Site icon Vistara News

Australian Open 2023: ಆಸ್ಟ್ರೇಲಿಯಾ ಓಪನ್​; ಫೈನಲ್​ ಪ್ರವೇಶಿಸಿದ ಸಾನಿಯಾ ಮಿರ್ಜಾ-ರೋಹನ್ ಬೋಪಣ್ಣ ಜೋಡಿ

Australian Open 2023

ಮೆಲ್ಬೋರ್ನ್​: ಭಾರತದ ಸಾನಿಯಾ ಮಿರ್ಜಾ-ರೋಹನ್​ ಬೋಪಣ್ಣ ಜೋಡಿ ಆಸ್ಟ್ರೇಲಿಯಾ ಓಪನ್(Australian Open 2023)​ ಟೆನಿಸ್​ ಟೂರ್ನಿಯ ಮಿಶ್ರ ಡಬಲ್ಸ್​ ವಿಭಾಗದಲ್ಲಿ ಫೈನಲ್​ ಪ್ರವೇಶಿಸಿದ್ದಾರೆ. ಈ ಮೂಲಕ ವೃತ್ತಿಜೀವನದ ಕೊನೆಯ ಗ್ರ್ಯಾನ್​ ಸ್ಲಾಮ್ ಆಡುತ್ತಿರುವ ಸಾನಿಯಾ ಮಿರ್ಜಾ(Sania Mirza-Rohan Bopanna) ಪ್ರಶಸ್ತಿಯೊಂದನ್ನು ಖಾತ್ರಿ ಪಡಿಸಿದ್ದಾರೆ.

​ಬುಧವಾರ ನಡೆದ ಮಿಶ್ರ ಡಬಲ್ಸ್​ ವಿಭಾಗದ ಸೆಮಿಫೈನಲ್ ಕಾದಾಟದಲ್ಲಿ​ ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ಮೂರನೇ ಶ್ರೇಯಾಂಕದ ದೇಸಿರೆ ಕ್ರಾವ್‌ಜಿಕ್ ಮತ್ತು ನೀಲ್ ಸ್ಕುಪ್ಸ್​ಕಿ ಅವರನ್ನು 7-6(5), 6-7(5), 10-6 ಸೆಟ್‌ಗಳಿಂದ ಸೋಲಿಸಿ ಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ.

ಪ್ರಸಕ್ತ ಟೂರ್ನಿ ಆಡಿದ ಇದುವರೆಗಿನ ಪಂದ್ಯದಲ್ಲಿ (Sania Mirza)ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ ಒಂದೂ ಸೆಟ್​ ಸೋಲದೆ ಮುನ್ನಡೆದಿತ್ತು. ಆದರೆ ಸೆಮಿ ಪಂದ್ಯದ ದ್ವಿತೀಯ ಸೆಟ್​ನಲ್ಲಿ ಸೋಲು ಕಾಣುವ ಮೂಲಕ ಈ ಅಜೇಯ ಓಟದ ದಾಖಲೆ ಪತನಗೊಂಡಿತು. ಒಟ್ಟಾರೆ ಈ ಪಂದ್ಯದಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಭಾರತದ ಜೋಡಿ ಪಂದ್ಯವನ್ನು ಗೆದ್ದು ಫೈನಲ್​ಗೆ ಲಗ್ಗೆ ಇಟ್ಟಿದೆ.

​ಪಂದ್ಯದ ಬಳಿಕ ಮಾತನಾಡಿದ ಸಾನಿಯಾ ಮಿರ್ಜಾ(Sania Mirza-Rohan Bopanna) ನನ್ನ ವೃತ್ತಿಜೀವನದ ಕೊನೆಯ ಗ್ರ್ಯಾನ್​ ಸ್ಲಾಮ್ ಟೂರ್ನಿ ಸ್ಮರಣೀಯವಾಗಲು ಇನ್ನೊಂದು ಮೆಟ್ಟಿಲು ಬಾಕಿ ಇದೆ. ಫೈನಲ್​ನಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ಹೇಳಿದರು.

ಮಂಗಳವಾರ ನಡೆಯಬೇಕಿದ್ದ ಕ್ವಾರ್ಟರ್​ ಫೈನಲ್​ನಲ್ಲಿ ಸಾನಿಯಾ-ಬೋಪಣ್ಣ ಜೋಡಿ ಜೆಲೆನಾ ಒಸ್ಟಾಪೆಂಕೊ ಮತ್ತು ಡೇವಿಡ್ ವೇಗಾ ಹೆರ್ನಾಂಡೆಜ್ ಜೋಡಿಯನ್ನು ಎದುರಿಸಬೇಕಿತ್ತು. ಆದರೆ ಗಾಯದ ಕಾರಣದಿಂದ ಒಸ್ಟಾಪೆಂಕೊ-ಹೆರ್ನಾಂಡೆಜ್ ಜೋಡಿ ಹಿಂದೆ ಸರಿಯಿತು. ವಾಕ್​ಓವರ್​ ದೊರೆತು ಸಾನಿಯಾ-ಬೋಪಣ್ಣ ನೇರವಾಗಿ ಸೆಮಿಫೈನಲ್​ ಪ್ರವೇಶಿಸಿದ್ದರು.

ಇದೀಗ ಫೈನಲ್​ಗೇರುವ ಮೂಲಕ ಸಾನಿಯಾ ಮಿರ್ಜಾ ತಮ್ಮ ವಿದಾಯದ ಗ್ರ್ಯಾನ್​ ಸ್ಲಾಮ್​ ಟೂರ್ನಿಯನ್ನು ಸ್ಮರಣೀಯಗೊಳಿಸುವ ಯೋಜನೆಯಲ್ಲಿದ್ದಾರೆ.

ಇದನ್ನೂ ಓದಿ | Australian Open; ಆಸ್ಟ್ರೇಲಿಯಾ ಓಪನ್​; ಸೆಮಿಫೈನಲ್​ ಪ್ರವೇಶಿಸಿದ ಸಾನಿಯಾ ಮಿರ್ಜಾ-ಬೋಪಣ್ಣ ಜೋಡಿ

Exit mobile version