ತಿರುವನಂತಪುರಂ: ಟೀಮ್ ಇಂಡಿಯಾದ(Team India) ಕ್ರಿಕೆಟಿಗ, ಕೇರಳ ಮೂಲದ ಸ್ಟಂಪರ್ ಸಂಜು ಸ್ಯಾಮ್ಸನ್(Sanju Samson) ಅವರು ತಮ್ಮ ತವರಿನಲ್ಲಿ ಸ್ಥಳೀಯರೊಂದಿಗೆ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಫುಟ್ಬಾಲ್ ಆಡಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಂಜು ಟೀಮ್ ಇಂಡಿಯಾದ ಅಭ್ಯಾಸದ ಜೆರ್ಸಿಯನ್ನು ತೊಟ್ಟು ತನ್ನ ಸ್ನೇಹಿತರೊಂದಿಗೆ ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಫುಟ್ಬಾಲ್ ಆಡುತ್ತಿರುವ ದೃಶ್ಯವನ್ನು ಈ ವಿಡಿಯೊದಲ್ಲಿ ಕಾಣಬಹುದಾಗಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ಪರ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ನಿರೀಕ್ಷಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಅವರಿಗೆ ಏಕದಿನ ಸರಣಿಯಿಂದ ಕೈಬಿಡಲಾಗಿತ್ತು. ಟಿ20 ವಿಶ್ವಕಪ್ ತಂಡದ ಸದ್ಯರಾಗಿದ್ದರೂ ಕೂಡ ಒಂದೇ ಒಂದು ಪಂದ್ಯ ಆಡುವ ಅವಕಾಶ ಸಿಕ್ಕಿರಲಿಲ್ಲ. ಸಂಜು ಅವರು ಬಾಸ್ಕೆಟ್ ಬಾಲ್ ಕೋರ್ಟ್ನಲ್ಲಿ ಫುಟ್ಬಾಲ್ ಆಡಿರುವ ಬಗ್ಗೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ.
ಬಡ ಮಕ್ಕಳಿಗೆ ನೆರವು
ವಿಶ್ವದ ಕ್ಯಾಶ್ ರಿಚ್ ಲೀಗ್ಗಳಲ್ಲಿ ಒಂದಾದ ಐಪಿಎಲ್ನಲ್ಲಿ ರಾಜಸ್ಥಾನ್ ರಾಯಲ್ಸ್(rajasthan royals) ಪರ ಆಡುತ್ತಿರುವ ಸಂಜು ಸ್ಯಾಮ್ಸನ್ ಅವರು ಸದ್ಯ ಗಳಿಸುತ್ತಿರುವ 15 ಕೋಟಿ ವೇತನದಲ್ಲಿ ಯುವ ಮತ್ತು ಪ್ರತಿಭಾವಂತ ಕ್ರಿಕೆಟಿಗರಿಗೆ 2 ಕೋಟಿ ನೆರವಿನ ಹಸ್ತ ಚಾಚುತ್ತಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳನ್ನು ಬೆಳಕಿಗೆ ತರುವಂತ ಕೆಲಸವನ್ನು ಮಾಡುತ್ತಿದ್ದಾರೆ. ಟೀಮ್ ಇಂಡಿಯಾದಲ್ಲಿ ತಮಗೆ ಸರಿಯಾದ ಅವಕಾಶ ಸಿಗದಿದ್ದರೂ ಯುವ ಆಟಗಾರರು ಬೆಳಕಿಗೆ ಬರುವಲ್ಲಿ ಶ್ರಮಿಸುತ್ತಿರುವ ಅವರ ಗುಣವನ್ನು ನಿಜಕ್ಕೂ ಮೆಚ್ಚಲೇ ಬೇಕು.
ಸಂಜು ಇದುವರೆಗೆ ಭಾರತ ಪರ 16 ಏಕದಿನ ಕ್ರಿಕೆಟ್ ಪಂದ್ಯಗಳನ್ನಾಡಿ 510 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ ಮತ್ತು 3 ಅರ್ಧಶತಕ ಬಾರಿಸಿದ್ದಾರೆ. 30 ಟಿ20 ಪಂದ್ಯ ಆಡಿ 444 ರನ್ ಗಳಿಸಿದ್ದಾರೆ. 2 ಅರ್ಧಶತಕ ಒಳಗೊಂಡಿದೆ. ಟೆಸ್ಟ್ ಇದುವರೆಗೂ ಆಡಿಲ್ಲ. ಹೆಚ್ಚಾಗಿ ಐಪಿಎಲ್ನಲ್ಲಿಯೇ ಆಡಿದ್ದಾರೆ. 167 ಪಂದ್ಯಗಳಿಂದ 3 ಶತಕ, 25 ಅರ್ಧಶತಕ ಒಳಗೊಂಡಂತೆ 4419 ರನ್ ಬಾರಿಸಿದ್ದಾರೆ.
ಇದನ್ನೂ ಓದಿ MS Dhoni: ಅಭಿಮಾನಿಯ ಬೈಕ್ ಮೇಲೆ ಆಟೋಗ್ರಾಫ್ ಹಾಕಿದ ಧೋನಿ; ಫೋಟೊ ವೈರಲ್
ಬೌಲಿಂಗ್ ನಡೆಸಿದ ಪಂತ್
ವಿಕೆಟ್ ಕೀಪರ್ ಕಮ್ ಬ್ಯಾಟರ್ ರಿಷಭ್ ಪಂತ್(Rishabh Pant) ಅವರು ದೆಹಲಿ ಪ್ರೀಮಿಯರ್ ಲೀಗ್ 2024 ರ(Delhi Premier League T20 2024) ಉದ್ಘಾಟನಾ ಆವೃತ್ತಿಯ ಪಂದ್ಯದಲ್ಲಿ ಬೌಲಿಂಗ್(rishabh pant bowling) ನಡೆಸುವ ಮೂಲಕ ಗಮನಸೆಳೆದಿದ್ದಾರೆ. ಪಂತ್ ಬೌಲಿಂಗ್ ನಡೆಸುವ ವಿಡಿಯೊ ವೈರಲ್(viral video) ಆಗಿದ್ದು, ಇದು ನೂತನ ಕೋಚ್ ಗೌತಮ್ ಗಂಭೀರ್(gautam gambhir) ಪ್ರಭಾವ ಎಂದು ನಟ್ಟಿಗರು ಕಮೆಂಟ್ ಮಾಡಿದ್ದಾರೆ.
ಪಂತ್ ಪಂದ್ಯದ ಅಂತಿಮ ಓವರ್ ಬೌಲಿಂಗ್ ನಡೆಸಿದರು. ಎದುರಾಳಿ ಸೌತ್ ಡೆಲ್ಲಿ ತಂಡಕ್ಕೆ 6 ಎಸೆತಗಳಲ್ಲಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಪಂತ್ ಸ್ಪಿನ್ ಬೌಲಿಂಗ್ ನಡೆಸಿದರು. ಈ ಪಂದ್ಯದಲ್ಲಿ ಪಂತ್ ತಂಡ 3 ವಿಕೆಟ್ ಅಂತರದ ಸೋಲು ಕಂಡಿತು. ಮೊದಲು ಬ್ಯಾಟಿಂಗ್ ನಡೆಸಿದ ಪಂತ್ ಸಾರಥ್ಯದ ಪುರಾಣಿ ದಿಲ್ಲಿ ಸಿಕ್ಸ್ ತಂಡ 197 ರನ್ ಬಾರಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಸೌತ್ ಡೆಲ್ಲಿ ತಂಡ 7 ವಿಕೆಟ್ಗೆ 198 ರನ್ ಬಾರಿಸಿ ಗೆಲುವು ಸಾಧಿಸಿತು.