ಮುಂಬಯಿ: ಬಹು ಕಾಲದ ನಿರೀಕ್ಷೆ, ಕುತೂಹಲ, ಊಹಾಪೋಹಗಳಿಗೆ ಕೊನೆಗೂ ತೆರೆ ಎಂಬಂತೆ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಕೆ.ಎಲ್. ರಾಹುಲ್(Athiya Shetty KL Rahul wedding) ಮತ್ತು ಬಾಲಿವುಡ್ ತಾರೆ ಅಥಿಯಾ ಶೆಟ್ಟಿ(Athiya kl rahul marriage) ಇಂದು ಸೋಮವಾರ(ಜನವರಿ 23) ಖಾಸಗಿ ಸಮಾರಂಭದಲ್ಲಿ ಸಪ್ತಪದಿ ತುಳಿದಿದ್ದಾರೆ. ಈ ವಿಚಾರವನ್ನು ಅಥಿಯಾ ಶೆಟ್ಟಿ ಅವರ ತಂದೆ ಸುನೀಲ್ ಶೆಟ್ಟಿ ಅವರು ಮಾಧ್ಯಮದವರಿಗೆ ಖಚಿತಪಡಿಸಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿ ವೇಳೆಗೆ ತನಗೆ ಬಿಡುವುಬೇಕೆಂದು ಕೆ.ಎಲ್ ರಾಹುಲ್, ಬಿಸಿಸಿಐ ಮುಂದೆ ಮನವಿಯನ್ನು ಸಲ್ಲಿಸಿದಾಗಲೇ ರಾಹುಲ್-ಅಥಿಯಾ ಮದುವೆಯ(Athiya Shetty KL Rahul wedding) ಊಹಾಪೋಹಗಳು ಗರಿಗೆದರಿದ್ದವು. ಖಂಡಾಲಾದಲ್ಲಿರುವ ಸುನೀಲ್ ಶೆಟ್ಟಿ ಅವರ ಐಷಾರಾಮಿ ಬಂಗಲೆಯಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವದಂತಿಗಳು ದಟ್ಟವಾಗಿ ಹರಡಿದ್ದವು. ಈ ವದಂತಿ ಕೊನೆಗೂ ನಿಜವಾಗಿ ಈ ವರೆಗಿನ ಎಲ್ಲ ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ.
ಜನವರಿ 23ರ ಸೋಮವಾರದಂದು ಖಂಡಾಲಾದಲ್ಲಿರುವ ನಟ ಸುನೀಲ್ ಶೆಟ್ಟಿ(suniel Shetty) ಅವರ ಫಾರ್ಮ್ ಹೌಸನಲ್ಲಿ ಈ ಇಬ್ಬರ ಮದುವೆ ಅದ್ಧೂರಿಯಾಗಿ ನಡೆದಿದೆ. ಸಂಜೆ 4.15 ರ ಸುಮಾರಿಗೆ ಅಥಿಯಾ ಮತ್ತು ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ರಾಹುಲ್ ಹಾಗೂ ಅಥಿಯಾ(Athiya Shetty KL Rahul wedding) ಮದುವೆಯಾಗುವುದು ಖಚಿತ ಎಂದು ತಿಳಿದ ಬಳಿಕ ಮಾಧ್ಯಮ ವರದಿಗಾರರು ಈ ಜೋಡಿಯ ಬಳಿ ಎಷ್ಟೋ ಬಾರಿ ಮದುವೆ ದಿನಾಂಕದ ವದಂತಿ ಕುರಿತು ಸ್ಪಷ್ಟನೆ ಕೇಳಿದ್ದಾರೆ. ಆದರೆ ಈ ಜೋಡಿ ಎಲ್ಲಿಯೂ ತುಟಿ ಬಿಚ್ಚಿರಲಿಲ್ಲ. ಇದೀಗ ಕೊನೆಗೂ ರಾಹುಲ್ ಅವರು ಅಥಿಯಾ ಅವರನ್ನು ಮದುವೆಯಾಗುವುದರ ಮೂಲಕ ತಮ್ಮ ಜೀವನದ ದ್ವಿತೀಯ ಇನಿಂಗ್ಸ್ ಆರಂಭಿಸಿದ್ದಾರೆ.
ಇದನ್ನೂ ಓದಿ | Athiya Shetty KL Rahul wedding: ಬೆಂಗಳೂರಿನಲ್ಲಿಯೂ ನಡೆಯಲಿದೆ ರಾಹುಲ್-ಅಥಿಯಾ ಜೋಡಿಯ ಆರತಕ್ಷತೆ?