ ಟಿಂಗೆ ೩೮: ೪೩.೩೩ ನಿಮಿಷಗಳಲ್ಲಿ ೧೦ ಸಾವಿರ ಮೀಟರ್‌ ದೂರ ಕ್ರಮಿಸಿ ಬೆಳ್ಳಿ ಪದಕಕ್ಕೆ ಭಾಜನರಾದರು. ಈ ಸ್ಪರ್ಧೆಯಲ್ಲಿದ್ದ ಇನ್ನೊಬ್ಬ ಭಾರತೀಯ ಸ್ಪರ್ಧಿ ಅಮಿತ್‌ ಅವರು ೪೩ : ೦೪, ೯೭ ನಿಮಿಷಗಳಲ್ಲಿ ಗುರಿ ತಲುಪಿ ೯ನೇ ಸ್ಥಾನ ಪಡೆದುಕೊಂಡರು.

ಆರಂಭದ ೫೦೦೦ ಮೀಟರ್‌ ತನಕ ಮುಂಚೂಣಿಲ್ಲಿದ್ದ ಭಾರತದ ರೇಸ್ ವಾಕರ್‌ ನಂತರದ ಒಂದು ಸಾವಿರ ಕಿಲೋ ಮೀಟರ್‌ ಅಂತರದಲ್ಲಿ ಮೂರನೇ ಸ್ಥಾನಕ್ಕೆ ಜಾರಿದರು. ನಂತರದ ೪೦೦೦ ಕಿ.ಮೀ ರೇಸ್‌ನಲ್ಲಿ ಅವರು ಹಲವು ಬಾರಿ ಎರಡನೇ ಸ್ಥಾನಕ್ಕೆ ಬರಲು ಯತ್ನಿಸಿದರೂ ಆಸ್ಟ್ರೇಲಿಯಾದ ಸ್ಪರ್ಧಿ ಅದಕ್ಕೆ ಅವಕಾಶ ನೀಡಲಿಲ್ಲ.

ಸಂದೀಪ್‌ ಅವರು ಈ ಹಿಂದೆ ೨೦೧೬ ಹಾಗೂ ೨೦೨೦ರ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. ಅಲ್ಲದೆ, ೫೦ ಹಾಗೂ ೨೦ ಕಿಲೋ ಮೀಟರ್‌ ರೇಸ್‌ವಾಕ್‌ನಲ್ಲಿ ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ.

ಸಂದೀಪ್‌ ಅವರ ಕಂಚಿನ ಪದಕದೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೪೬ಕ್ಕೆ ಏರಿಕೆಯಾಯಿತು. ಅದರಲ್ಲಿ ೧೮ ಕಂಚಿನ ಪದಕಗಳು ಸೇರಿಕೊಂಡಿವೆ. ಜತೆಗೆ ೧೬ ಬಂಗಾರ ಹಾಗೂ ೧೨ ಬೆಳ್ಳಿಯ ಪದಕಗಳು ಸೇರಿಕೊಂಡಿವೆ. ಇದರೊಂದಿಗೆ ಭಾರತ ಅಂಕಪಟ್ಟಿಯಲ್ಲಿ ಕೆನಡಾಕ್ಕಿಂತ ಒಂದು ಬಂಗಾರದ ಪದಕ ಕೊರತೆಯೊಂದಿಗೆ ೫ನೇ ಸ್ಥಾನದಲ್ಲಿದೆ.

ಇದನ್ನೂ ಓದಿ | ಟCWG- 2022 | ಟ್ರಿಪಲ್‌ ಜಂಪ್‌ನಲ್ಲಿ ಡಬಲ್‌ ಸ್ವೀಪ್‌, ಬಂಗಾರ ಗೆದ್ದ ಎಲ್ದೋಸ್‌, ಬೆಳ್ಳಿ ಗೆದ್ದ ಅಬೂಬಕರ್‌

Exit mobile version