Site icon Vistara News

Gambhir vs Kohli : ಇದಕ್ಕೆ ಆಸ್ಕರ್​ ಕೊಡಲೇಬೇಕು; ಗಂಭೀರ್​- ಕೊಹ್ಲಿ ಅಪ್ಪುಗೆಗೆ ರವಿ, ಗವಾಸ್ಕರ್​ ಬಣ್ಣನೆ

IPL 2024- virat - Gambhir

ಬೆಂಗಳೂರು : ಐಪಿಎಲ್ 2024 ರ (IPL 2024) ಅತ್ಯಂತ ಆಶ್ಚರ್ಯಕರ ಕ್ಷಣಗಳಲ್ಲಿ ಒಂದು ಎಂಬಂತೆ ಹಳೆಯ ಶತ್ರುಗಳಾದ ವಿರಾಟ್ ಕೊಹ್ಲಿ (virat kohli) ಮತ್ತು ಗೌತಮ್ ಗಂಭೀರ್ (Gambhir vs Kohli ) ಮೈದಾನದಲ್ಲಿ ಪರಸ್ಪರ ಅಪ್ಪಿಕೊಂಡು ಮಾತನಾಡಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ನಡೆದ ರಾಯಲ್​ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ಹಾಗೂ ಕೆಕೆಆರ್​ ನಡುವೆ ಪಂದ್ಯದ ವೇಳೆ ಈ ಘಟನೆ ನಡೆದಿದೆ. ಇದು ಕ್ರಿಕೆಟ್​ ಕ್ಷೇತ್ರದ ಗಮನವನ್ನು ಸೆಳೆಯಿತು. ಈ ವೇಳೆ ವೀಕ್ಷಕ ವಿವರಣೆ ಮಾಡುತ್ತಿದ್ದ ರವಿ ಶಾಸ್ತ್ರಿ ಅವರು ಈ ಕ್ಷಣವನ್ನು ಅತ್ಯಂತ ಆಹ್ಲಾದಕರವಾಗಿ ವಿವರಿಸಿದ್ದಾರೆ. ಇದಕ್ಕೆ ನ್ಯಾಯಯುತ ಆಟ ಪ್ರಶಸ್ತಿಗಿಂತ ಹೆಚ್ಚಾಗಿ ಆಸ್ಕರ್ ಪ್ರಶಸ್ತಿಯನ್ನೇ ಕೊಡಬೇಕು ಎಂದಿದ್ದಾರೆ.

2013ರ ಐಪಿಎಲ್​ ವೇಳೆ ಕೊಹ್ಲಿ ಹಾಗೂ ಗಂಭೀರ್ ನಡುವಿನ ಗಲಾಟೆ ಶುರುವಾಗಿತ್ತು. ಅಲ್ಲಿಂದ ನಂತರ ಅವರ ಗಲಾಟೆ 10 ವರ್ಷ ಮುಂದುವರಿದಿತ್ತು. ಕಳೆದ ವರ್ಷವಂತೂ ಎಲ್​ಎಸ್​ಜಿಯ ನವಿನ್​ ಉಲ್ ಹಕ್​ ವಿಚಾರದಲ್ಲಿ ಇದು ದೊಡ್ಡ ಮಟ್ಟಿಗೆ ಮುಂದುವರಿದಿತ್ತು. ಹೀಗಾಗಿ ಈ ಬಾರಿಯೂ ಅದು ಮುಂದುವರಿಯಬಹುದು ಎಂದು ಹೇಳಲಾಗಿತ್ತು. ಅವರಿಬ್ಬರು ಮುಖಾಮುಖಿಯಾದ ಸಂದರ್ಭದಲ್ಲೆಲ್ಲ ಕ್ಯಾಮೆರಾ ಕಣ್ಣುಗಳು ಅವರತ್ತ ತಿರುಗುತ್ತಿದ್ದವು. ಆದರೆ ಈಗ ಒಂದೇ ಕ್ಷಣದಲ್ಲಿ ಚಿತ್ರಣ ಬದಲಾಗಿದೆ.

ಕೊಹ್ಲಿ ಮತ್ತು ಗಂಭೀರ್ ಏನು ಮಾತನಾಡಿದರು ಎಂಬುದು ಇನ್ನೂ ಗೊತ್ತಿಲ್ಲ. ಆದರೆ, ಅವರಿಬ್ಬರು ಪರಸ್ಪರ ವೈಯಕ್ತಿಕ ಕುಶಲೋಪರಿ ಮಾಡಿದ್ದಿರಬಹುದು ಎನ್ನಲಾಗಿದೆ. ಅಂದ ಹಾಗೆ ಆಸ್ಕರ್​ ಕೊಡುವುದು ಸಿನಿಮಾ ಕ್ಷೇತ್ರದ ಉತ್ತಮ ಚಲನ ಚಿತ್ರಗಳಿಗೆ. ಅದರಲ್ಲೂ ನಟನೆಗೆ ಹೆಚ್ಚು ಮೌಲ್ಯ. ಹೀಗಾಗಿ ಆಸ್ಕರ್​ ಎಂಬುದನ್ನು ಅವರಿಬ್ಬರು ಯಾವ ಅರ್ಥದಲ್ಲಿ ಹೇಳಿದರು ಎಂಬುದು ಪ್ರಶ್ನಾರ್ಥಕ ವಿಷಯ.

ಹಗೆತನ ಮರೆತು ‘ಹಗ್’ ಮಾಡಿದ ಕೊಹ್ಲಿ- ಗಂಭೀರ್​, ಇಲ್ಲಿದೆ ವಿಡಿಯೊ

ಬೆಂಗಳೂರು: ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ (Gambhir vs Kohli) ನಡುವಿನ ಜಿದ್ದಾಜಿದ್ದಿಯು ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಚರ್ಚೆಯ ವಿಷಯ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದ ವೇಳೆ ಇದು ಪುನರಾವರ್ತನೆಗೊಳ್ಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ, ಆದದ್ದೇ ಬೇರೆ. ಅವರಿಬ್ಬರೂ ‘ನೀನೆಂದೂ ನನ್ನವನು’ ಎಂಬ ಹಾಗೆ ಪರಸ್ಪರ ಅಪ್ಪಿಕೊಂಡು ಕುಶಲೋಪರಿ ವಿಚಾರಿಸಿದರು. ಈ ಪ್ರಸಂಗದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಯಿತು. ನೆಟ್ಟಿಗರು ಈ ದೃಶ್ಯದ ಬಗ್ಗೆ ತಮ್ಮ ಭಾನೆಗಳನ್ನು ನಿಯಂತ್ರಿಸಲಾಗದೇ ನಾನಾ ಬಗೆಯಲ್ಲಿ ಕಾಮೆಂಟ್ ಮಾಡಿದರು.

ಪಂದ್ಯದ 16 ನೇ ಓವರ್ ನಲ್ಲಿ ಟೈಮ್​ ಔಟ್ ವೇಳೆ ಈ ಆಹ್ಲಾದಕರ ಘಟನೆ ನಡೆಯಿತು. ಮೈದಾನಕ್ಕೆ ಬಂದಿದ್ದ ಕೋಚ್​ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಹೋಗಿ ಅರ್ಧಶತಕಕ್ಕಾಗಿ ಅವರನ್ನು ಅಭಿನಂದಿಸಿದರು. ವಿರಾಟ್ ಕೊಹ್ಲಿ ಕೂಡ ಚಂದದ ಅಪ್ಪುಗೆಯೊಂದಿಗೆ ಆತ್ಮೀಯವಾಗಿ ಪ್ರತಿಕ್ರಿಯಿಸಿದರು. ಇಬ್ಬರೂ ದಂತಕಥೆಗಳು ನಗುವಿನೊಂದಿಗೆ ಕೆಲವು ಮಾತುಗಳನ್ನು ವಿನಿಮಯ ಮಾಡಿಕೊಂಡಿರುವುದು ವಿಡಿಯೊದಲ್ಲಿ ಕಂಡು ಬಂತು.

ಈ ಹಿಂದೆ ಐಪಿಎಲ್​ನ ಅನೇಕ ಋತುಗಳಲ್ಲಿ ಹಲವಾರು ಬಾರಿ ಮಾತಿನ ಚಕಮಕಿಯಲ್ಲಿ ಭಾಗಿಯಾಗುವ ಮೂಲಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್​ ಪರಸ್ಪರ ವೈರಿಗಳೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರು. ಅವರ ನಡುವಿನ ಪೈಪೋಟಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದರಿಂದ ಈ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ತ್ವರಿತವಾಗಿ ಗಮನ ಸೆಳೆಯಿತು. ಟೀಮ್ ಇಂಡಿಯಾ ದಂತಕಥೆಗಳ ಸಕಾರಾತ್ಮಕ ಮನೋಭಾವದ ಬಗ್ಗೆ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದರು. ಈ ಮೂಲಕ ಅವರು ಜಿದ್ದು ಮರೆತು ರಾಜಿಯಾಗಿದ್ದಾರೆ ಎಂಬುದು ಖಾತರಿಯಾಯಿತು.

ನವಿನ್ ಜತೆಗೂ ರಾಜಿ

ಐಪಿಎಲ್ 2023 ರ ಜಗಳವು ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ವಾಗ್ವಾದಕ್ಕೆ ಮೂಲ ಕಾರಣವಾಗಿದ್ದ ನವೀನ್ ಉಲ್ ಹಕ್ ಅವರನ್ನೂ ಕಳೆದ ಏಕದಿನ ವಿಶ್ವ ಕಪ್ ವೇಳೆ ತಬ್ಬಿಕೊಂಡಿದ್ದರು. ಈ ವಿನಿಮಯದ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದೀಗ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಗಳವೂ ಮರೆತು ಹೋಗಿದೆ.

Exit mobile version