Site icon Vistara News

ನಂ.1 ಬ್ಯಾಟರ್​ ಶುಭಮನ್​ಗೆ ಲವ್ಲಿಯಾಗಿ ಅಭಿನಂದಿಸಿದ ಸಾರಾ ತೆಂಡೂಲ್ಕರ್

gill and sara

ಮುಂಬಯಿ: ಟೀಮ್​ ಇಂಡಿಯಾದ ಸ್ಟಾರ್​ ಯುವ ಆಟಗಾರ ಶುಭಮನ್​ ಗಿಲ್(Gill And Sara)​ ಅವರು ಬುಧವಾರ ಪ್ರಕಟಗೊಂಡ ಐಸಿಸಿ ನೂತನ ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿದ್ದಾರೆ. ಇದೇ ವಿಚಾರವಾಗಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್(sachin tendulkar) ಅವರ ಪುತ್ರಿ ಸಾರಾ ತೆಂಡೂಲ್ಕರ್ (sara tendulkar) ಅವರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಮಾಡಿರುವ ಪೋಸ್ಟ್​ ಒಂದು ಈಗ ಬಾರಿ ಸದ್ದು ಮಾಡುತ್ತಿದೆ.

ಸಾರಾ ಪೋಸ್ಟ್​ನಲ್ಲಿ ಏನಿದೆ?

ಶುಭಮನ್​ ಗಿಲ್​(shubman gill) ಅವರ ಪ್ರೇಯಸಿ ಎಂದು ಹೇಳಲಾಗುತ್ತಿರುವ ಸಾರ ತೆಂಡೂಲ್ಕರ್​ ಅವರು ತಮ್ಮ ಟ್ವೀಟರ್ ಎಕ್ಸ್​​ ಖಾತೆಯಲ್ಲಿ ‘ವಿಶ್ವದ ನಂ.1 ಬ್ಯಾಟರ್​, ಶುಭಮನ್​ ಗಿಲ್’ ಎಂದು ಬರೆದು ಹಾರ್ಟ್​ ಮತ್ತು ಲವ್​ ಸಿಂಬಲ್​ನ ಎಮೊಜಿಯನ್ನು ಹಾಕಿದ್ದಾರೆ. ಈ ಟ್ವೀಟ್​ ನಕಲಿಯಂತೆ ಕಾಣುತ್ತಿಲ್ಲ ಕಾರಣ ಇಲ್ಲಿ ಬ್ಲ್ಯೂ ಟಿಕ್​ ಕೂಡ ಇದೆ. ಹೀಗಾಗಿ ಸಾರಾ ಅವರೇ ಇದನ್ನು ತಮ್ಮ ತಮ್ಮ ಅಧಿಕೃತ ಖಾತೆಯಿಂದ ಪೋಸ್ಟ್​ ಮಾಡಿದಂತಿದೆ. ಆದರೂ ಇದರ ಬಗ್ಗೆ ಖಚಿತತೆ ಇಲ್ಲ.

ಮುಂಬೈನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಶುಭಮನ್​ ಗಿಲ್​ ಅವರು 92 ರನ್ ಗಳಿಸಿ ಕೇವಲ 8 ರನ್‌ಗಳಿಂದ ಶತಕವಂಚಿತರಾದಗ ಪ್ರೇಕ್ಷರಕ ಸ್ಟ್ಯಾಂಡ್​ನಲ್ಲಿ ಕುಳಿತ್ತಿದ್ದ ಸಾರಾ ತೆಂಡೂಲ್ಕರ್ ಕೂಡ ಬೇಸರ ಗೊಂಡಿದ್ದರು. ಇದು ಕ್ಯಾಮೆರ ಕಣ್ಣಲ್ಲಿ ಸೆರೆಯಾಗಿತ್ತು. ಆ ಬಳಿಕ ಉತ್ತಮ ಪ್ರದರ್ಶನ ತೋರಿದ್ದಕ್ಕಾಗಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.

ಸಾರಾ ತೆಂಡೂಲ್ಕರ್ ಮತ್ತು ಗಿಲ್ ಡೇಟಿಂಗ್ ಸುದ್ದಿ ಕಳೆದ ಒಂದು ವರ್ಷದಿಂದ ಜಗತ್ತು ಸುತ್ತುತ್ತಿದೆ. ಆದಾಗ್ಯೂ, ಇಬ್ಬರೂ ವದಂತಿಯನ್ನು ನಿರಾಕರಿಸಿಲ್ಲ ಅಥವಾ ದೃಢಪಡಿಸಿಲ್ಲ. ಪಾಪರಾಜಿಗಳು ಇಬ್ಬರು ಸೆಲೆಬ್ರಿಟಿಗಳನ್ನು ಸಾರ್ವಜನಿಕವಾಗಿ ಸಾಕಷ್ಟು ಬಾರಿ ಪ್ರಶ್ನಿಸಿದ್ದಾರೆ. ಗಿಲ್ ಅವರನ್ನು ನೋಡಲು ಸಾರಾ ಮೈದಾನಕ್ಕೆ ಹೋಗುತ್ತಿರುವ ಕಾರಣ ಈ ಸುದ್ದಿಗೆ ಇನ್ನಷ್ಟು ಪುಷ್ಟಿ ಸಿಕ್ಕಿದೆ.

ಇದನ್ನೂ ಓದಿ ICC Rankings: ಶುಭಮನ್​ ಗಿಲ್​ ನಂ.1 ಬ್ಯಾಟರ್​, ಸಿರಾಜ್​ ನಂ.1 ಬೌಲರ್​

ಸ್ಪಷ್ಟನೆ ನೀಡಿದ ಸಾರಾ ಅಲಿ ಖಾನ್

ಇತ್ತೀಚಿನ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್ ಗಿಲ್ ನನ್ನೊಂದಿಗೆ ಡೇಟಿಂಗ್ ಮಾಡುತ್ತಿಲ್ಲ. ಅವರು ಬೇರೆ ಸಾರಾ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಹೇಳುವ ಅಭಿಮಾನಿಗಳ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿದ್ದರು. ಕ್ರಿಕೆಟ್​ ಅಭಿಮಾನಿಗಳೇ ನೀವು ತಪ್ಪು ಹೇಳುತ್ತಿದ್ದೀರಿ. ಸಾರಾ ಕಾ ಸಾರಾ ದುನಿಯಾ ಗಲಾತ್ ಸಾರಾ ಕೆ ಪೀಚೆ ಪದಾ ಹೈ (ಇಡೀ ಜಗತ್ತು ತಪ್ಪಾದ ಸಾರಾಳ ಹಿಂದೆ ಬಿದ್ದಿದೆ) ಎಂದು ಸಾರಾ ಅಲಿ ಖಾನ್ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದಾರೆ. ಈ ಮೂಲಕ ಗಿಲ್ ನೆಚ್ಚಿನ ಸಾರಾ ನಾನಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ.

ಗಿಲ್ ಸಾರಾ ತೆಂಡೂಲ್ಕರ್ ಅವರೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬುದು ಸುದ್ದಿ. ಆದರೆ, ಕೆಲವೊಂದು ಬಾರಿ ಸಾರಾ ಅಲಿ ಖಾನ್ ಅವರೊಂದಿಗೆ ಕಾಣಿಸಿಕೊಂಡಿದ್ದರು. ಬಾಲಿವುಡ್ ನಟ ಮತ್ತು ಭಾರತೀಯ ಆರಂಭಿಕ ಆಟಗಾರ ಒಮ್ಮೆ ಹೋಟೆಲ್​ನಲ್ಲಿಯೂ ಕಾಣಿಸಿಕೊಂಡರು. ಈ ವೇಳೆ ಗಿಲ್ ಮತ್ತು ಸಾರಾ ಅಲಿ ಖಾನ್ ಹೊಸ ಜೋಡಿ ಎಂಬ ವದಂತಿಗಳು ಹರಿದಾಡಿದವು. ಆದಾಗ್ಯೂ, ಇತ್ತೀಚಿನ ಕಾಫಿ ವಿತ್ ಕರಣ್ ಸಂಚಿಕೆಯಲ್ಲಿ, ಸಾರಾ ಅಲಿ ಖಾನ್ ಅವರು ಗಿಲ್ ಅವರೊಂದಿಗೆ ಡೇಟಿಂಗ್ ಮಾಡುತ್ತಿಲ್ಲ ಎಂದು ದೃಢಪಡಿಸಿದ್ದಾರೆ. ಹೀಗಾಗಿ ಎಲ್ಲರ ನಿರೀಕ್ಷೆಯ ಸಾರಾ ಯಾರು ಎಂಬುದು ಗೊತ್ತಾಗಿದೆ.

Exit mobile version