Site icon Vistara News

Sania Mirza : ಸೋಲಿನೊಂದಿಗೆ 20 ವರ್ಷಗಳ ಟೆನಿಸ್​ ವೃತ್ತಿ ಮುಕ್ತಾಯಗೊಳಿಸಿದ ಸಾನಿಯಾ ಮಿರ್ಜಾ

Sania Mirza ends career with first round defeat in Dubai

#image_title

ದುಬೈ: ಭಾರತ ಸ್ಟಾರ್​ ಟೆನಿಸ್​ ಆಟಗಾರ್ತಿ ಸಾನಿಯಾ ಮಿರ್ಜಾ (Sania Mirza) ತಮ್ಮ 20 ವರ್ಷಗಳ ದೀರ್ಘ ಅವಧಿಯ ವೃತ್ತಿ ಟೆನಿಸ್​ ಅನ್ನು ಸೋಲಿನೊಂದಿಗೆ ಕೊನೆಗೊಳಿಸಿದ್ದಾರೆ. ಫೆಬ್ರವರಿ 21ರಂದು ನಡೆದ ಡಬ್ಲ್ಯುಟಿಎ ದುಬೈ ಡ್ಯೂಟಿ ಫ್ರೀ ಚಾಂಪಿಯನ್​ಷಿಪ್​ನ ಮಹಿಳೆಯರ ಡಬಲ್ಸ್​ನಲ್ಲಿ ಅಮೆರಿಕದ ಜತೆಗಾರ್ತಿ ಮ್ಯಾಡಿಸನ್​ ಕೀಸ್​ ಅವರೊಂದಿಗೆ ಕಣಕ್ಕಿಳಿದ ಸಾನಿಯಾ ಮಿರ್ಜಾ, ರಷ್ಯಾದ ಜೋಡಿ ವೆರ್ನೊಕಿಯಾ ಕುಡೆರ್​ಮೆಟೋವಾ ಮತ್ತು ಲ್ಯೂಡ್​ಮಿಲಾ ಸ್ಯಾಮ್ಸೊನೊವಾವ ವಿರುದ್ಧ 46,0-6 ನೇರ ಸೆಟ್​ಗಳಿಂದ ಸೋಲು ಕಂಡರು.

ಕೊನೇ ಪಂದ್ಯವಾಡಿದ ಸಾನಿಯಾ ಅವರ ವಿಡಿಯೊ

25 ವರ್ಷದ ವೆರೋನಿಕಾ ಸಿಂಗಲ್ಸ್​ನಲ್ಲಿ 11ನೇ ರ್ಯಾಂಕ್​ ಹೊಂದಿದ್ದು ಡಬಲ್ಸ್​ನಲ್ಲಿ ಐದನೇ ರ್ಯಾಂಕ್​ ಪಡೆದುಕೊಂಡಿದ್ದಾರೆ. ಲ್ಯುಡಿಮಿಲಾ ಡಬಲ್ಸ್​ನಲ್ಲಿ 13ನೇ ರ್ಯಾಂಕ್​ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: WPL 2023: ಆರ್​ಸಿಬಿ ತಂಡಕ್ಕೆ ಸಾನಿಯಾ ಮಿರ್ಜಾ ಮೆಂಟರ್​

36 ವರ್ಷದ ಸಾನಿಯಾ ಮಿರ್ಜಾ 2003ರಲ್ಲಿ ಸ್ಪರ್ಧಾತ್ಮಕ ಟೆನಿಸ್​ಗೆ ಇಳಿದಿದ್ದರು. ಆ ಬಳಿಕ ಅವರು ಆರು ಗ್ರ್ಯಾಂಡ್​ ಸ್ಲಾಮ್​ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅದರಲ್ಲಿ ಮೂರು ಸ್ವಿಜರ್ಲೆಂಡ್​ನ ಮಾರ್ಟಿನಾ ಹಿಂಗಿಸ್​ ಜತೆ ಗೆದ್ದಿದ್ದಾರೆ. ಅದೇ ರೀತಿ ಮಹೇಂಶ್​ ಭೂಪತಿ ಜತೆ 2009ರಲ್ಲಿ ಆಸ್ಟ್ರೇಲಿಯಾ ಓಪನ್​ ಹಾಗೂ 2012ರಲ್ಲಿ ಫ್ರೆಂಚ್​ ಓಪನ್​ ಟ್ರೋಫಿ ಗೆದ್ದಿದ್ದರು. ಅದೇ ರೀತಿ ಬ್ರುನೊ ಸೋರಸ್​ ಜತೆ ಯುಎಸ್ ಓಪನ್​ ಪ್ರಶಸ್ತಿ ಗೆದ್ದುಕೊಂಡಿದ್ದರು.

Exit mobile version