ದುಬೈ: 2 ದಿನಗಳ ಹಿಂದಷ್ಟೇ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ(Sania Mirza) ಮತ್ತು ಟೀಮ್ ಇಂಡಿಯಾ ಕ್ರಿಕಟಿಗ ಮೊಹಮ್ಮದ್ ಶಮಿ(Mohammed Shami) ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಆದರೆ ಸಾನಿಯಾ ತಂದೆ ಇದು ಸುಳ್ಳು ಸುದ್ದಿ. ಇದೆಲ್ಲವೂ ಮೂರ್ಖತನ, ಅವಳು ಶಮಿಯನ್ನೂ ಭೇಟಿಯೂ ಮಾಡಿಲ್ಲ ಎಂದು ಇಮ್ರಾನ್ ಮಿರ್ಜಾ ಹೇಳುವ ಮೂಲಕ ಈ ಸುದ್ದಿಯನ್ನು ಅಲ್ಲಗಳೆದಿದ್ದರು. ಆದರೆ, ಇದೀಗ ಸಾಮಿಯಾ ಮಿರ್ಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಾಕಿದ ಸ್ಟೋರಿಯನ್ನು ಗಮನಿಸುವಾಗ ಅಭಿಮಾನಿಗಳ ಅನುಮಾನ ನಿಜವಾಗುವ ಸಾಧ್ಯತೆಯೊಂದು ಕಂಡುಬಂದಿದೆ.
ಶಮಿ ಜತೆ ಸಾನಿಯ ಮದುವೆಯಾಗಲಿದ್ದಾರೆ ಎಂಬ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಾನಿಯಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಅಭಿಮಾನಿಗಳಿಗೆ ‘ಸಬರ್ ಕರೋ ಆಲ್‌ವೇಸ್ ಸಬರ್ ಕರೋ…'(ಯಾವಾಗಲೂ ಕೊಂಚ ತಾಳ್ಮೆಯಿಂದ ಇರಿ) ಎಂದು ಬರೆದುಕೊಂಡಿದ್ದಾರೆ. ಅವರ ಈ ಮಾರ್ಮಿಕ ಪೋಸ್ಟ್ ಕಂಡು ನೆಟ್ಟಿಗರು ಸಾನಿಯಾ ಅವರು ಶಮಿ ಜತೆ ಹಸೆಮಣೆ(Sania Mirza marrying Mohammed Shami) ಏರುವುದು ಪಕ್ಕಾ ಎಂದು ಹೇಳಲಾರಂಭಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಮಲಿಕ್(Shoaib Malik) ಅವರಿಗೆ ಸಾನಿಯಾ ವಿಚ್ಚೇದನ ನೀಡಿದ್ದರು. ಈ ಮೂಲಕ 13 ವರ್ಷದ ದಾಂಪತ್ಯ ಜೀವನವನ್ನು ಅಂತ್ಯಗೊಳಿಸಿದ್ದರು. ಡೀಪ್‌ಫೇಕ್(Deepfake) ಮೂಲಕ ಶಮಿ ಮತ್ತು ಸಾನಿಯಾ ಮಿರ್ಜಾ ಅವರ ಮುಖವನ್ನು ಈ ಹಿಂದೆ ಸಾನಿಯಾ ಅವರು ಮಲಿಕ್ ಜತೆಗೆ ತೆಗಿಸಿಕೊಂಡಿದ್ದ ಮದುವೆಯ ಫೋಟೊಗೆ ಫೋಟೊಗೆ ಶಮಿಯ ಮುಖವನ್ನು ಎಡಿಟ್ ಮಾಡಿ ಶಮಿ ಮತ್ತು ಸಾನಿಯಾ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೋಂಡಿದ್ದಾರೆ ಎಂದು ಟ್ವೀಟರ್ ಎಕ್ಸ್ನಲ್ಲಿ ಕಿಡಿಗೇಡಿಗಳು ವೈರಲ್ ಮಾಡಿದ್ದರು.
ಇದನ್ನೂ ಓದಿ Siddharth Mallya: ವೈವಾಹಿಕ ಜೀವನಕ್ಕೆ ಕಾಲಿರಿಸಿದ ವಿಜಯ್ ಮಲ್ಯ ಪುತ್ರ ಸಿದ್ಧಾರ್ಥ್
ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲಿಕ್ ಅವರು 2010ರಲ್ಲಿ ಮದುವೆಯಾಗಿದ್ದರು. ಹೈದರಾಬಾದ್‌ನ ತಾಜ್ ಕೃಷ್ಣಾ ಹೋಟೆಲ್‌ನಲ್ಲಿ ಹೈದರಾಬಾದ್ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಇಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಇಜಾನ್ ಎಂಬ ಪುತ್ರನಿದ್ದಾನೆ. ಮಲಿಕ್ಗೆ ವಿಚ್ಚೇದನ ನೀಡಿದ ಬಳಿಕ ಸಾನಿಯಾ ದುಬೈನಲ್ಲಿ ನೆಲೆಸಿದ್ದಾರೆ. 2023ರ ಆಸ್ಟ್ರೇಲಿಯನ್ ಓಪನ್ಲ್ಲಿ ಆಡುವ ಮೂಲಕ ಸಾನಿಯಾ ಟೆನಿಸ್ಗೆ ವಿದಾಯ ಹೇಳಿದ್ದರು. ರೋಹನ್ ಬೋಪಣ್ಣ ಜತೆ ಮಿಶ್ರ ಡಬಲ್ಸ್ ಆಡಿದ್ದ ಅವರು ಈ ಟೂರ್ನಿಯಲ್ಲಿ ರನ್ನರ್ ಅಪ್ ಆಗಿದ್ದರು.
2004ರ ವರ್ಷದಲ್ಲಿ ಸಾನಿಯಾ ಮಿರ್ಜಾ ವೃತ್ತಿಪರವಾದ ಟೆನಿಸ್ ಆಡಲು ಆರಂಭ ಮಾಡಿದಾಗ, ಶಾರ್ಟ್ಸ್ ಮತ್ತು ಟೀ ಶರ್ಟ್ ಹಾಕಿ ಕೋರ್ಟಿಗೆ ಇಳಿದಾಗ ಆಕೆಯ ಮೇಲೆ ಕಾಮಾಲೆ ಕಣ್ಣಿನ ಸಂಪ್ರದಾಯವಾದಿಗಳು ಫತ್ವಾ ಹೊರಡಿಸಿ ಮುಗಿಬಿದಿತ್ತು. ಅವರು ಪರ್ದಾ ಹಾಕಲು ನಿರಾಕರಣೆ ಮಾಡಿದಾಗ, ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯಬ್ ಮಲಿಕ್ ಅವರನ್ನು ಮದುವೆಯಾದಾಗ ಹಲವರು ಅವರನ್ನು ʻಪಾಕಿಸ್ಥಾನದ ಸೊಸೆ’ ಎಂದು ಮೂಗು ಮುರಿದದ್ದೂ ಇದೆ!