Site icon Vistara News

CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಮೊದಲ ಪದಕ, ಬೆಳ್ಳಿ ಗೆದ್ದ ಸಂಕೇತ್‌ ಸರ್ಗರ್‌

CWG-2022

ಬರ್ಮಿಂಗ್‌ಹ್ಯಾಮ್‌: ಭಾರತದ ವೇಟ್‌ಲಿಫ್ಟರ್‌ ಸಂಕೇತ್ ಸರ್ಗರ್‌ ಪುರುಷರ ೫೫ ಕೆ.ಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. ಇದು ಪ್ರಸ್ತುತ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ. ಕ್ಲೀನ್‌ ಆಂಡ್‌ ಜರ್ಕ್‌ ವಿಭಾಗದಲ್ಲಿ ಒಟ್ಟಾರೆ ೨೪೮ ಕೆ.ಜಿ ಭಾರ ಎತ್ತಿದ ಅವರು ಬೆಳ್ಳಿ ಪದಕ ಬಾಚಿಕೊಂಡರು.

ಸ್ನಾಚ್‌ ವಿಭಾಗದಲ್ಲಿ ೧೧೩ ಕೆ.ಜಿ ಭಾರ ಎತ್ತಿದ್ದ ಸಂಕೇತ್‌ ಕ್ಲೀನ್‌ ಆಂಡ್‌ ಜರ್ಕ್‌ ವಿಭಾಗದಲ್ಲಿ 135 ಕೆ.ಜಿ ಭಾರ ಎತ್ತುವ ಮೂಲಕ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡರು. ಕೊನೇ ಸುತ್ತಿನ ತನಕ ಮೊದಲ ಸ್ಥಾನದಲ್ಲೇ ಇದ್ದರು ಭಾರತದ ವೇಟ್‌ ಲಿಫ್ಟರ್‌. ಆದರೆ, ಮೂರನೇ ಹಾಗೂ ಅಂತಿಮ ಪ್ರಯತ್ನದಲ್ಲಿ ಮಲೇಷ್ಯಾದ ಮೊಹಮ್ಮದ್‌ ಅನಿಕ್‌ ಒಟ್ಟಾರೆ ೨೪೯ ಕೆ.ಜಿ ಭಾರತ ಎತ್ತುವ ಮೂಲಕ ಮೊದಲ ಸ್ಥಾನಕ್ಕೇರಿ ಚಿನ್ನ ಗೆದ್ದರು.

ಸಂಕೇತ್‌ ಸರ್ಗರ್‌ ಸ್ನ್ಯಾಚ್‌ ವಿಭಾಗದಲ್ಲಿ ೧೧೩ ಕೆ.ಜಿ ಭಾರ ಎತ್ತಿದ್ದರೆ, ಮಲೇಷ್ಯಾದ ವೇಟ್‌ ಲಿಫ್ಟರ್‌ ೧೦೭ ಕೆ.ಜಿ ಮಾತ್ರ ಎತ್ತಿದ್ದರು. ಸಾಗರ್‌ ಕ್ಲೀನ್‌ ಮತ್ತು ಜರ್ಕ್‌ ವಿಭಾಗದಲ್ಲಿ ೧೩೫ ಕೆ.ಜಿ ಮಾತ್ರ ಭಾರ ಎತ್ತಲು ಸಫಲಗೊಂಡರು. ಆದರೆ, ಮೊಹಮ್ಮದ್‌ ಅನಿಕ್‌ ಕೊನೇ ಪ್ರಯತ್ನದಲ್ಲಿ ೧೪೨ ಕೆ.ಜಿ ಭಾರ ಎತ್ತಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಕ್ಲೀನ್ ಆಂಡ್‌ ಜರ್ಕ್‌ ವಿಭಾಗದ ತಮ್ಮ ಕೊನೇ ಯತ್ನದಲ್ಲಿ ಸಂಕೇತ್ ಸಾಗರ್‌ ಗಾಯಗೊಂಡರು. ಹೀಗಾಗಿ ಅವರಿಗೆ ಹೆಚ್ಚು ಭಾರ ಎತ್ತಲು ಸಾಧ್ಯವಾಗಿಲ್ಲ. ಈ ಕಾರಣಕ್ಕೆ ಒಂದು ಕೆ.ಜಿ ತೂಕದ ಅಂತರದಲ್ಲಿ ಚಿನ್ನದ ಪದಕದ ಅವಕಾಶ ಕಳೆದುಕೊಂಡರು.

ಅಭಿನಂದನೆಗಳ ಸುರಿಮಳೆ

ಭಾರತಕ್ಕೆ ಮೊದಲ ಪದಕ ತಂದುಕೊಟ್ಟ ಸಂಕೇತ್‌ ಸರ್ಗರ್‌ಗೆ ದೇಶದ ಗಣ್ಯರನೇಕರು ಶುಭಾಶಯಗಳನ್ನು ತಿಳಿಸಿದ್ದಾರೆ. ಮಾಜಿ, ಹಾಲಿ ಕ್ರೀಡಾಪಟುಗಳು, ರಾಜಕಾರಣಿಗಳು, ರಾಷ್ಟ್ರ ನಾಯಕರು ಶುಭ ಹಾರೈಕೆಗಳನ್ನು ತಿಳಿಸಿದ್ದಾರೆ.

ಇನ್ನೂ ಇದೆ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇಂದು ಕಣದಲ್ಲಿರುವ ಭಾರತೀಯರು ಯಾರು?

Exit mobile version