Site icon Vistara News

ಗಿಲ್‌ ತಂಗಿ ಜತೆ ಕಾಣಿಸಿಕೊಂಡ ಸಾರಾ ತೆಂಡೂಲ್ಕರ್​; ಅಣ್ಣನ ಮದುವೆ ಯಾವಾಗ ಎಂದ ನೆಟ್ಟಿಗರು!

shahneel gill and sara tendulkar

ಮುಂಬಯಿ: ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್(Shubman Gill)​ ​ ಮತ್ತು ಕ್ರಿಕೆಟ್​ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರಿ ಸಾರಾ ತೆಂಡೂಲ್ಕರ್(Sara Tendulkar) ಡೇಟಿಂಗ್‌ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಆಗಾಗ ಮುನ್ನಲೆಗೆ ಬರುತ್ತಲೇ ಇರುತ್ತದೆ. ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ವೇಳೆ ಗಿಲ್​ ಪಂದ್ಯ ವೀಕ್ಷಿಸಲೆಂದೇ ಸಾರಾ ಕೂಡ ಸ್ಟೇಡಿಯಂಗೆ ಬರುತ್ತಿದ್ದರು. ಅಲ್ಲದೆ ಗಿಲ್​ ಸಾಧನೆಗೆ ಗ್ಯಾಲರಿಯಲ್ಲಿ ಎದ್ದು ನಿಂತು ಚಪ್ಪಾಳೆ ತಟ್ಟಿ ಪ್ರಶಂಸಿಸಿದ್ದ ವಿಡಿಯೊ ಮತ್ತು ಫೋಟೊಗಳು ವೈರಲ್​ ಆಗಿತ್ತು. ಆದರೂ, ಈ ಜೋಡಿ ಡೇಟಿಂಗ್​ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ! ಇದೀಗ ಸಾರಾ ಮತ್ತು ಗಿಲ್​ ತಂಗಿ ಜತೆಯಾಗಿ ಒಂದೇ ಕಾರಿನಲ್ಲಿ ಪ್ರಯಾಣ ಬೆಳೆಸಿದ ವಿಡಿಯೊ ವೈರಲ್(​Viral Video) ಆಗಿದ್ದು, ಗಿಲ್​ ಮತ್ತು ಸಾರಾ ನಡುವೆ ಲವ್​ ಇರುವುದು ಖಚಿತ ಎಂದು ನೆಟ್ಟಿಗರು ಹೇಳಿದ್ದಾರೆ.

ಶುಭಮನ್ ಗಿಲ್​ ಅವರ ಸಹೋದರಿ ಶಹನೀಲ್ ಗಿಲ್ (Shahneel Gill) ಮತ್ತು ಸಾರಾ ತೆಂಡೂಲ್ಕರ್​ ಮುಂಬೈಯಲ್ಲಿ ಕಾರಿನಲ್ಲಿ ಜತೆಯಾಗಿ ಹೋಗುತ್ತಿರುವುದನ್ನು ಕೆಲವರು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೊ ಮಾಡುವಾಗ ಸಾರಾ ತಮ್ಮ ಮುಖ ಮುಚ್ಚಿಕೊಂಡು ಮರೆಮಾಚಲು ಯತ್ನಿಸಿಸಿದ್ದಾರೆ. ಇದನ್ನು ವಿಡಿಯೊದಲ್ಲಿ ಕಾಣಬಹುದು.

ಸಾರಾ ಜತೆ ಗಿಲ್ ಸಹೋದರಿ ಶಹನೀಲ್ ಕಾಣಿಸಿಕೊಂಡ ತಕ್ಷಣ ನೆಟ್ಟಿಗರು ಗಿಲ್​ ಮತ್ತು ಸಾರಾ ಡೇಟಿಂಗ್‌ ನಡೆಸುತ್ತಿರುವುದು ನೂರಕ್ಕೆ ನೂರು ಸತ್ಯ ಎಂದು ಹೇಳಲಾರಂಭಿಸಿದ್ದಾರೆ. ಇತ್ತೀಚಿನ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್, ಗಿಲ್ ನನ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಅವರು ಬೇರೆ ಸಾರಾ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಕ್ರಿಕೆಟ್​ ಅಭಿಮಾನಿಗಳೇ ನೀವು ತಪ್ಪು ಹೇಳುತ್ತಿದ್ದೀರಿ. ಸಾರಾ ಕಾ ಸಾರಾ ದುನಿಯಾ ಗಲಾತ್ ಸಾರಾ ಕೆ ಪೀಚೆ ಪಡಾ ಹೈ (ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ) ಎಂದು ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಈ ಮೂಲಕ ಗಿಲ್ ಅವರ ಕ್ರಸ್​ ಸಾರಾ ತೆಂಡೂಲ್ಕರ್​ ಎನ್ನುವ ಸುಳುವು ನೀಡಿದ್ದರು.

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. 

ಇದನ್ನೂ ಓದಿ Sara Tendulkar: ತಮ್ಮ ಹೆಸರಿನ ಪರೋಡಿ ಖಾತೆ ಮುಚ್ಚಲು ಎಕ್ಸ್‌ಗೆ ಸಾರಾ ತೆಂಡುಲ್ಕರ್ ಆಗ್ರಹ!

ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಸಾರಾ-ಗಿಲ್​

ಏಕದಿನ ವಿಶ್ವಕಪ್​ ಪಂದ್ಯವನ್ನಾಡಲು ಟೀಮ್​ ಇಂಡಿಯಾದ ಆಟಗಾರರು ಮುಂಬೈಗೆ ಬಂದಿದ್ದ ವೇಳೆ ಶುಭಮನ್​ ಗಿಲ್​ ಮತ್ತು ಸಾರಾ ಅವರು ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರೆಸ್ಟೋರೆಂಟ್‌ನಿಂದ ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್​ ಗಿಲ್​ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪತವನ್ನು ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಿದ್ದರು. 

Exit mobile version