ಮುಂಬಯಿ: ಪ್ರತಿಭಾನ್ವಿತ ಆಟಗಾರನಾದಿದ್ದರೂ ಟೀಮ್ ಇಂಡಿಯಾದಲ್ಲಿ(Team Inida) ಸರಿಯಾಗಿ ಅವಕಾಶ ನೀಡದೆ ಕಡೆಗಣಿಸಿದ್ದ ಕೇರಳದ ಯುವ ಸ್ಟಂಪರ್ ಸಂಜು ಸ್ಯಾಮ್ಸನ್(sanju samson) ಅವರನ್ನು ಐಸಿಸಿ ಏಕದಿನ ವಿಶ್ವ ಕಪ್(ICC World Cup 2023) ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಸಂಜು ಸ್ಯಾಮ್ಸನ್ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದರೂ ಅವರನ್ನು ಒಂದು ಪಂದ್ಯ ಆಡಿಸಿ ಬಳಿಕ ಬೆಂಚ್ ಕಾಯಿಸಿದ್ದೇ ಹೆಚ್ಚು. ಇದೇ ಕಾರಣಕ್ಕೆ ಬಿಸಿಸಿಐ ಮತ್ತು ತಂಡದ ಆಯ್ಕೆ ಸಮಿತಿ ವಿರುದ್ಧ ಅನೇಕ ಟೀಮ್ ಇಂಡಿಯಾ ಮಾಜಿ ಆಟಗಾರರು ಸೇರಿ ವಿದೇಶಿ ಕ್ರಿಕೆಟ್ ದಿಗ್ಗಜರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. 1983ರ ವಿಶ್ವ ಕಪ್ ವಿಜೇತ ನಾಯಕ ಕಪಿಲ್ ದೇವ್ ಕೂಡ ಸಂಜು ಪರ ಬ್ಯಾಟ್ ಬೀಸಿ ಯುವ ಆಟಗಾರನ ಕ್ರಿಕೆಟ್ ಭವಿಷ್ಯ ಹಾಳು ಮಾಡದಿರಿ ಎಂದು ಹೇಳಿದ್ದರು. ಇದೀಗ ರಿಷಭ್ ಪಂತ್(rishabh pant) ಅನುಪಸ್ಥಿತಿಯಲ್ಲಿ ವಿಶ್ವಕಪ್ ಟೂರ್ನಿಗೆ ವಿಕೆಟ್ ಕೀಪರ್ ಆಗಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.
ಮುಂಬರುವ ವೆಸ್ಟ್ ಇಂಡೀಸ್(INDvsWI) ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿಯೂ ಸಂಜು ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ. ಇಶಾನ್ ಕಿಶನ್ ಅವರು ತಂಡದಲ್ಲಿದ್ದರೂ ಅವರ ಕೀಪಿಂಗ್ ಕೌಶಲ್ಯ ಅಷ್ಟಾಗಿ ಪರಿಣಾಮಕಾರಿ ಇಲ್ಲದ ಕಾರಣ ಸಂಜು ಅವರನ್ನು ಈ ಸ್ಥಾನಕ್ಕೆ ರೆಡಿ ಮಾಡಲು ಬಿಸಿಸಿಐ ಪ್ಲ್ಯಾನ್ ಮಾಡಿದೆ. ಇದೇ ಕಾರಣಕ್ಕೆ ಅವರಿಗೆ ವಿಂಡೀಸ್ ಸರಣಿ ಅಗ್ನಿಪರೀಕ್ಷೆಯಾಗಲಿದೆ. ಒಂದೊಮ್ಮೆ ವಿಂಡೀಸ್ ಸರಣಿಯಲ್ಲಿ ಅವಕಾಶ ಸಿಕ್ಕಿ ಇಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಪಂತ್ ಆಗಮನದ ವರೆಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವುದಂತೂ ಖಚಿತ ಎನ್ನಲಡ್ಡಿಯಿಲ್ಲ. ಸಂಜು ಸ್ಯಾಮ್ಸನ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದು ಶ್ರೀಲಂಕಾ ವಿರುದ್ಧ. ಆದರೆ ಆ ಸರಣಿಯಲ್ಲಿ ಅವರು ಗಾಯಗೊಂಡು ಹೊರಗುಳಿದಿದ್ದರು.
ಇದನ್ನೂ ಓದಿ INDvsWI: ವಿಂಡೀಸ್ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್ಗೆ ಅವಕಾಶ
ಭಾರತ-ವಿಂಡೀಸ್ ಸರಣಿ
ಭಾರತ ಮತ್ತು ವೆಸ್ಟ್ ಇಂಡೀಸ್ ನಡುವೆ 2 ಟೆಸ್ಟ್, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್ ಆಫ್ ಸ್ಪೇನ್ (ಜು. 20-24). ಪೋರ್ಟ್ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್ ಓವಲ್’ನಲ್ಲಿ ನಡೆಯುವ 100ನೇ ಟೆಸ್ಟ್ ಪಂದ್ಯ ಇದಾಗಿದೆ.