ನ್ಯೂಯಾರ್ಕ್: ಕಳೆದ ತಿಂಗಳು ನಡೆದಿದ್ದ ಅಮೆರಿಕನ್ ಓಪನ್ ಗ್ರ್ಯಾನ್‌ಸ್ಲಾಮ್ ಟೆನಿಸ್ ಟೂರ್ನಿ ಬಳಿಕ ಸೆರೆನಾ ವಿಲಿಯಮ್ಸ್(Serena Williams) ಟಿನಿಸ್‌ಗೆ ವಿದಾಯ ಘೋಷಣೆ ಮಾಡಿದ್ದರು. ಆದೆರೆ ಇದೀಗ ನಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎನ್ನುವ ಮೂಲಕ ಅಚ್ಚರಿಸಿ ಮೂಡಿಸಿ ಮತ್ತೆ ಟೆನಿಸ್ ಅಂಗಳಕ್ಕೆ ಮರಳುವ ಸೂಚನೆ ನೀಡಿದ್ದಾರೆ.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನಡೆದ ಸಮ್ಮೇಳನವೊಂದರಲ್ಲಿ ತಮ್ಮ ಸಂಸ್ಥೆ ‘ಸೆರೆನಾ ವೆಂಚರ್ಸ್’ ಅನ್ನು ಪ್ರಚಾರ ಮಾಡುವ ವೇಳೆ ಮಾತನಾಡಿರುವ ಸೆರೆನಾ, “ನಾನು ನಿವೃತ್ತಿಯಾಗಿಲ್ಲ” ನೀವು ನನ್ನ ಮನೆಗೆ ಬರಬಹುದು. ನನ್ನ ಬಳಿ ಟೆನಿಸ್ ಕೋರ್ಟ್ ಇದೆʼ ಎಂದು ಮಾರ್ಮಿಕವಾಗಿ ಮಾತನಾಡಿ, ಮತ್ತೆ ಟೆನಿಸ್‌ಗೆ ಹಿಂತಿರುಗುವ ಸೂಚನೆ ನೀಡಿದ್ದಾರೆ.
41 ವರ್ಷದ ಸೆರೆನಾ ಮಿಲಿಯಮ್ಸ್ ಆಗಸ್ಟ್‌ನಲ್ಲಿ ಟೆನಿಸ್‌ನಿಂದ ದೂರವಾಗುತ್ತಿರುವುದಾಗಿ ಹೇಳಿದ್ದರು. ಯುಎಸ್ ಓಪನ್ ಟೂರ್ನಿ ತನ್ನ ವಿದಾಯ ಸರಣಿ ಎಂದು ಅವರು ದೃಢಪಡಿಸದೇ ಇದ್ದರೂ, ನ್ಯೂಯಾರ್ಕ್‌ನಲ್ಲಿ ನಡೆದ ಪ್ರತಿ ಪಂದ್ಯದ ನಂತರವೂ ಅವರಿಗೆ ಗೌರವ ಸಮರ್ಪಿಸಲಾಗುತ್ತಿತ್ತು. ಮೂರನೇ ಸುತ್ತಿನಲ್ಲಿ ಸೋತ ಬಳಿಕ ಅವರಿಗೆ ಭಾವನಾತ್ಮಕ ವಿದಾಯವನ್ನು ನೀಡಲಾಗಿತ್ತು. ಆದರೆ ಇದೀಗ ಸೆರೆನಾ ತಾನು ಟೆನಿಸ್‌ನಿಂದ ನಿವೃತ್ತಿಯಾಗಿಲ್ಲ ಎಂಬ ಹೇಳಿಕೆಯು ನಾನಾ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಇದನ್ನೂ ಓದಿ | T20 World Cup | ಅಘಫಾನಿಸ್ತಾನ ಬಳಗದ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 5 ವಿಕೆಟ್ ಭರ್ಜರಿ ಜಯ