ನಾಗ್ಪುರ : ಮಳೆಯಿಂದ ಬಾಧಿತಗೊಂಡಿರುವ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವಿನ ಟಿ೨೦ ಸರಣಿಯ ಎರಡನೇ ಪಂದ್ಯದಲ್ಲಿ ಪ್ರವಾಸಿ ತಂಡ ರೋಹಿತ್ ಶರ್ಮ ಬಳಗಕ್ಕೆ ೯೧ ರನ್‌ಗಳ ಗೆಲುವಿನ ಗುರಿಯನ್ನೊಡ್ಡಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ರೋಹಿತ್ ಶರ್ಮ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರೆ, ಮೊದಲು ಬ್ಯಾಟ್ ಮಾಡಿದ ಆರೋನ್ ಫಿಂಚ್ ಬಳಗ ೪ ವಿಕೆಟ್ ಕಳೆದುಕೊಂಡು ೯೦ ರನ್ ಪೇರಿಸಿತು.
ನಾಗ್ಪುರದ ವಿದರ್ಭ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯವು ಮಳೆಯಿಂದಾಗಿ ತಡವಾಗಿ ಆರಂಭಗೊಂಡಿತು. ಹೀಗಾಗಿ ಪಂದ್ಯವನ್ನು ೮ ಓವರ್‌ಗಳ ಇನಿಂಗ್ಸ್‌ಗೆ ಸೀಮಿತಗೊಳಿಸಲಾಯಿತು. ಇನಿಂಗ್ಸ್ ಆರಂಭಿಸಿದ ನಾಯಕ ಆರೋನ್ ಫಿಂಚ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಅವರು ೧೫ ಎಸೆತಗಳಲ್ಲಿ ೩೧ ರನ್ ಬಾರಿಸಿದರು. ಏತನ್ಮಧ್ಯೆ, ಭಾರತದ ಬೌಲರ್‌ಗಳು ಆಸೀಸ್ ಬ್ಯಾಟರ್‌ಗಳಿಗೆ ಕಡಿವಾಣ ಸ್ವಲ್ಪ ಮಟ್ಟಿಗೆ ಕಡಿವಾಣ ಹಾಕಿದರು. ಆದರೆ ಮ್ಯಾಥ್ಯೂ ವೇಡ್ ೧೯ ಎಸೆತಗಳಲ್ಲಿ ೪೩ ರನ್ ಬಾರಿಸಿ ದೊಡ್ಡ ಮೊತ್ತ ಪೇರಿಸಲು ನೆರವಾದರು. ಹ
ಸ್ಕೋರ್ ವಿವರ
ಆಸ್ಟ್ರೇಲಿಯಾ : ೮ ಓವರ್‌ಗಳಲ್ಲಿ ೪ ವಿಕೆಟ್‌ಗೆ ೯೦ (ಆರೋನ್ ಫಿಂಚ್ ೩೧, ಮ್ಯಾಥ್ಯೂ ವೇಡ್ ೪೩, ಅಕ್ಷರ್ ಪಟೇಲ್ ೧೩ಕ್ಕೆ೨)
ಇದನ್ನೂ ಓದಿ | IND vs AUS | ಟಾಸ್ ಗೆದ್ದ ಭಾರತ ತಂಡದಿಂದ ಫೀಲ್ಡಿಂಗ್ ಆಯ್ಕೆ, ಆಡುವ ಬಳಗದಲ್ಲಿ ಜಸ್‌ಪ್ರಿತ್ ಬುಮ್ರಾ