Site icon Vistara News

ದ್ವಿತೀಯ ಏಕದಿನ ಪಂದ್ಯದ ಸಮಯ ಬದಲಾವಣೆ; ಹವಾಮಾನ ವರದಿ ಹೇಗಿದೆ?

IND vs SA

ಗ್ಕೆಬರ್ಹಾ: ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು ಗೆದ್ದ ಜೋಶ್​ನಲ್ಲಿರುವ ಟೀಮ್​ ಇಂಡಿಯಾ ಇದೀಗ ಮತ್ತೊಂದು ಪಂದ್ಯವನ್ನಾಡಲು ಸಜ್ಜಾಗಿದೆ. ಮಂಗಳವಾರ ನಡೆಯುವ ಇತ್ತಂಡಗಳ ನಡುವಣ ದ್ವಿತೀಯ ಏಕದಿನ ಪಂದ್ಯದ(IND vs SA 2nd Odi) ಪಿಚ್​ ರಿಪೋರ್ಟ್​, ಹವಾಮಾನ ವರದಿ ಮತ್ತು ಸಂಭಾವ್ಯ ತಂಡಗಳ ಮಾಹಿತಿ ಇಂತಿದೆ.

ಮಳೆ ಭೀತಿ ಇದೆ

ಗ್ಕೆಬರ್ಹಾದ ಸೇಂಟ್ ಜಾರ್ಜ್ ಪಾರ್ಕ್​ನಲ್ಲಿ ನಡೆಯುವ ಈ ಪಂದ್ಯದಕ್ಕೆ ಮಳೆಯ ಭೀತಿ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದೇ ಸ್ಟೇಡಿಯಂನಲ್ಲಿ ನಡೆದಿದ್ದ ದ್ವಿತೀಯ ಟಿ20 ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿತ್ತು. ಬಳಿಕ ಪಂದ್ಯವನ್ನು 15 ಓವರ್​ಗೆ ಸೀಮಿತಗೊಳಿಸಿ ಆಡಿಸಲಾಗಿತ್ತು. ಆದರೆ ಮೊದಲು ಬ್ಯಾಟಿಂಗ್​ ನಡಸಿದ್ದ ಭಾರತ 19 ಬ್ಯಾಟಿಂಗ್​ ನಡೆಸಿತ್ತು. ಈ ವೇಳೆ ಮಳೆ ಕಾಡಿತ್ತು. ಇದೀಗ ಈ ಪಂದ್ಯಕ್ಕೂ ಮಳೆಯ ಭೀತಿ ಇದ್ದೇ ಇದೆ. ಮಳೆ ಬಂದು ಪಂದ್ಯ ರದ್ದಾದರು ಭಾರತಕ್ಕೆ ಯಾವುದೇ ಹಿನ್ನಡೆಯಾಗದು. ಏಕೆಂದರೆ ರಾಹುಲ್​ ಪಡೆ ಮೊದಲ ಪಂದ್ಯ ಗೆದ್ದು 1-0 ಮುನ್ನಡೆ ಕಾಯ್ದುಕೊಂಡಿದೆ.

ಇದನ್ನೂ ಓದಿ IPL Auction 2024: ಮಿನಿ ಹರಾಜಿಗೆ ಕ್ಷಣಗಣನೆ; ಬಹುಬೇಡಿಕೆಯ ಟಾಪ್​ 5 ಆಟಗಾರರು ಯಾರು?

ಪಿಚ್​ ರಿಪೋರ್ಟ್​

ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ನಡೆದ ಕೊನೆಯ ಐದು ಏಕದಿನ ಪಂದ್ಯಗಳಲ್ಲಿ ಬೌಲರ್​ಗಳೇ ಮೇಲುಗೈ ಸಾಧಿಸಿದ್ದಾರೆ. ಆದಾಗ್ಯೂ, ಆಟ ಸಾಗುತ್ತಲೇ ಹೋದಾಗ ಬ್ಯಾಟರ್​ಗಳು ಸಹಾಯವನ್ನು ಪಡೆಯಬಹುದು. ಮೊದಲು ಬ್ಯಾಟಿಂಗ್ ಮಾಡುವ ತಂಡದ ಸರಾಸರಿ ಇನ್ನಿಂಗ್ಸ್ 233 ಆಗಿರುತ್ತದೆ. ಚೇಸಿಂಗ್​ ನಡೆಸುವ ತಂಡಕ್ಕೆ ಇಲ್ಲಿ ಹೆಚ್ಚು ಸಹಕಾರಿ. ಹೀಗಾಗಿ ಟಾಸ್ ಗೆದ್ದ ತಂಡ ಬೌಲಿಂಗ್​ ಆಯ್ಕೆ ಮಾಡಬಹುದು.

ಸೇಂಟ್ ಜಾರ್ಜ್ ಪಾರ್ಕ್‌ ಏಕದಿನ ದಾಖಲೆ

ಈ ಸ್ಟೇಡಿಯಂನಲ್ಲಿ ಒಟ್ಟು 42 ಏಕದಿನ ಪಂದ್ಯಗಳು ನಡೆದಿವೆ. 21 ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದರೆ, ಪ್ರವಾಸಿ ತಂಡಗಳು 13 ಪಂದ್ಯಗಳಲ್ಲಿ ಮಾತ್ರ ಗೆದ್ದಿವೆ. 20 ಪಂದ್ಯಗಳಲ್ಲಿ ಮೊದಲು ಬ್ಯಾಟಿಂಗ್​ ನಡೆಸಿದ ಹಾಗೂ 21 ಬಾರಿ ಚೇಸಿಂಗ್​ ನಡೆಸಿದ ತಂಡಗಳು ಗೆಲುವು ಸಾಧಿಸಿದೆ. 330 ರನ್​ ಇಲ್ಲಿನ ಇದುವರೆಗಿನ ಗರಿಷ್ಠ ಚೇಸಿಂಗ್​ ಮೊತ್ತವಾಗಿದೆ.

ಭಾರತ ತಂಡ ಸೇಂಟ್ ಜಾರ್ಜ್ ಪಾರ್ಕ್‌ನಲ್ಲಿ ಇದುವರೆಗೆ 6 ಏಕದಿನ ಪಂದ್ಯಗಳನ್ನು ಆಡಿದೆ. ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ. 5 ರಲ್ಲಿ ಸೋಲು ಕಂಡಿದೆ. ದಕ್ಷಿಣ ಆಫ್ರಿಕಾ 35 ಪಂದ್ಯಗಳನ್ನು ಆಡಿ 21 ಗೆಲುವು, 13 ಸೋಲು ಕಂಡಿದೆ.

ಪಂದ್ಯ ಆರಂಭ

ಮೊದಲ ಪಂದ್ಯ ಭಾರತೀಯ ಕಾಲ ಮಾನ ಮಧ್ಯಾಹ್ನ 1.30ಕ್ಕೆ ಆರಂಭವಾಗಿತ್ತು. ಆದರೆ ದ್ವಿತೀಯ ಪಂದ್ಯ ಸಂಜೆ 4:30 ಕ್ಕೆ ಆರಂಭವಾಗಲಿದೆ. ಸ್ಟಾರ್​ ಸ್ಪೋರ್ಟ್ಸ್​ನಲ್ಲಿ ಪಂದ್ಯ ಪ್ರಸಾರವಾಗಲಿದೆ.

ಇದನ್ನೂ ಓದಿ IPL Auction 2024: ಐಪಿಎಲ್​ ಹರಾಜಿನಲ್ಲಿರುವ ಕರ್ನಾಟಕದ ಕಲಿಗಳು ಇವರು…

ಸಂಭಾವ್ಯ ತಂಡ

ಭಾರತ: ಕೆ.ಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ರಿಂಕು ಸಿಂಗ್, ತಿಲಕ್ ವರ್ಮಾ, ಸಂಜು ಸ್ಯಾಮ್ಸನ್, ಅಕ್ಷರ್ ಪಟೇಲ್, ಅರ್ಶ್​ದೀಪ್​ ಸಿಂಗ್, ಅವೇಶ್ ಖಾನ್, ಕುಲದೀಪ್ ಯಾದವ್, ಮುಖೇಶ್ ಕುಮಾರ್.

ದಕ್ಷಿಣ ಆಫ್ರಿಕಾ: ರೀಜಾ ಹೆಂಡ್ರಿಕ್ಸ್, ಟೋನಿ ಡಿ ಜೊರ್ಜಿ, ರಸ್ಸಿ ವಾನ್​ಡರ್​ ಡುಸ್ಸೆನ್, ಐಡೆನ್ ಮಾರ್ಕ್ರಾಮ್ (ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಆಂಡಿಲ್ ಫೆಹ್ಲುಕ್ವಾಯೊ, ಕೇಶವ್ ಮಹಾರಾಜ್, ನಾಂದ್ರೆ ಬರ್ಗರ್, ತಬ್ರೈಜ್ ಶಮ್ಸಿ.

Exit mobile version