ಬೆಂಗಳೂರು: ನಾಯಕ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾ ಡಿಸೆಂಬರ್ 26 ರಂದು ಸೆಂಚೂರಿಯನ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ (Ind vs SA) ವಿರುದ್ಧ ಸೆಣಸುವ ಮೂಲಕ ಹೊಸ ಟೆಸ್ಟ್ ಸವಾಲನ್ನು ಪ್ರಾರಂಭಿಸಲು ಸಜ್ಜಾಗಿದೆ. ಕುತೂಹಲಕಾರಿ ಸಂಗತಿಯೆಂದರೆ, ಭಾರತೀಯ ತಂಡವು ಇದುವರೆಗೆ ಒಂದ ಬಾರಿಯೂ ಕಾಮನಬಿಲ್ಲ ರಾಷ್ಟ್ರದಲ್ಲಿ ಟೆಸ್ಟ್ ಸರಣಿ ಗೆಲ್ಲುವುದಿಲ್ಲ. ಇದುವರೆಗೆ ಎಂಟು ಪ್ರಯತ್ನಗಳಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ. 2010-11ರ ಪ್ರವಾಸದಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ 1-1ರ ಸಮಬಲ ಸಾಧಿಸಿದ್ದೇ ಇದುವರೆಗಿನ ಗರಿಷ್ಠ ಸಾಧನೆಯಾಗಿದೆ.
Preps in full swing for the Boxing Day Test 🙌#TeamIndia sharpen their fielding skills ahead of the first #SAvIND Test tomorrow in Centurion 👌👌 pic.twitter.com/SftEN2kDED
— BCCI (@BCCI) December 25, 2023
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಬಗ್ಗೆ ಭಾರತದ ಮಾಜಿ ಕೋಚ್ ಸಂಜಯ್ ಬಂಗಾರ್ ಅವರು ಮಾತನಾಡಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಉಪಖಂಡದಲ್ಲಿ ಭಾರತ ತಂಡ ಯಾಕೆ ಸರಣಿ ಗೆದ್ದಿಲ್ಲ ಎಂಬದನ್ನು ಅವರು ವಿವರಿಸಿ ಹೇಳಿದ್ದಾರೆ.
ಕಳಪೆ ದಾಖಲೆಯನ್ನು ವಿವರಿಸಿದ ಸಂಜಯ್ ಬಂಗಾರ್
ದಕ್ಷಿಣ ಆಫ್ರಿಕಾದಲ್ಲಿ ಟೀಮ್ ಇಂಡಿಯಾ ಏಕೆ ಟೆಸ್ಟ್ ಗೆದ್ದಿಲ್ಲ ಎಂದು ಮಾಜಿ ಕೋಚ್ ಸಂಜಯ್ ಬಂಗಾರ್ ವಿವರಿಸಿದ್ದಾರೆ. ಮಾಜಿ ಕ್ರಿಕೆಟಿಗನ ಪ್ರಕಾರ, ದಕ್ಷಿಣ ಆಫ್ರಿಕಾ ವಿರುದ್ಧ ಅವರ ದೇಶದಲ್ಲಿ ಸರಣಿಯನ್ನು ಗೆಲ್ಲಲು ಭಾರತದ ಅಸಮರ್ಥತೆ ಕಾರಣವಲ್ಲ ಎಂದು ಅವರು ಹೇಳಿದ್ದಾರೆ. ಭಾರತ ತಂಡದ ಕ್ರಿಕೆಟ್ ಕೌಶಲ ಅಥವಾ ಅದರ ಕೊರತೆಯಿಂದಲ್ಲ, ಬದಲಾಗಿ ದಕ್ಷಿಣ ಆಫ್ರಿಕಾದಲ್ಲಿ ಪೂರ್ಣ ಪ್ರಮಾಣದ ಟೆಸ್ಟ್ ಸರಣಿಯನ್ನು ಭಾರತ ಎಂದಿಗೂ ಆಡಿಲ್ಲ. ಅದಕ್ಕೆ ಗೆದ್ದಿಲ್ಲ ಎಂದು ಹೇಳಿದ್ದಾರೆ.
“ಭಾರತವು ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಸರಣಿಯನ್ನು ಗೆದ್ದಿಲ್ಲ ಏಕೆಂದರೆ ಅಲ್ಲಿ 2 ಅಥವಾ 3 ಪಂದ್ಯಗಳ ಟೆಸ್ಟ್ ಸರಣಿಯನ್ನು ಮಾತ್ರ ಆಡಲಾಗುತ್ತಿದೆ . ನಾಲ್ಕು ಅಥವಾ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲು ಅವಕಾಶ ಸಿಕ್ಕರೆ, ಭಾರತದ ಪ್ರದರ್ಶನದಲ್ಲಿ ಪ್ರತಿಫಲಿಸಲಿದೆ “ಎಂದು ಬಂಗಾರ್ ಹೇಳಿದರು.
ಇದನ್ನೂ ಓದಿ : ಧೋನಿ ಪರಿವಾರದ ಜತೆ ಕ್ರಿಸ್ಮಸ್ ಆಚರಿಸಿದ ಪಂತ್; ಕಾರು ಅಪಘಾತ ನೆನೆದ ಅಭಿಮಾನಿಗಳು!
ಸಂಜಯ್ ಬಂಗಾರ್ ಅವರ ಹೇಳಿಕೆಗೆ ಅನುಗುಣವಾಗಿ, ಟೀಮ್ ಇಂಡಿಯಾ 1992-93ರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಮೊದಲ ಪ್ರವಾಸದಲ್ಲಿ ಹೊರತುಪಡಿಸಿ, ಆ ಬಳಿಕ ಎರಡು ಪಂದ್ಯಗಳ ಅಥವಾ ಮೂರು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಿದೆ. ರೋಹಿತ್ ಶರ್ಮಾ ನಾಯಕತ್ವದಲ್ಲಿ ಪ್ರಸ್ತುತ ಭಾರತ ತಂಡವು ಟೆಸ್ಟ್ನಲ್ಲಿ ನಂ.1 ಐಸಿಸಿ ತಂಡ ಶ್ರೇಯಾಂಕ ಮತ್ತು 2023-25ರ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್ನಲ್ಲಿ ನಂ.1 ಸ್ಥಾನ ಹೊಂದಿದೆ. ಸರಣಿಯ ಮೊದಲ ಪಂದ್ಯ ಡಿಸೆಂಬರ್ 26 ರಿಂದ ಡಿಸೆಂಬರ್ 30 ರವರೆಗೆ ಸೆಂಚೂರಿಯನ್ ಪಾರ್ಕ್ನಲ್ಲಿ ನಡೆಯಲಿದ್ದು, ಪ್ರವಾಸವು ಜನವರಿ ಮೊದಲ ವಾರದಲ್ಲಿ ಕೇಪ್ ಟೌನ್ನಲ್ಲಿ ಕೊನೆಗೊಳ್ಳಲಿದೆ.
ಟಿ20 ವಿಶ್ವಕಪ್ ಬಗ್ಗೆ ನಗುತ್ತಲೇ ಮಹತ್ವದ ಸುಳಿವು ನೀಡಿದ ರೋಹಿತ್
ಮುಂದಿನ ವರ್ಷ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುವ ಟಿ20 ವಿಶ್ವಕಪ್ನಲ್ಲಿ(t20 world cup 2024) ತಮ್ಮ ಉಪಸ್ಥಿತಿಯ ಕುರಿತು ರೋಹಿತ್ ಶರ್ಮಾ(Rohit Sharma) ಮೊದಲ ಬಾರಿ ಪ್ರತಿಕ್ರಿಯಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ನಾಳೆ(ಮಂಗಳವಾರ)ಯಿಂದ ಆರಂಭವಾಗಲಿರುವ(South Africa vs India, 1st Test) ಬಾಕ್ಸಿಂಗ್ ಡೇ ಟೆಸ್ಟ್(boxing day test) ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ರೋಹಿತ್ ಈ ವಿಚಾರವನ್ನು ಹಂಚಿಕೊಂಡಿದ್ದಾರೆ.
ಟೆಸ್ಟ್ ಸರಣಿಯ ಕುರಿತಾದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ರೋಹಿತ್ ಶರ್ಮಾ ಅವರು ಕಳೆದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದ ಸೋಲಿನ ಕುರಿತು ಹಲವು ವಿಚಾರಗಳನ್ನು ಹಂಚಿಕೊಂಡರು. ಇದೇ ವೇಳೆ ಪತ್ರಕರ್ತರು ರೋಹಿತ್ ಬಳಿ ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ನಲ್ಲಿ ಪಾಲ್ಗೊಳ್ಳುವ ಖಚಿತತೆಯನ್ನು ಪಡೆಯುವ ನಿಟ್ಟಿನಲ್ಲಿ ಪ್ರಶ್ನೆಯನ್ನು ಕೇಳಲು ಮುಂದಾದರು. ಪತ್ರಕರ್ತರ ಹಾವ-ಭಾವ ಕಂಡು ಯಾವ ಪ್ರಶ್ನೆಯನ್ನು ಕೇಳುತ್ತಾರೆ ಎನ್ನುವುದನ್ನು ಮೊದಲೆ ಅರಿತುಕೊಂಡ ರೋಹಿತ್, ಪ್ರಶ್ನೆಗೂ ಮುನ್ನವೇ “ಮುಜೆ ಪತಾ ಹೈ ಆಪ್ ಕ್ಯಾ ಕೆಹನಾ ಚಾಹ್ರೆ ಹೋ, ಮಿಲೇಗಾ ಆಪ್ಕೋ ಜವಾಬ್ (ನೀವು ಏನು ಕೇಳಲು ಮತ್ತು ಹೇಳಲು ಪ್ರಯತ್ನಿಸುತ್ತಿದ್ದೀರಿ ಎಂದು ನನಗೆ ತಿಳಿದಿದೆ. ನಿಮಗೆ ಆದಷ್ಟು ಬೇಗ ಉತ್ತರ ಸಿಗಲಿದೆ)” ಎಂದು ನಗುತ್ತಲೇ ಉತ್ತರಿಸಿದರು. ಇದೇ ವೇಳೆ ಪತ್ರಕರ್ತರು ಕೂಡ ಜೋರಾಗಿ ನಕ್ಕಿದ್ದಾರೆ. ಈ ವಿಡಿಯೊ ವೈರಲ್ ಆಗಿದೆ.