ದೋಹಾ: ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್‌ನೊಂದಿಗೆ ಆಡುವ ಯಾವುದೇ ಒಪ್ಪಂದವಾಗಿಲ್ಲ ಎಂದು ಪೋರ್ಚುಗಲ್ ತಂಡದ ಸ್ಟಾರ್ ಫುಟ್ಬಾಲಿಗ ಕ್ರಿಸ್ಟಿಯಾನೊ ರೊನಾಲ್ಡೊ(Cristiano Ronaldo) ಸ್ಪಷ್ಟನೆ ನೀಡಿದ್ದಾರೆ.
ಮ್ಯಾಂಚೆಸ್ಟರ್ ಯುನೈಟೆಡ್ ಕ್ಲಬ್‌ನೊಂದಿಗೆ ಒಪ್ಪಂದ ಮುರಿದು ಬಿದ್ದ ಬಳಿಕ ರೊನಾಲ್ಡೊ ಅವರು ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್‌ನೊಂದಿಗೆ ಭಾರಿ ಮೊತ್ತಕ್ಕೆ ಒಪ್ಪಂದ ಮಾಡಿಕೊಂಡಿದ್ದಾರೆ ಜತೆಗೆ ಕ್ಲಬ್ ಪರ ಆಡಲು ಸಹಿಯನ್ನು ಹಾಕಿದ್ದಾರೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು. ಈ ಊಹಾಪೋಹಗಳ ಕುರಿತು ಇದೀಗ ಸ್ಪಷ್ಟನೆ ನೀಡಿರುವ ರೊನಾಲ್ಡೊ, ನಾನು ಯಾವುದೇ ಕ್ಲಬ್‌ನೊಂದಿಗೆ ಒಪ್ಪಂದ ಮಾಡಿಕೊಂಡಿಲ್ಲ ಎಂದು ಹೇಳುವ ಮೂಲಕ ಸೌದಿ ಅರೇಬಿಯಾದ ಅಲ್ ನಸ್ರ್ ಕ್ಲಬ್‌ನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವ ಸುದ್ದಿಯನ್ನು ನಿರಾಕರಿಸಿದ್ದಾರೆ.
ರೊನಾಲ್ಡೊ ಕಳೆದ ತಿಂಗಳು ಮ್ಯಾಂಚೆಸ್ಟರ್ ಯುನೈಟೆಡ್ ವ್ಯವಸ್ಥಾಪಕ ಮತ್ತು ಕ್ಲಬ್‌ನ ಮಾಲಕರೊಂದಿಗೂ ಮನಸ್ತಾಪ ಮಾಡಿಕೊಂಡು ಅಂತಿಮವಾಗಿ ಕ್ಲಬ್ಗೆ ಗುಡ್ಬೈ ಹೇಳಿದ್ದರು. ಸದ್ಯ ರೊನಾಲ್ಡೊರ ಗೋಲು ಹೊಡೆಯುವ ಚಮತ್ಕಾರ ಮಸುಕಾಗಿರುವುದರಿಂದ ವಿಶ್ವ ಕಪ್ ಮುಕ್ತಾಯವಾದ ಬಳಿಕ ಪ್ರಸಿದ್ಧ ಕ್ಲಬ್‌ವೊಂದರಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಅವರಿಗೆ ಕಠಿಣವಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಡ್ಡಿಯಿಲ್ಲ.
ಇದನ್ನೂ ಓದಿ | Fifa World Cup | ತಂಡದಿಂದ ಹೊರಕ್ಕಿಟ್ಟಿದ್ದಕ್ಕೆ ಮುನಿಸು; ಗೆಲುವಿನ ಸಂಭ್ರಮಾಚರಣೆ ಮಾಡದ ರೊನಾಲ್ಡೊ