ICC World Cup 2023: ಏಕದಿನ ವಿಶ್ವಕಪ್​ ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ - Vistara News

ಕ್ರಿಕೆಟ್

ICC World Cup 2023: ಏಕದಿನ ವಿಶ್ವಕಪ್​ ತಂಡದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ

ಕೇರಳದ ಯುವ ಸ್ಟಂಪರ್​ ಸಂಜು ಸ್ಯಾಮ್ಸನ್(sanju samson)​ ಅವರನ್ನು ಐಸಿಸಿ ಏಕದಿನ ವಿಶ್ವ ಕಪ್(ICC World Cup 2023)​ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

VISTARANEWS.COM


on

icc world cup 2023
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಮುಂಬಯಿ: ಪ್ರತಿಭಾನ್ವಿತ ಆಟಗಾರನಾದಿದ್ದರೂ ಟೀಮ್​ ಇಂಡಿಯಾದಲ್ಲಿ(Team Inida) ಸರಿಯಾಗಿ ಅವಕಾಶ ನೀಡದೆ ಕಡೆಗಣಿಸಿದ್ದ ಕೇರಳದ ಯುವ ಸ್ಟಂಪರ್​ ಸಂಜು ಸ್ಯಾಮ್ಸನ್(sanju samson)​ ಅವರನ್ನು ಐಸಿಸಿ ಏಕದಿನ ವಿಶ್ವ ಕಪ್(ICC World Cup 2023)​ ಟೂರ್ನಿಯಲ್ಲಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಸಂಜು ಸ್ಯಾಮ್ಸನ್​ ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದರೂ ಅವರನ್ನು ಒಂದು ಪಂದ್ಯ ಆಡಿಸಿ ಬಳಿಕ ಬೆಂಚ್​ ಕಾಯಿಸಿದ್ದೇ ಹೆಚ್ಚು. ಇದೇ ಕಾರಣಕ್ಕೆ ಬಿಸಿಸಿಐ ಮತ್ತು ತಂಡದ ಆಯ್ಕೆ ಸಮಿತಿ ವಿರುದ್ಧ ಅನೇಕ ಟೀಮ್​ ಇಂಡಿಯಾ ಮಾಜಿ ಆಟಗಾರರು ಸೇರಿ ವಿದೇಶಿ ಕ್ರಿಕೆಟ್​ ದಿಗ್ಗಜರೂ ಕೂಡ ಆಕ್ರೋಶ ವ್ಯಕ್ತಪಡಿಸಿದ್ದರು. 1983ರ ವಿಶ್ವ ಕಪ್​ ವಿಜೇತ ನಾಯಕ ಕಪಿಲ್​ ದೇವ್​ ಕೂಡ ಸಂಜು ಪರ ಬ್ಯಾಟ್​ ಬೀಸಿ ಯುವ ಆಟಗಾರನ ಕ್ರಿಕೆಟ್​ ಭವಿಷ್ಯ ಹಾಳು ಮಾಡದಿರಿ ಎಂದು ಹೇಳಿದ್ದರು. ಇದೀಗ ರಿಷಭ್​ ಪಂತ್(rishabh pant)​ ಅನುಪಸ್ಥಿತಿಯಲ್ಲಿ ವಿಶ್ವಕಪ್​ ಟೂರ್ನಿಗೆ ವಿಕೆಟ್​ ಕೀಪರ್​ ಆಗಿ ತಂಡಕ್ಕೆ ಆಯ್ಕೆ ಮಾಡಲಾಗುತ್ತದೆ ಎಂದು ವರದಿಯಾಗಿದೆ.

ಮುಂಬರುವ ವೆಸ್ಟ್​ ಇಂಡೀಸ್​(INDvsWI) ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿಯೂ ಸಂಜು ಅವರಿಗೆ ಅವಕಾಶ ಸಿಗಲಿದೆ ಎಂದು ತಿಳಿದು ಬಂದಿದೆ. ಇಶಾನ್​ ಕಿಶನ್​ ಅವರು ತಂಡದಲ್ಲಿದ್ದರೂ ಅವರ ಕೀಪಿಂಗ್​ ಕೌಶಲ್ಯ ಅಷ್ಟಾಗಿ ಪರಿಣಾಮಕಾರಿ ಇಲ್ಲದ ಕಾರಣ ಸಂಜು ಅವರನ್ನು ಈ ಸ್ಥಾನಕ್ಕೆ ರೆಡಿ ಮಾಡಲು ಬಿಸಿಸಿಐ ಪ್ಲ್ಯಾನ್​ ಮಾಡಿದೆ. ಇದೇ ಕಾರಣಕ್ಕೆ ಅವರಿಗೆ ವಿಂಡೀಸ್​ ಸರಣಿ ಅಗ್ನಿಪರೀಕ್ಷೆಯಾಗಲಿದೆ. ಒಂದೊಮ್ಮೆ ವಿಂಡೀಸ್​ ಸರಣಿಯಲ್ಲಿ ಅವಕಾಶ ಸಿಕ್ಕಿ ಇಲ್ಲಿ ಬ್ಯಾಟಿಂಗ್​ ಮತ್ತು ಕೀಪಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿದರೆ ಪಂತ್​ ಆಗಮನದ ವರೆಗೆ ತಂಡದಲ್ಲಿ ಖಾಯಂ ಸ್ಥಾನ ಗಿಟ್ಟಿಸಿಕೊಳ್ಳುವುದಂತೂ ಖಚಿತ ಎನ್ನಲಡ್ಡಿಯಿಲ್ಲ. ಸಂಜು ಸ್ಯಾಮ್ಸನ್ ಕೊನೆಯ ಬಾರಿ ಟಿ20 ಪಂದ್ಯವನ್ನಾಡಿದ್ದು ಶ್ರೀಲಂಕಾ ವಿರುದ್ಧ. ಆದರೆ ಆ ಸರಣಿಯಲ್ಲಿ ಅವರು ಗಾಯಗೊಂಡು ಹೊರಗುಳಿದಿದ್ದರು.

ಇದನ್ನೂ ಓದಿ INDvsWI: ವಿಂಡೀಸ್​ ಪ್ರವಾಸದಲ್ಲಿ ಸಂಜು ಸ್ಯಾಮ್ಸನ್​ಗೆ ಅವಕಾಶ

ಭಾರತ-ವಿಂಡೀಸ್ ಸರಣಿ​

ಭಾರತ ಮತ್ತು ವೆಸ್ಟ್​ ಇಂಡೀಸ್​ ನಡುವೆ 2 ಟೆಸ್ಟ್‌, 3 ಏಕದಿನ ಹಾಗೂ 3 ಟಿ20 ಪಂದ್ಯಗಳ ಸರಣಿ ಏರ್ಪಡಲಿದೆ. ಹೆಚ್ಚುವರಿಯಾಗಿ 2 ಟಿ20 ಪಂದ್ಯಗಳನ್ನು ಅಮೆರಿಕದಲ್ಲಿ ಆಡಲಾಗುವುದು. ವಿಂಡೀಸ್​ಗೆ ಪ್ರವಾಸಗೈಯಲಿರುವ ಭಾರತ ತಂಡ ಮೊದಲು 2 ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಪಂದ್ಯಗಳ ತಾಣ ರೊಸೇಯು (ಜು. 12-16) ಮತ್ತು ಪೋರ್ಟ್‌ ಆಫ್ ಸ್ಪೇನ್‌ (ಜು. 20-24). ಪೋರ್ಟ್‌ ಆಫ್ ಸ್ಪೇನ್‌ನ “ಕ್ವೀನ್ಸ್‌ಪಾರ್ಕ್‌ ಓವಲ್‌’ನಲ್ಲಿ ನಡೆಯುವ 100ನೇ ಟೆಸ್ಟ್‌ ಪಂದ್ಯ ಇದಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರಿಕೆಟ್

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Queen’s Premier League: ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

VISTARANEWS.COM


on

Queen's Premier League start
Koo

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಹಲವಾರು ಕ್ರಿಕೆಟ್ ಪಂದ್ಯಾವಳಿಗಳಿವೆ. ಸಿಸಿಎಲ್, ಕೆಸಿಸಿ, ಟಿಪಿಎಲ್ ಸೇರಿದಂತೆ ಹತ್ತಕ್ಕೂ ಹೆಚ್ಚು ಕ್ರಿಕೆಟ್ ಟೂರ್ನಮೆಂಟ್ ಗಳಿವೆ. ಆದರೆ ಕಿರುತೆರೆ ಹಾಗೂ ಹಿರಿತೆರೆ ಮಹಿಳೆಯರಿಗಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿಗಳಿಲ್ಲ. ಹೀಗಾಗಿ ಕ್ರಿಯೇಟಿವ್ ಫ್ರೆಂಡ್ಸ್ ಕಂಪನಿ ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ (Queen’s Premier League) ಎಂಬ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದೆ.

ಈ‌ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕನ್ನಡ ಸಿನಿಮಾ, ಸೀರಿಯಲ್, ಆಂಕರ್ಸ್, ಮಾಡೆಲ್ ಭಾಗವಹಿಸಲು ವೇದಿಕೆ‌ ಕಲ್ಪಿಸಿಕೊಡಲಾಗಿದೆ. ಅದರ ಭಾಗವಾಗಿ QPLನ ಲೋಗೋ ಬಿಡುಗಡೆ ಕಾರ್ಯಕ್ರಮ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಕರವೇ ಅಧ್ಯಕ್ಷ ನಾರಾಯಣ ಗೌಡ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂಎನ್ ಸುರೇಶ್, ಉದ್ಯಮಿ ಪೂರ್ವಂಕರ್ ಸಿಇಒ ಮಲ್ಲಣ್ಣ, ಅಂತಾರಾಷ್ಟ್ರೀಯ ಕ್ರೀಡಾಪಟು ವೃಂದಾ ದಿನೇಶ್, ಮಹಿಳಾ ಕ್ರಿಕೆಟರ್ ಗಳಾದ ಪುಷ್ಪ ಕುಮಾರಿ, ಪ್ರತ್ಯುಷ್ಯ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಲೋಗೊ ಬಿಡುಗಡೆ ಮಾಡಿದ ಪುಷ್ಪಕುಮಾರಿ, ʻʻಕ್ರಿಕೆಟ್ ಹುಡುಗರಿಗೆ ಮಾತ್ರ ಎನ್ನುವ ಕಾಲವಿತ್ತು. ಆದರೆ ನಾವು ಅಂದು ಛಲ ಬಿಡದೆ ಆಡಿದ್ದೇವೆ. ಮಹಿಳೆಯರಿಗಾಗಿ ಈ ರೀತಿ ಕ್ರಿಕೆಟ್ ಪಂದ್ಯಾವಳಿ ನಡೆಸುತ್ತಿರುವುದು ಖುಷಿʼʼ ಎಂದರು.

ಇದನ್ನೂ ಓದಿ: Dolly Dhananjay:  ಡಾಲಿ ಅಭಿನಯದ ʻಕೋಟಿʼ ಸಿನಿಮಾದ ಮೊದಲ ಹಾಡು ನಾಳೆ ಬಿಡುಗಡೆ

ನಟ ಹಾಗೂ QPL ಮೆಂಟರ್ ಆಗಿರುವ ಪ್ರಮೋದ್ ಶೆಟ್ಟಿ ಮಾತನಾಡಿ, ʻʻಜೂನ್ ತಿಂಗಳಲ್ಲಿ QPL ಪಂದ್ಯಾವಳಿ ನಡೆಸಲು ಯೋಜನೆ ಹಾಕಿಕೊಂಡಿದ್ದೇವೆ. ಕಲಾವಿದರ ಜತೆಗೆ ಆಂಕರ್ಸ್, ಮಾಡೆಲ್‌ಗೆ ಇಲ್ಲಿ ಕ್ರಿಕೆಟ್ ಆಡಲು ಅವಕಾಶವಿದೆ. ಇವರನ್ನು ನೋಡಿಕೊಂಡು ಹೊಸ ಜನರೇಷನ್ ಕ್ರಿಕೆಟ್ ಆಡಲು ಪ್ರೇರಣೆಯಾಗಲಿ. ಈ ಪಂದ್ಯಾವಳಿ ನಾವು ಮಾಡುತ್ತಿಲ್ಲ.‌ಇದರಿಂದ ಬಂದ ದುಡ್ಡನ್ನು ನನ್ನ ತಂಡ ರಂಗಸೌರಭಕ್ಕೆ‌ ಮೀಸಲು ಇಡಲಾಗುತ್ತದೆ. ಶಾಲಾ ಕಾಲೇಜು ಮಟ್ಟದಿಂದಲೇ ಹಲವು ಪ್ರತಿಭೆಗಳನ್ನು ರಂಗಭೂಮಿಗೆ ಕರೆತಂದು ನಟನೆಯನ್ನು ಕಲಿಸುವ ಕೆಲಸವನ್ನು ರಂಗಸೌರಭ ಮಾಡುತ್ತಿದೆ. ಹೀಗಾಗಿ QPL ನಿಂದ ಬಂದ ಲಾಭವನ್ನು ಇಲ್ಲಿಗೆ ನೀಡಲಾಗುತ್ತದೆ. ಈ ಪಂದ್ಯಾವಳಿ ಯಶಸ್ವಿಯಾಗಲು ಹೆಚ್ಚು ನಟಿಮಣಿರು ಹೆಚ್ಚಾಗಿ ಕೈ ಜೋಡಿಸಬೇಕುʼʼ ಎಂದರು.

ನಟಿ ಭವ್ಯಾ ಗೌಡ ಮಾತನಾಡಿ, ʻʻಈ ಕಾನ್ಸೆಪ್ಟ್ ನನ್ನ ಮೈಂಡ್ ನಲ್ಲಿ ತುಂಬಾ ತಿಂಗಳಿನಿಂದ ಇತ್ತು. ಆರ್ ಸಿಬಿ ಹುಡುಗಿರು ಯಾವಾಗ ಕಪ್ ಎತ್ತಿದರೋ ಆಗ ನಮ್ಮ ಜೋಶ್ ಜಾಸ್ತಿಯಾಯ್ತು. ಹೆಣ್ಮಕ್ಕಳು ಯಾವುದಕ್ಕೂ ಕಮ್ಮಿ ಇಲ್ಲ ಅನ್ನೋದನ್ನು ತೋರಿಸಲು ಶುರು ಮಾಡಿದ್ದೇವೆ. ಈ ಕ್ರಿಕೆಟ್ ಪಂದ್ಯಾವಳಿಯನ್ನೂ ಒಂದೊಳ್ಳೆ ಉದ್ದೇಶ ಇಟ್ಟಿಕೊಂಡು ಮಾಡುತ್ತಿದ್ದೇವೆ. ಹೆಣ್ಮಕ್ಕಳಿಗೆ ಬ್ಯಾಟು ಬಾಲ್ ಹಿಡಿದು ಫೀಲ್ಡ್ ಗೆ ಇಳಿಯುತ್ತಿದ್ದೇವೆ. ಗಂಡು ಮಕ್ಕಳು ಚಿಯರ್ ಅಪ್ ಮಾಡಲು ರೆಡಿಯಾಗಿʼʼ ಎಂದರು.

ಕನ್ನಡ ಸಿನಿಮಾ ಪ್ರೇಮಿಗಳನ್ನು ರಂಜಿಸುವ ಕ್ವೀನ್ಸ್ ಗಳ ಮನರಂಜನೆಗಾಗಿ ಹಾಗೂ ಒಂದೊಳ್ಳೆ ಉದ್ದೇಶ ಇಟ್ಟುಕೊಂಡು ಈ ಪಂದ್ಯಾವಳಿ ನಡೆಸಲಾಗುತ್ತಿದೆ. ರಂಗಪ್ರತಿಭೆಗಳನ್ನು ಸಜ್ಜುಗೊಳಿಸುವ ರಂಗಸೌರಭಕ್ಕೆ QPL ಲಾಭವನ್ನು ನೀಡಲಾಗುತ್ತದೆ.

ʻಕ್ವೀನ್ಸ್‌ ಪ್ರೀಮಿಯರ್ ಲೀಗ್ʼ ಆಯೋಜಕರ ಬಳಗದಲ್ಲಿ ಮಹೇಶ್ ಕುಮಾರ್, ಪ್ರಮೋದ್ ಶೆಟ್ಟಿ, ಭವ್ಯ ಗೌಡ, ಸಾತ್ವಿಕ್, ಸಂತೋಷ್, ಚೇತನ್, ಸಚಿನ್ ಹಾಗೂ ಪ್ರೇಮ್ ಇದ್ದಾರೆ. ಸದ್ಯ QPL ಲೋಗೋ ಲಾಂಚ್ ಕಾರ್ಯಕ್ರಮ ನಡೆದಿದ್ದು, ಮುಂದಿನ ದಿನಗಳಲ್ಲಿ auction, ಜೆರ್ಸಿ ಲಾಂಚ್, ಟ್ರೋಫಿ ಬಿಡುಗಡೆ ಮಾಡಲಾಗುತ್ತದೆ.

Continue Reading

ಕ್ರಿಕೆಟ್

IPL 2024: ಬೆಂಗಳೂರಲ್ಲಿಂದು ಆರ್‌ಸಿಬಿ, ಡೆಲ್ಲಿ ನಿರ್ಣಾಯಕ ಪಂದ್ಯ; ಮಳೆ ಅಡ್ಡಿ ಆಗತ್ತಾ ? ಇಲ್ಲಿದೆ ರಿಪೋರ್ಟ್

IPL 2024: ಆಡಿದ 12 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್‌ಸಿಬಿಯು ಪ್ಲೇಆಫ್‌ ತಲುಪಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲುವು ಸಾಧಿಸದಿದ್ದರೆ, ಟೂರ್ನಿಯಿಂದಲೇ ಆರ್‌ಸಿಬಿ ಹೊರಬೀಳಲಿದೆ. ಹಾಗಾಗಿ, ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯವು ಆರ್‌ಸಿಬಿಗೆ ನಿರ್ಣಾಯಕ ಎನಿಸಿದೆ.

VISTARANEWS.COM


on

IPL 2024
Koo

ಬೆಂಗಳೂರು: ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯು (IPL 2024) ದಿನೇದಿನೆ ಹೆಚ್ಚು ರೋಚಕವಾಗುತ್ತಿದೆ. ಪ್ಲೇ ಆಫ್‌, ರನ್‌ರೇಟ್‌, ಎದುರಾಳಿ ತಂಡದ ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಅದರಲ್ಲೂ, ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ತಂಡವು ಪ್ಲೇಆಫ್‌ಗೇರಲು ಭಾನುವಾರ ಅಗ್ನಿಪರೀಕ್ಷೆ ಎದುರಿಸುತ್ತಿದೆ. ಇಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಮಧ್ಯೆ ನಿರ್ಣಾಯಕ ಪಂದ್ಯ ನಡೆಯಲಿದ್ದು, ಪ್ಲೇಆಫ್‌ಗೇರಲು ಉಭಯ ತಂಡಗಳಿಗೂ ಗೆಲುವು ಅನಿವಾರ್ಯವಾಗಿದೆ. ಇನ್ನು, ಆರ್‌ಸಿಬಿ, ಡೆಲ್ಲಿ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.

ವೆದರ್‌ ರಿಪೋರ್ಟ್‌ ಹೇಳುವುದೇನು?

ಅಕ್ಯುವೆದರ್‌ (Accuweather) ವರದಿ ಪ್ರಕಾರ, ಬೆಂಗಳೂರಿನಲ್ಲಿ ಭಾನುವಾರ ಸಂಜೆ ಮೋಡಿ ಕವಿದ ವಾತಾವರಣ ಇರಲಿದೆ ಎಂದು ತಿಳಿದುಬಂದಿದೆ. ಮಳೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ವರದಿ ತಿಳಿಸಿದೆ. ಮಳೆ ಬರುವ ಸಾಧ್ಯತೆ ಶೇ.50-60ರಷ್ಟು ಕಡಿಮೆ ಇದೆ. ಇನ್ನು, ತಾಪಮಾನ 30 ಡಿಗ್ರಿ ಸೆಲ್ಸಿಯಸ್‌ ಇರಲಿದ್ದು, ಗಂಟೆಗೆ 13 ಕಿಲೋಮೀಟರ್‌ ವೇಗದಲ್ಲಿ ಗಾಳಿ ಬೀಸಲಿದೆ ಎಂದು ತಿಳಿಸಿದೆ. ರಾಜ್ಯ ರಾಜಧಾನಿಯಲ್ಲಿ ಭಾನುವಾರ ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇದ್ದು, ಸಂಜೆ ಮಳೆ ಬಂದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

ಹೇಗಿದೆ ಪಿಚ್?‌

ಚಿಕ್ಕದಾದ ಬೌಂಡರಿ ಲೈನ್, ಫ್ಲ್ಯಾಟ್‌ ಪಿಚ್‌ ಇರುವ ಕಾರಣ ಎಂ.ಚಿನ್ನಸ್ವಾಮಿ ಸ್ಟೇಡಿಯಂ ಬ್ಯಾಟರ್‌ಗಳ ಸ್ವರ್ಗ ಎಂದೇ ಹೇಳಲಾಗುತ್ತದೆ. ಹಾಗಾಗಿ, ಆರ್‌ಸಿಬಿ ಹಾಗೂ ಡೆಲ್ಲಿ ಪಂದ್ಯದಲ್ಲೂ ರನ್‌ ಮಳೆ ಸುರಿಯುವ ಸಾಧ್ಯತೆ ಇದೆ. ಪಿಚ್‌ ಸ್ಪಿನ್ನರ್‌ಗಳಿಗಿಂತ ಪೇಸರ್‌ಗಳಿಗೆ ಹೆಚ್ಚು ಅನುಕೂಲವಾಗಿದೆ. ಇನ್ನು ಕಳೆದ ಪಂದ್ಯದಲ್ಲಿ ಇದೇ ಮೈದಾನದಲ್ಲಿ ಆರ್‌ಸಿಬಿಯು ಗುಜರಾತ್‌ ಟೈಟನ್ಸ್‌ ವಿರುದ್ಧ ಭರ್ಜರಿ ಜಯ ಗಳಿಸಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ಅತ್ತ, ಆರ್‌ಸಿಬಿಯನ್ನು ತವರಿನಲ್ಲೇ ಮಣಿಸುವ ಮೂಲಕ ಪ್ಲೇಆಫ್‌ ಹಾದಿ ಸುಗಮ ಮಾಡಿಕೊಳ್ಳುವ ಯೋಜನೆಯನ್ನು ಡೆಲ್ಲಿ ಕ್ಯಾಪಿಟಲ್ಸ್‌ ಹಾಕಿಕೊಂಡಿದೆ. ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.

ಆರ್‌ಸಿಬಿಗೆ ಮಾಡು ಇಲ್ಲವೇ ಮಡಿ ಪಂದ್ಯ

ಆಡಿದ 12 ಪಂದ್ಯಗಳಲ್ಲಿ 5 ಪಂದ್ಯ ಗೆದ್ದು ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿರುವ ಆರ್‌ಸಿಬಿಯು ಪ್ಲೇಆಫ್‌ ತಲುಪಲು ಭಾನುವಾರ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸಲೇಬೇಕಿದೆ. ಗೆಲುವು ಸಾಧಿಸದಿದ್ದರೆ, ಟೂರ್ನಿಯಿಂದಲೇ ಆರ್‌ಸಿಬಿ ಹೊರಬೀಳಲಿದೆ. ಡೆಲ್ಲಿ ವಿರುದ್ಧ ಗೆದ್ದು, ಉಳಿದ ತಂಡಗಳ ಸೋಲು-ಗೆಲುವು, ರನ್‌ರೇಟ್‌ ಲೆಕ್ಕಾಚಾರದಲ್ಲಿರುವ ಆರ್‌ಸಿಬಿಯು ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಕಂಡಿರುವ ಗೆಲುವು, ತವರಿನ ಅಭಿಮಾನಿಗಳ ಬಲದೊಂದಿಗೆ ಕಣಕ್ಕಿಳಿಯುತ್ತಿದೆ. ಭಾನುವಾರ ಮಧ್ಯಾಹ್ನ ರಾಜಸ್ಥಾನ ರಾಯಲ್ಸ್‌ ಹಾಗೂ ಸಿಎಸ್‌ಕೆ ಪಂದ್ಯ ನಡೆಯಲಿದ್ದು, ಸಿಎಸ್‌ಕೆ ಸೋಲಿಗಾಗಿ ಆರ್‌ಸಿಬಿ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ.

ಇದನ್ನೂ ಓದಿ: IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

Continue Reading

ಪ್ರಮುಖ ಸುದ್ದಿ

IPL 2024 : ಮುಂಬೈ ವಿರುದ್ಧ 18 ರನ್ ಜಯ, ಪ್ಲೇಆಫ್​ ಪ್ರವೇಶಿಸಿದ ಕೆಕೆಆರ್​ ತಂಡ

IPL 2024: ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ಮೊಟಕುಗೊಳಿಸಲಾದ 16 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 157 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ 16 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 139 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

VISTARANEWS.COM


on

IPL 2024
Koo

ಕೋಲ್ಕೊತಾ: ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸರ್ವಾಂಗೀಣ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್ ತಂಡ ಐಪಿಎಲ್​ನ 17ನೇ ಆವೃತ್ತಿಯ (IPL 2024) 60ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ದ 18 ರನ್​ಗಳ ವಿಜಯ ಸಾಧಿಸಿತು. ಇದು ಕೆಕೆಆರ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 9ನೇ ಗೆಲುವಾಗಿದೆ. ಇದರೊಂದಿಗೆ ಕೆಕೆಆರ್​ ಬಳಗ ಟೂರ್ನಿಯ ಪ್ಲೇಆಫ್ ಹಂತವನ್ನು ಪ್ರವೇಶಿಸಿತು. ಇದೇ ವೇಳೆ ಮುಂಬೈ ತಂಡ ಆಡಿರುವ 13ರಲ್ಲಿ ಕೇವಲ ನಾಲ್ಕು ವಿಜಯ ಸಾಧಿಸಿ 8 ಅಂಕಗಳನ್ನು ಹೊಂದಿದೆ. ಅಲ್ಲದೆ ಅಂಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿ ಉಳಿದಿದೆ.

ಈ ಪಂದ್ಯವು ಮಳೆಯಿಂದಾಗಿ 16 ಓವರ್​ಗಳಿಗೆ ಮೊಟಕುಗೊಂಡಿತ್ತು. ಆದಾಗ್ಯೂ ಜಿದ್ದಾಜಿದ್ದಿನ ಹೋರಾಟದಲ್ಲಿ ಮುಂಬೈ ತಂಡ ಸೋಲಿನ ಸುಳಿಗೆ ಸಿಲುಕಿತು. ಮತ್ತೊಂದು ಬಾರಿ ಅಮೋಘ ಪ್ರದರ್ಶನ ನೀಡಿದ ಕೆಕೆಆರ್ ತಂಡ ಗೆಲುವನ್ನು ತನ್ನದಾಗಿಸಿಕೊಂಡಿತು. ಮುಂಬೈ ತಂಡ ಕೊನೆ ಎರಡು ಪಂದ್ಯಗಳನ್ನು ಗೆದ್ದು ಮರ್ಯಾದೆ ಉಳಿಸಿಕೊಳ್ಳಬೇಕು ಎಂದು ಅಂದಾಜಿಸಿದ್ದರೂ ಅದಕ್ಕೆ ಕೋಲ್ಕೊತಾ ಮೂಲದ ಸಂಘಟಿತ ತಂಡ ಅವಕಾಶ ನೀಡಲಿಲ್ಲ.

ಇಲ್ಲಿನ ವಿಶ್ವ ವಿಖ್ಯಾತಿಯ ಈಡನ್ ಗಾರ್ಡನ್ಸ್​ ಕ್ರಿಕೆಟ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಮುಂಬೈ ಇಂಡಿಯನ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಆರ್​ ತಂಡ ಮೊಟಕುಗೊಳಿಸಲಾದ 16 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 157 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ 16 ಓವರ್​ಗಳಲ್ಲಿ 8 ವಿಕೆಟ್​ ನಷ್ಟಕ್ಕೆ 139 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಕೆಕೆಅರ್ ತಂಡದ ಆರಂಭ ಉತ್ತಮವಾಗಿರಲಿಲ್ಲ. ಫಿಲ್​ ಸಾಲ್ಟ್​​ 6 ರನ್​ಗೆ ಔಟಾದರೆ, ಸುನೀಲ್ ನರೈನ್ ಬುಮ್ರಾ ಎಸೆಕ್ಕೆ ಕ್ಲೀನ್ ಬೌಲ್ಡ್ ಆದರು. ನಂತರದಲ್ಲಿ ವೆಂಕಟೇಶ್​ ಅಯ್ಯರ್ 21 ಎಸೆತಕ್ಕೆ 42 ರನ್ ಬಾರಿಸಿ ತಂಡಕ್ಕೆ ಮುನ್ನಡೆ ಕಲ್ಪಿಸಿದರು. ಆದರೆ, ನಾಯಕ ಶ್ರೇಯಸ್​ ಅಯ್ಯರ್​​ ಸುಲಭವಾಗಿ ಬೌಲ್ಡ್ ಆದರು. ನಂತರದಲ್ಲಿ ನಿತೀಶ್ ರಾಣಾ (33 ರನ್​) ಹಾಗೂ ಆ್ಯಂಡ್ರೆ ರಸೆಲ್​ (24 ರನ್​) ತಂಡವನ್ನು ಮೇಲಕ್ಕೆತ್ತಲು ಯತ್ನಿಸಿದರು. ರಿಂಕು ಸಿಂಗ್​ ಕೂಡ 12 ಎಸೆತಕ್ಕೆ 20 ರನ್ ಬಾರಿಸಿದರು. ರಮಣ್​ದೀಪ್​ ಸಿಂಗ್​ 17 ರನ್ ಬಾರಿಸುವ ಮೂಲಕ ಸ್ಪರ್ಧಾತ್ಮಕ ಮೊತ್ತ ಪೇರಿಸಲು ಕೆಕೆಆರ್​ಗೆ ಸಾಧ್ಯವಾಯಿತು.

ಇದನ್ನೂ ಓದಿ: Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

ಗುರಿ ಬೆನ್ನಟ್ಟಿದ ಮುಂಬೈ ತಂಡ ಇಶಾನ್ ಕಿಶನ್​ ಅವರ 40 ರನ್ ಮೂಲಕ ಉತ್ತಮ ಆರಂಭ ಪಡೆಯಿತು. ಆದರೆ, ರೋಹಿತ್ ಶರ್ಮಾ 19 ರನ್ ಬಾರಿಸಿ ಔಟಾದರು. ಸೂರ್ಯಕುಮಾರ್ ಯಾದವ್​ ಕೂಡ 11 ರನ್​ಗಳಿಗೆ ಸೀಮಿತಗೊಂಡರು. ಬಳಿಕ ಮುಂಬೈ ಇಂಡಿಯನ್ಸ್ ಪತನ ಅರಂಭಗೊಂಡಿತು. ನಾಯಕ ಹಾರ್ದಿಕ್ ಪಾಂಡ್ಯ 2 ರನ್ ಬಾರಿಸಿದರೆ ಟಿಮ್​ ಡೇವಿಡ್​ ಶೂನ್ಯಕ್ಕೆ ಔಟಾದರು. ನೇಹಲ್ ವದೇರಾ ಕೂಡ 3 ರನ್​ನೊಂದಿಗೆ ಮರಳಿದರು. ನಾಲ್ಕನೇ ಕ್ರಮಾಂಕದಲ್ಲಿ ಆಡಲು ಬಂದ ತಿಲಕ್ ವರ್ಮಾ 32 ರನ್ ಬಾರಿಸಿದರೆ ನಮನ್ ಧಿರ್ 6 ಎಸೆತಕ್ಕೆ 17 ರನ್ ಬಾರಿಸಿ ಪಂದ್ಯವನ್ನು ಜೀವಂತವಾಗಿಡಲು ಯತ್ನಿಸಿದರು. ಅದರೆ, ಅವರ ಪ್ರಯತ್ನಗಳು ಕೂಡಲಿಲ್ಲ. ಕೊನೇ ಓವರ್​ನಲ್ಲಿ ಹರ್ಷಿತ್ ರಾಣಾ ಎರಡು ವಿಕೆಟ್ ಪಡೆಯುವ ಮೂಲಕ ಕೆಕೆಆರ್ ತಂಡಕ್ಕೆ ಗೆಲವು ತಂದುಕೊಟ್ಟರು.

Continue Reading

ಪ್ರಮುಖ ಸುದ್ದಿ

Jay Shah : ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳ ಸೂಚನೆ ನೀಡಿದ ಜಯ್​ ಶಾ

Jay Shah: ದುಲೀಪ್ ಟ್ರೋಫಿ ತಂಡಗಳು ಮತ್ತು ಮಹಿಳಾ ಅಂತರ-ವಲಯ ಪಂದ್ಯಾವಳಿಗಳು ಸೇರಿದಂತೆ ತಂಡದ ಆಯ್ಕೆಯಲ್ಲಿ ರಾಷ್ಟ್ರೀಯ ಆಯ್ಕೆದಾರರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ಜಯ್ ಶಾ ಗಮಿನಿದ್ದಾರೆ. ಈ ಕ್ರಮವು ಪ್ರತಿಭೆ ಗುರುತಿಸುವಿಕೆ ಮತ್ತು ತಂಡದ ಸಂಯೋಜನೆ ಸುಗಮಗೊಳಿಸುವ ಗುರಿ ಹೊಂದಿರುವ ವಲಯ ಆಯ್ಕೆ ಸಮಿತಿಗಳಿಂದ ನಿರ್ಗಮನ ಸೂಚಿಸುತ್ತದೆ.

VISTARANEWS.COM


on

jay Shah
Koo

ನವದೆಹಲಿ: ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮುಂಬರುವ ಋತುವಿನಲ್ಲಿ ಗಮನಾರ್ಹ ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಬಿಸಿಸಿಐ ಕಾರ್ಯದರ್ಶಿ ಜಯ್ ಶಾ (Jay Shah) ಅವರು ಆಟಗಾರರ ಕಲ್ಯಾಣ ಮತ್ತು ಸ್ಪರ್ಧಾತ್ಮಕ ಸಮತೋಲನಕ್ಕೆ ಒತ್ತು ನೀಡಿ ಬಿಸಿಸಿಐ ಮುಂದೆ ಪ್ರಸ್ತಾಪಗಳನ್ನು ಮಂಡಿಸಿದ್ದಾರೆ. ಹೀಗಾಗಿ ದೇಶಿಯ ಕ್ರಿಕೆಟ್​ನಲ್ಲಿ ಭಾರೀ ಬದಲಾವಣೆಗಳು ಆಗಲಿವೆ.

ದಿನದಿಂದ ದಿನಕ್ಕೆ ಪಂದ್ಯಗಳ ಹೆಚ್ಚಳದ ಬಗ್ಗೆ ಬಗ್ಗೆ ಶಾರ್ದೂಲ್ ಠಾಕೂರ್ ಅವರಂತಹ ಆಟಗಾರರು ಎತ್ತಿರುವ ಕಳವಳಗಳನ್ನು ಪರಿಹರಿಸಲು, ರಣಜಿ ಟ್ರೋಫಿ ಮುಂದಿನ ವರ್ಷ ಎರಡು ಲೆಗ್ (ಚರಣಗಳನ್ನು) ಹೊಂದಿರಲಿವೆ. ಈ ಹೊಂದಾಣಿಕೆಯು ಆಟಗಾರರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮ ರಕ್ಷಿಸುವ ಗುರಿ ಹೊಂದಿದೆ. 23 ವರ್ಷದೊಳಗಿನವರ ಸಿಕೆ ನಾಯ್ಡು ಟ್ರೋಫಿಯಲ್ಲಿ ಕಾಯಿನ್ ಟಾಸ್ ಅನ್ನು ತೆಗೆದುಹಾಕಲು ಪ್ರಸ್ತಾಪಿಸಿದ ಬಿಸಿಸಿಐ ಕಾರ್ಯದರ್ಶಿ ಸಿಕೆ ನಾಯ್ಡು ಟ್ರೋಫಿಯಲ್ಲಿ ಟಾಸ್ ಅನ್ನು ಇನ್ನು ಮುಂದೆ ಘೋಷಿಸಲಿಲ್ಲ. ಪ್ರವಾಸಿ ತಂಡಗಳು ತಂಡಗಳು ಬ್ಯಾಟಿಂಗ್ ಅಥವಾ ಬೌಲಿಂಗ್ ಅನ್ನು ಆಯ್ಕೆ ಮಾಡಬಹುದು. ಪಂದ್ಯದ ಸಮತೋಲನಕ್ಕಾಗಿ ಪರಿಷ್ಕೃತ ಅಂಕಗಳ ವ್ಯವಸ್ಥೆಯನ್ನು ಜಾರಿ ಮಾಡಲಾಗುತ್ತದೆ. ಯಶಸ್ವಿಯಾದರೆ ಈ ಬದಲಾವಣೆಗಳು ಭವಿಷ್ಯದಲ್ಲಿ ದೊಡ್ಡ ಹಂತದ ಸ್ಪರ್ಧೆಗಳಿಗೆ ವಿಸ್ತರಿಸಬಹುದು.

ದುಲೀಪ್ ಟ್ರೋಫಿ ತಂಡಗಳು ಮತ್ತು ಮಹಿಳಾ ಅಂತರ-ವಲಯ ಪಂದ್ಯಾವಳಿಗಳು ಸೇರಿದಂತೆ ತಂಡದ ಆಯ್ಕೆಯಲ್ಲಿ ರಾಷ್ಟ್ರೀಯ ಆಯ್ಕೆದಾರರ ಹೆಚ್ಚಿನ ಪಾಲ್ಗೊಳ್ಳುವಿಕೆಯ ಯೋಜನೆಗಳನ್ನು ಜಯ್ ಶಾ ಗಮಿನಿದ್ದಾರೆ. ಈ ಕ್ರಮವು ಪ್ರತಿಭೆ ಗುರುತಿಸುವಿಕೆ ಮತ್ತು ತಂಡದ ಸಂಯೋಜನೆ ಸುಗಮಗೊಳಿಸುವ ಗುರಿ ಹೊಂದಿರುವ ವಲಯ ಆಯ್ಕೆ ಸಮಿತಿಗಳಿಂದ ನಿರ್ಗಮನ ಸೂಚಿಸುತ್ತದೆ.

ಮಳೆಯ ಸಮಸ್ಯೆಗೆ ಪರಿಹಾರ

ಜಯ್ ಶಾ ಹವಾಮಾನ ಸಂಬಂಧಿತ ಸವಾಲುಗಳನ್ನು ತಗ್ಗಿಸುವ ಯೋಜನೆಗಳನ್ನು ವಿವರಿಸಿದರು/ ವಿಶೇಷವಾಗಿ ಚಳಿಗಾಲದಲ್ಲಿ ಉತ್ತರ ಭಾರತದಲ್ಲಿ ಕ್ರಿಕೆಟ್​ ಋತು ಆರಂಭವಾಗಲಿದೆ. ಈ ಋತುವು ದುಲೀಪ್ ಟ್ರೋಫಿಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಇರಾನಿ ಕಪ್ ಮತ್ತು ರಣಜಿ ಟ್ರೋಫಿ ಎರಡು ಹಂತಗಳಲ್ಲಿ ನಡೆಯಲಿದೆ. ಸೂಕ್ತ ಆಟಗಾರರ ವಿಶ್ರಾಂತಿ ಮತ್ತು ಚೇತರಿಕೆಗಾಗಿ ವೈಟ್-ಬಾಲ್ ಪಂದ್ಯಾವಳಿಗಳನ್ನು ನಡೆಸಲಾಗುತ್ತದೆ.

ಇದನ್ನೂ ಓದಿ: IPL 2024 : ಗುಜರಾತ್​ ತಂಡ ಸೇರಿದ ಗುರ್ನೂರ್ ಬ್ರಾರ್; ಎಲ್ಲಿಯ ಆಟಗಾರ ಇವರು

ಈ ಸುಧಾರಣೆಗಳು ಸ್ಪರ್ಧಾತ್ಮಕ ಮತ್ತು ಆಟಗಾರ ಕೇಂದ್ರಿತ ದೇಶೀಯ ಕ್ರಿಕೆಟ್ ಪರಿಸರ ವ್ಯವಸ್ಥೆಯನ್ನು ಬೆಳೆಸುವ ಬಿಸಿಸಿಐನ ಬದ್ಧತೆ ಒತ್ತಿಹೇಳುತ್ತವೆ. ಪ್ರತಿಭೆಗಳನ್ನು ಪೋಷಿಸುವ ಮತ್ತು ಸಮಾನ ಅವಕಾಶಗಳನ್ನು ಖಾತ್ರಿಪಡಿಸುವ ದೃಷ್ಟಿಯಿಂದ ಈ ಬದಲಾವಣೆಗಳು ತಳಮಟ್ಟದಲ್ಲಿ ಭಾರತೀಯ ಕ್ರಿಕೆಟ್​​ನ ಹೊಸ ಯುಗವನ್ನು ಸೂಚಿಸುತ್ತವೆ.

Continue Reading
Advertisement
felicitation programme for SSLC student Harshita D M who got 2nd place in the state
ತುಮಕೂರು32 seconds ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ 2ನೇ ಸ್ಥಾನ ಪಡೆದ ಹರ್ಷಿತಾಗೆ ಸನ್ಮಾನ

130 crore crop compensation amount paid to Vijayanagara district says DC m S Diwakar
ವಿಜಯನಗರ3 mins ago

Vijayanagara News: ವಿಜಯನಗರ ಜಿಲ್ಲೆಗೆ 130 ಕೋಟಿ ರೂ. ಬೆಳೆ ಪರಿಹಾರ: ಡಿಸಿ

Prajwal Revanna Case Naveen Gowda post against MLA A Manju
ರಾಜಕೀಯ6 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

ಕರ್ನಾಟಕ19 mins ago

MLC Election: ಪರಿಷತ್‌ ಚುನಾವಣೆಗೂ ಮುನ್ನ ಒಪಿಎಸ್‌ ಮರು ಜಾರಿಗೆ ಮುಂದಾಯ್ತಾ ಕಾಂಗ್ರೆಸ್‌ ಸರ್ಕಾರ?

Queen's Premier League start
ಕ್ರಿಕೆಟ್43 mins ago

Queen’s Premier League: ಕಿರುತೆರೆ ,ಹಿರಿತೆರೆ ಹೆಣ್ಮಕ್ಕಳಿಗಾಗಿ ಶುರುವಾಯ್ತು ಕ್ವೀನ್ಸ್‌ ಪ್ರೀಮಿಯರ್ ಲೀಗ್!

Prajwal Revanna Case What was plan of advocate Devaraje Gowda Why did you leave for Delhi
ಕ್ರೈಂ44 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ಕೇಸ್‌; ವಕೀಲ ದೇವರಾಜೇಗೌಡ ಪ್ಲ್ಯಾನ್‌ ಏನಿತ್ತು? ದೆಹಲಿಗೆ ಹೊರಟಿದ್ದು ಏಕೆ?

Mental Health Awareness Month
ಆರೋಗ್ಯ44 mins ago

Mental Health Awareness Month: ಮಾನಸಿಕ ಆರೋಗ್ಯ ಜಾಗೃತಿ ಮಾಸ; ಮತ್ತೆ ಮಗುವಿನಂತಾಗಲು ಪ್ರಯತ್ನಿಸಿ!

Narendra Modi
ದೇಶ46 mins ago

Narendra Modi: ತಾಯಂದಿರ ದಿನದಂದು ಮೋದಿಗೆ ವಿಶೇಷ ಉಡುಗೊರೆ ಕೊಟ್ಟ ಫ್ಯಾನ್ಸ್; ಏನದು ನೋಡಿ!

Murder case
ಕ್ರೈಂ47 mins ago

Murder Case : ಪತಿಯ ಡೆಡ್ಲಿ ಅಟ್ಯಾಕ್‌ಗೆ ಪತ್ನಿ ಸಾವು; ರೈಲಿಗೆ ತಲೆ ಕೊಟ್ಟು ಯುವಕ ಆತ್ಮಹತ್ಯೆ

Kannada New Movie Moorane Krishnappa trailer Out
ಸ್ಯಾಂಡಲ್ ವುಡ್57 mins ago

Kannada New Movie: ಮನರಂಜನೆಯ ರಸದೌತಣ ಬಡಿಸಲು ಬಂದ ʻಮೂರನೇ ಕೃಷ್ಣಪ್ಪʼ: ಟ್ರೈಲರ್‌ ಔಟ್‌!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case Naveen Gowda post against MLA A Manju
ರಾಜಕೀಯ6 mins ago

Prajwal Revanna Case: ಪ್ರಜ್ವಲ್‌ ಪೆನ್‌ಡ್ರೈವ್‌ ವಿಡಿಯೊ ವೈರಲ್‌ಗೆ ಟ್ವಿಸ್ಟ್‌; ಶಾಸಕ ಎ. ಮಂಜು ವಿರುದ್ಧ ನವೀನ್‌ ಗೌಡ ಪೋಸ್ಟ್‌!

Prajwal Revanna Case: Beware of making a statement Parameshwara warns to HD Kumaraswamy
ಕ್ರೈಂ4 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಕೇಸ್‌; ನಿಮ್ಮನ್ನೂ ವಿಚಾರಣೆಗೆ ಕರೆಯಬೇಕಾಗುತ್ತದೆ: ಎಚ್‌ಡಿಕೆಗೆ ಪರಮೇಶ್ವರ್‌ ವಾರ್ನಿಂಗ್‌!

Prajwal Revanna Case Two people of pen drive allottees arrested
ಕ್ರೈಂ5 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಕೇಸ್‌; ಇಬ್ಬರು ಪೆನ್‌ಡ್ರೈವ್‌ ಹಂಚಿಕೆದಾರರ ಅರೆಸ್ಟ್‌

Dina Bhavishya
ಭವಿಷ್ಯ13 hours ago

Dina Bhavishya: ಹತಾಶೆಯಲ್ಲಿ ಈ ತೀರ್ಮಾನ ಮಾಡಲೇಬೇಡಿ; ಈ ರಾಶಿಯವರು ಜೀವನ ಪೂರ್ತಿ ಕೊರಗಬೇಕಾಗುತ್ತೆ!

Bengaluru News
ಬೆಂಗಳೂರು1 day ago

Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Dina Bhavishya
ಭವಿಷ್ಯ2 days ago

Dina Bhavishya : ಈ ದಿನ ಅತಿರೇಕದ ಮಾತುಗಳು ಅಪಾಯ ತರಬಹುದು

Physical Abuse The public prosecutor called the client woman to the lodge
ಕ್ರೈಂ2 days ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ2 days ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ2 days ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ3 days ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

ಟ್ರೆಂಡಿಂಗ್‌