Site icon Vistara News

ಗಿಲ್​ ಔಟಾಗುತ್ತಿದ್ದಂತೆ ಬೇಸರಗೊಂಡ ಸಾರಾ ತೆಂಡೂಲ್ಕರ್​; ವಿಡಿಯೊ ವೈರಲ್​

Sara Tendulkar's Reaction

ಮುಂಬಯಿ: ಟೀಮ್​ ಇಂಡಿಯಾ ಗುರುವಾರ ನಡೆದ ವಿಶ್ವಕಪ್​ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಅಮೋಘ ಗೆಲುವು ಸಾಧಿಸಿ ಸೆಮಿಫೈನಲ್​ ಪ್ರವೇಶಿಸಿದೆ. ಇದೇ ಪಂದ್ಯದಲ್ಲಿ 92 ರನ್​ ಗಳಿಸಿದ ವೇಳೆ ಶುಭಮನ್​ ಗಿಲ್​ ಅವರು ವಿಕೆಟ್​ ಕೈಚೆಲ್ಲಿ ಕೇವಲ 8 ರನ್​ ಅಂತರದಲ್ಲಿ ಶತಕ ವಂಚಿತರಾದರು. ಗಿಲ್​ ಔಟಾಗುತ್ತಿದ್ದಂತೆ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಸಚಿನ್​ ತೆಂಡೂಲ್ಕರ್​ ಅವರ ಪುತ್ರಿ ಸಾರಾ ತೆಂಡೂಲ್ಕರ್​ ಕೂಡ ಬೇಸರಗೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

​8 ರನ್​ಗಳಿಸಿದ​ ವೇಳೆ ಜೀವದಾನ ಪಡೆದ ಗಿಲ್​ ಅವರು ಆರಂಭದಲ್ಲಿ ಅತ್ಯಂತ ನಿಧಾನಗತಿಯ ಬ್ಯಾಟಿಂಗ್​ ನಡೆಸಿದರು. ಆ ಬಳಿಕ ವಿರಾಟ್ ಕೊಹ್ಲಿ ಜತೆ ಉತ್ತಮ ಇನಿಂಗ್ಸ್​ ಕಟ್ಟಿದ ಅವರು ಅರ್ಧಶತಕ ಗಳಿಸಿದ ತಕ್ಷಣ ಬಿರುಸಿನ ಆಟಕ್ಕೆ ಒತ್ತ ನೀಡಿದರು. ಸಿಕ್ಸರ್​ ಮತ್ತು ಬೌಂಡರಿಗಳ ಮೂಲಕ ಶತಕ ಬಾರಿಸುವ ಸೂಚನೆ ನೀಡಿದರು. ಬೌಂಡರಿ ಬಾರಿಸಿ 92 ರನ್​ಗಳಿಸಿದ ವೇಳೆ ಮುಂದಿನ ಎಸೆತವನ್ನು ‘ಹುಕ್​ ಶಾಟ್​’ ಹೊಡೆಯುವ ಯತ್ನದಲ್ಲಿ ಎಡವಿ ಕೀಪರ್​ ಕೈಗೆ ಕ್ಯಾಚ್​ ನೀಡಿದರು. ಔಟಾದ ಬೇಸರದಲ್ಲಿ ಗಿಲ್​ ತಮ್ಮ ಕೈಗಳನ್ನು ಬ್ಯಾಟ್​ಗೆ ಬಡಿದು ನಿರಾಸೆಯಿಂದ ಪೆವಿಲಿಯನ್​ ಕಡೆಗೆ ಹೆಚ್ಚೆ ಹಾಕಿದರು.

ಗಿಲ್​ ಅವರು ಔಟಾಗುತ್ತಿದ್ದಂತೆ ಗ್ಯಾಲರಿಯಲ್ಲಿದ್ದ ಪ್ರೇಕ್ಷರು ಕೂಡ ಶತಕದಿಂದ ವಂಚಿತರಾದರಲ್ಲ ಎಂದು ಬೇಸರಗೊಂಡರು. ಅತ್ತ ಗಿಲ್​ ಅವರ ಪ್ರೇಯಸಿ ಎಂದು ಹೇಳಲಾಗುತ್ತಿರುವ ಸಾರಾ ತೆಂಡೂಲ್ಕರ್​ ಕೂಡ ಗಿಲ್​ ಶತಕ ತಪ್ಪಿಸಿಕೊಂಡ ಬೇಸರದಲ್ಲಿ ತಲೆ ಕೆಳಗೆ ಹಾಕಿ ತಮ್ಮ ಮುಖವನ್ನು ಎರಡು ಕೈಗಳಿಂದ ಮರೆಮಾಡಿದರು. ಬಳಿಕ ಉತ್ತಮ ಆಟವಾಡಿದಕ್ಕೆ ಪ್ರೋತ್ಸಾಹಿಸುವ ಸಲುವಾಗಿ ಚಪ್ಪಾಳೆ ತಟ್ಟಿದರು. ಈ ದೃಶ್ಯವನ್ನು ಕ್ಯಾಮೆರಮೇನ್ ಸೆರೆಹಿಡಿದಿದ್ದಾರೆ. ನೆಟ್ಟಿಗರು ಈ ದೃಶ್ಯವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತಮ್ಮದೇ ಆದ ಕಲ್ಪನೆಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ.​

ಗಿಲ್​ ಅವರು ವಿರಾಟ್​ ಜತೆ ಸೇರಿಕೊಂಡು ಉತ್ತಮ ಜತೆಯಾಟ ನಿಭಾಯಿಸುವ ಮೂಲಕ ದ್ವಿತೀಯ ವಿಕೆಟ್​ಗೆ ಬರೋಬ್ಬರಿ 189 ರನ್​ ಒಟ್ಟು ಸೇರಿಸಿದ್ದರು. ಒಟ್ಟು 92 ಎಸೆತಗಳಿಂದ 92 ರನ್​ ಗಳಿಸಿ ಮಧುಶಂಕ ಅವರಿಗೆ ವಿಕೆಟ್​ ಒಪ್ಪಿಸಿದರು. ಅವರ ಈ ಇನಿಂಗ್ಸ್​ನಲ್ಲಿ 2 ಸಿಕ್ಸರ್​ ಮತ್ತು 11 ಬೌಂಡರಿ ಸಿಡಿದಿತ್ತು.

ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದ ಸಾರಾ-ಗಿಲ್​

ಈ ಪಂದ್ಯವನ್ನಾಡಲು ಟೀಮ್​ ಇಂಡಿಯಾದ ಆಟಗಾರರ ಮುಂಬೈಗೆ ಬಂದಿದ್ದ ವೇಳೆ ಶುಭಮನ್​ ಗಿಲ್​ ಮತ್ತು ಸಾರಾ ಅವರು ರೆಸ್ಟೋರೆಂಟ್​ನಲ್ಲಿ ಜತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರು ಜತೆಯಾಗಿ ಕಾಣಿಸಿಕೊಂಡ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದನ್ನೂ ಓದಿ IND vs SL: ಜಹೀರ್​ ಖಾನ್​,ಜಾವಗಲ್ ಶ್ರೀನಾಥ್ ದಾಖಲೆ ಮುರಿದ ಮೊಹಮ್ಮದ್​ ಶಮಿ

ಈ ವಿಡಿಯೊದಲ್ಲಿ ರೆಸ್ಟೋರೆಂಟ್‌ನಿಂದ ಶುಭಮನ್​ ಗಿಲ್​ ಮತ್ತು ಸಾರ ಜತೆಯಾಗಿ ಹೊರಬರುತ್ತಿರುವುದು ಕಾಣಬಹುದಾಗಿದೆ. ಸಾರಾ ಜತೆಗೆ ಬರುತ್ತಿರುವುದನ್ನು ಪಾಪರಾಜಿಗಳು ಕಂಡ ತಕ್ಷಣ ಶುಭಮನ್​ ಗಿಲ್​ ತನಗೇನು ತಿಳಿಯದವರಂತೆ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ಇದೊಂದು ಅಚಾನಕ್ ಮುಖಾಮುಖಿ ಎಂಬಂತೆ ತಮ್ಮ ಪತವನ್ನು ಬದಲಿಸಿ ಒಮ್ಮೆ ಅತ್ತಿಂದಿತ್ತ ಇತ್ತಿಂದತ್ತ ನಡೆದಿದ್ದರು. ಬಳಿಕ ತಮ್ಮ ಮೊಬೈಲ್​ ಫೋನ್​ ತೆಗೆದು ಒಂದೆರಡು ಬಾರಿ ನೋಡಿದವರಂತೆ ಮಾಡಿದ್ದರು. ಇದೆಲ್ಲ ವಿಡಿಯೊದಲ್ಲಿ ಸೆರೆಯಾಗಿತ್ತು. ಅಂತು ಇವರಿಬ್ಬರು ಪ್ರೀತಿಯಲ್ಲಿ ಇದ್ದಾರೆ ಹಲವು ಘಟನೆಯಿಂದ ಸಾಬೀತಾಗುತ್ತಿದೆ. ಇದಕ್ಕೆ ಅಧಿಕೃತ ಮುದ್ರೆಯೊಂದೆ ಬೀಳಲು ಬಾಕಿ ಉಳಿದಿದೆ.

Exit mobile version