Site icon Vistara News

Ind vs Eng : ಎರಡನೇ ದಿನದಾಟ ಅಂತ್ಯ, ಇಂಗ್ಲೆಂಡ್​ ತಂಡದ ಮೇಲುಗೈ

Jurel

ರಾಂಚಿ: ಇಲ್ಲಿನ ಜಾರ್ಖಂಡ್​ ಕ್ರಿಕೆಟ್ ಅಸೋಸಿಯೇಷನ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರುವ ಟೆಸ್ಟ್​ ಸರಣಿಯ (Ind vs Eng) ನಾಲ್ಕನೇ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್​ ತಂಡ ಮೇಲುಗೈ ಸಾಧಿಸುತ್ತಿದೆ. ಇಂಗ್ಲೆಂಡ್​ ತಂಡ ಬಾರಿಸಿರುವ 353 ರನ್​ಗಳಿಗೆ ಪ್ರತಿಯಾಗಿ ಬ್ಯಾಟ್ ಮಾಡುತ್ತಿರುವ ಭಾರತ 7 ವಿಕೆಟ್ ನಷ್ಟಕ್ಕೆ 219 ರನ್ ಬಾರಿಸಿದ್ದಾರೆ. 2 ನೇ ದಿನದ ಮೊದಲ ಸೆಷನ್ ಅನ್ನು ಹೊರತುಪಡಿಸಿದರೆ ಪ್ರವಾಸಿ ತಂಡ ಪ್ರಾಬಲ್ಯ ಸಾಧಿಸಿತು. ಬೆನ್​ಸ್ಟೋಕ್ಸ್​ ಬಳ ದೊಡ್ಡ ಸ್ಕೋರ್ ಗಳಿಸಿದ್ದಲ್ಲದೆ, ಭಾರತೀಯರಿಗೆ ಬ್ಯಾಟಿಂಗ್ ವಿಭಾಗ ಕುಸಿಯುವಂತೆ ಮಾಡಿದರು. ಜೋ ರೂಟ್ ಅಜೇಯ 122 ರನ್ ಗಳಿಸಿ ಮಿಂಚಿದರೆಶೋಯೆಬ್ ಬಶೀರ್ ನಾಲ್ಕು ವಿಕೆಟ್ ಪಡೆದಿದ್ದಾರೆ.

ಮೊದಲ ದಿನದಾಟದ ಅಂತ್ಯಕ್ಕೆ 7 ವಿಕೆಟ್​ ನಷ್ಟಕ್ಕೆ 302 ರನ್​ ಬಾರಿಸಿದ್ದ ಇಂಗ್ಲೆಂಡ್​ ತಂಡ ಶನಿವಾರ ಬೆಳಗ್ಗೆ ಅದಕ್ಕೆ 51 ರನ್ ಸೇರಿಸಿತು. ಒಲಿ ರಾಬಿನ್ಸನ್ (58) ತಮ್ಮ ಚೊಚ್ಚಲ ಟೆಸ್ಟ್ ಅರ್ಧಶತಕವನ್ನು ಬಾರಿಸಿದರು. ಅವರು 96 ಎಸೆತಕ್ಕೆ ಬಳಸಿಕೊಂಡು 9 ಪೋರ್ ಹಾಗೂ 1 ಸಿಕ್ಸರ್ ಬಾರಿಸಿದರು. 274 ಎಸೆತ ಬಳಸಿಕೊಂಡಿರುವ ರೂಟ್​ 122 ರನ್ ಬಾರಿಸಿ ಅಜೇಯರಾಗಿ ಉಳಿದರು ಭಾರತದ ಪರ ರವೀಂದ್ರ ಜಡೇಜಾ 3 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ : Sarfaraz Khan : ರಣಜಿ ಟ್ರೋಫಿಯಲ್ಲಿ ಇತಿಹಾಸ ಸೃಷ್ಟಿಸಿದ ಸರ್ಫರಾಜ್ ಖಾನ್ ಸಹೋದರ

ಸ್ಪರ್ಧಾತ್ಮಕ ಮೊತ್ತಕ್ಕೆ ಪ್ರತಿಯಾಗಿ ಆಡಿದ ಭಾರತ ತಂಡ ಬ್ಯಾಟಿಂಗ್ ಕುಸಿತವನ್ನು ಎದುರಿಸಿತು. ರೋಹಿತ್ ಶರ್ಮಾ ಕೇವಲ 2 ರನ್​ಗಳಿಗೆ ಔಟಾಗಿ ಟೀಕೆಗೆ ಒಳಗಾದರು. ಆರಂಭಿಕ ಬ್ಯಾಟರ್​ ಯಶಸ್ವಿ ಜೈಸ್ವಾಲ್ 73 ರನ್ ಬಾರಿಸಿ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ವೈಭವ ತೋರಿದರು. ಆದರೆ, ಇಂಗ್ಲೆಮಡ್ ಸ್ಪಿನ್ನರ್​ಗಳಾದ ಶೋಯೆಬ್ ಬಶೀರ್​ (84 ರನ್​ಗಳಿಗೆ 4 ವಿಕೆಟ್​ ) ಹಾಗೂ ಟಾಮ್​ ಹಾರ್ಟ್ಲೆ 47 ರನ್​ಗಳಿಗೆ 2 ವಿಕೆಟ್​ ಪಡೆದರು. ಇವರಿಬ್ಬರು ಭಾರತದ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದರು.

ಭಾರತ ಪರ ರಜತ್​ ಪಾಟೀದಾರ್​ 17 ರನ್​ ಬಾರಿಸಿ ಮತ್ತೊಮ್ಮೆ ವೈಫಲ್ಯ ಕಂಡರೆ, ರವೀಂದ್ರ ಜಡೇಜಾ 2 ಸಿಕ್ಸರ್ ಸಮೇತ 12 ರನ್ ಬಾರಿಸಿ ಔಟಾದರು. ಸರ್ಫರಾಜ್ ಖಾನ್​ 14 ರನ್ ಬಾರಿಸಿ ಜೊ ರೂಟ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ದಿನದಾಟದ ಅಂತ್ಯಕ್ಕೆ ಧ್ರುವ್​ ಜುರೆಲ್​ 30 ರನ್ ಹಾಗೂ ಕುಲ್ದೀಪ್ ಯಾದವ್​ 17 ರನ್ ಬಾರಿಸಿ ಔಟಾಗದೇ ಉಳಿದಿದ್ದಾರೆ.

Exit mobile version