Site icon Vistara News

IND vs PAK : ಹಾರ್ದಿಕ್ ಪಾಂಡ್ಯ ಶೂ ಲೇಸ್ ಕಟ್ಟಿದ ಶದಾಬ್ ಖಾನ್; ಕ್ರೀಡಾ ಸ್ಫೂರ್ತಿಗೆ ನೆಟ್ಟಿಗರ ಮೆಚ್ಚುಗೆ

IND Vs PAK

ಶ್ರೀಲಂಕಾ: ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ (IND vs PAK) ನಡುವಿನ ಅಭಿಮಾನಿಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಆಗಿಲ್ಲ. ಆದರೆ ಕ್ರೀಡಾಂಗಣದಲ್ಲಿರುವ ಆಟಗಾರರು ಆಗಾಗ್ಗೆ ಕ್ರಿಕೆಟ್ ಉತ್ಸಾಹಕ್ಕೆ ಉತ್ತಮ ಉದಾಹರಣೆಗಳನ್ನು ಸೃಷ್ಟಿಸುತ್ತಾರೆ. ಏಷ್ಯಾ ಕಪ್ 2023 ರ ಭಾರತ ಮತ್ತು ಪಾಕಿಸ್ತಾನ ನಡುವಿನ ಮುಖಾಮುಖಿಯಲ್ಲಿ ಅಂತಹ ಒಂದು ಕ್ಷಣವು ಅನೇಕರ ಗಮನ ಸೆಳೆದಿದೆ. ಎರಡೂ ತಂಡದ ಕ್ರೀಡಾ ಸ್ಫೂರ್ತಿಗೆ ನೆಟ್ಟಿಗರು ಶಹಬ್ಬಾಸ್​ ಎಂದಿದ್ದಾರೆ.

ಹಾರ್ದಿಕ್ ಪಾಂಡ್ಯ ಮತ್ತು ಇಶಾನ್ ಕಿಶನ್ ಪಾಕಿಸ್ತಾನದ ಬೌಲಿಂಗ್ ಬಿರುಗಾಳಿಯನ್ನು ಎದುರಿಸುತ್ತಿದ್ದ ವೇಳೆ ಅಂದರೆ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಈ ಘಟನೆ ನಡೆದಿದೆ. ಹಾರ್ದಿಕ್​ ಪಾಂಡ್ಯ ತನ್ನ ಶೂಲೇಸ್ ಗಳು ಪದೇಪದೇ ಬಿಚ್ಚುತ್ತಿದ್ದ ಕಾಋಣ ತೊಂದರೆ ಅನುಭವಿಸುತ್ತಿದ್ದರು. ಈ ಸಮಯದಲ್ಲಿ ಎದುರಾಳಿ ತಂಡದ ಆಟಗಾರ ಶದಾಬ್ ಖಾನ್ ಸಹಾಯ ಮಾಡಲು ಮುಂದಾಗಿದ್ದಾರೆ. ಪಾಂಡ್ಯ ಅವರ ಶೂಲೇಸ್​​ಗಲನ್ನು ಕಟ್ಟಿ, ಕ್ರಿಕೆಟ್ ಸ್ಫೂರ್ತಿಗೆ ದೊಡ್ಡ ಕೊಡುಗೆ ನೀಡಿದ್ದಾರೆ.

ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ವೇಳೆ ಹಾರ್ದಿಕ್ ಪಾಂಡ್ಯಗೆ ಶೂ ಲೇಸ್ ಕಟ್ಟುವ ಹೃದಯಸ್ಪರ್ಶಿ ಚಿತ್ರ ಇಲ್ಲಿದೆ.

ಈ ಚಿತ್ರವು ಶೀಘ್ರದಲ್ಲೇ ವೈರಲ್ ಆಗಿದ್ದು, ಅಭಿಮಾನಿಗಳು ಇಬ್ಬರು ಆಟಗಾರರ ನಡುವಿನ ಪರಸ್ಪರ ಗೌರವವನ್ನು ಶ್ಲಾಘಿಸಿದ್ದಾರೆ ಮತ್ತು ಆಟದ ಸ್ಫೂರ್ತಿಯನ್ನು ಕೊಂಡಾಡಿದ್ದಾರೆ.

ಭಾರತವನ್ನು ಸಂಕಷ್ಟದಿಂದ ಪಾರು ಮಾಡಿದ ಕಿಶನ್-ಪಾಂಡ್ಯ

ಪಾಕಿಸ್ತಾನದ ವೇಗದ ಬೌಲಿಂಗ್ ದಾಳಿಯಿಂದ ಭಾರತದ ಅಗ್ರ ಕ್ರಮಾಂಕದ ಬ್ಯಾಟರ್​​ಗಳು ಪತರಗುಟ್ಟಿದರು. ನಂತರ ಪಾಂಡ್ಯ ಸಮಯೋಚಿತವಾಘಿ ಬ್ಯಾಟಿಂಗ್ ಮಾಡಿದರು. ಹೈಟೆನ್ಷನ್ ಕ್ರಿಕೆಟ್ ಪಂದ್ಯದಲ್ಲಿ ಆಲ್ರೌಂಡರ್ 90 ಎಸೆತಗಳಲ್ಲಿ 87 ರನ್ ಗಳಿಸಿದರು. ಇದಕ್ಕೂ ಮುನ್ನ ಭಾರತ 66/4 ಸ್ಕೋರ್ ಮಾಡಿ ಸಂಕಷ್ಟದಲ್ಲಿತ್ತು. ಪಾಂಡ್ಯ ತಂಡವು ಇಶಾನ್ ಕಿಶನ್ ಜೊತೆಗೂಡಿ ಸಂಕಷ್ಟದಿಂದ ಪಾರು ಮಾಡಿದರು.

ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಕಿಶನ್ 81 ಎಸೆತಗಳಲ್ಲಿ 82 ರನ್ ಗಳಿಸುವ ಮೂಲಕ ಸತತ ನಾಲ್ಕನೇ ಏಕದಿನ ಅರ್ಧಶತಕವನ್ನು ಬಾರಿಸಿದರು. ತಂಡವನ್ನು ಗೌರವಾನ್ವಿತ ಮೊತ್ತಕ್ಕೆ ಕೊಂಡೊಯ್ದಿದ್ದರಿಂದ ಭಾರತದ ಮುಖಭಂಗ ತಪ್ಪಿತು. ರೋಹಿತ್ ಶರ್ಮಾ (11) ಮತ್ತು ವಿರಾಟ್ ಕೊಹ್ಲಿ (4) ಅವರನ್ನು ಶಾಹೀನ್ ಅಫ್ರಿದಿ ಔಟ್ ಮಾಡಿದ ನಂತರ ಭಾರತವು ತುಂಬಾ ಕ್ಲಿಷ್ಟಕರ ಸ್ಥಿತಿಯಲ್ಲಿತ್ತು. ಶ್ರೇಯಸ್ ಅಯ್ಯರ್ (14) ಮತ್ತು ಶುಭ್ಮನ್ ಗಿಲ್ (10) ಕೂಡ ಮೊದಲ ತಮ್ಮ ಛಾಪು ಮೂಡಿಸಲು ವಿಫಲರಾದರು.

ಪಂದ್ಯ ಟೈ

ನಿರೀಕ್ಷೆಯಂತೆ ಭಾರತ ಮತ್ತು ಪಾಕಿಸ್ತಾನ(IND vs PAK) ನಡುವಣ ಶನಿವಾರದ ಏಷ್ಯಾಕಪ್(Asia cup 2023)​ ಪಂದ್ಯ ಮಳೆಗೆ ಆಹುತಿಯಾಗಿದೆ. ಭಾರತ ತನ್ನ ಪಾಲಿನ ಬ್ಯಾಟಿಂಗ್​ ಇನಿಂಗ್ಸ್​ ಆಡಿದರೂ ಪಾಕಿಸ್ತಾನದ ಬ್ಯಾಟಿಂಗ್​ ಇನಿಂಗ್ಸ್​ಗೆ ಮಳೆ ಅವಕಾಶವೇ ನೀಡಲಿಲ್ಲ. 10 ಗಂಟೆಯ ವರೆಗೆ ಕಾದ ಪಂದ್ಯದ ರೆಫ್ರಿಗಳು ಮಳೆ ನಿಲ್ಲುವ ಸೂಚನೆ ಇಲ್ಲದ ಕಾರಣ ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಿದರು. ಉಭಯ ತಂಡಕ್ಕೂ ತಲಾ ಒಂದು ಅಂಕ ನೀಡಲಾಯಿತು. ನೇಪಾಳ ವಿರುದ್ಧ ಮೊದಲ ಪಂದ್ಯ ಗೆದ್ದ ಪಾಕಿಸ್ತಾನ ಒಟ್ಟು ಮೂರು ಅಂಕದೊಂದಿಗೆ ‘ಎ’ ಗುಂಪಿನಿಂದ ಸೂಪರ್​-4ಗೆ ಲಗ್ಗೆಯಿಟ್ಟಿತು. ಭಾರತ ತನ್ನ ಅಂತಿಮ ಪಂದ್ಯವನ್ನು ಸೋಮವಾರ ನೇಪಾಳ ವಿರುದ್ಧ ಇದೇ ಸ್ಟೇಡಿಯಂನಲ್ಲಿ ಆಡಲಿದೆ.

ಇದನ್ನೂ ಓದಿ: Ishan Kishan: ಪಾಕ್​ ವಿರುದ್ಧ ಅರ್ಧಶತಕ ಬಾರಿಸಿ ಧೋನಿ ದಾಖಲೆ ಸರಿಗಟ್ಟಿದ ಇಶಾನ್​ ಕಿಶನ್​

ಶ್ರೀಲಂಕಾದ ಪಲ್ಲೆಕೆಲೆ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಗೆದ್ದು ಬ್ಯಾಟಿಂಗ್​ ಆಯ್ದುಕೊಂಡ ಭಾರತ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ಇಶಾನ್​ ಕಿಶನ್​(80) ಮತ್ತು ಉಪನಾಯಕ ಹಾರ್ದಿಕ್​ ಪಾಂಡ್ಯ(87) ಅವರು ನಡೆಸಿದ ದಿಟ್ಟ ಬ್ಯಾಟಿಂಗ್​ ಹೋರಾಟದ ನೆರವಿನಿಂದ ಭಾರತ 48.5 ಓವರ್​ಗಳಲ್ಲಿ 266 ರನ್​ಗಳಿಗೆ ಸರ್ವಪತನ ಕಂಡಿತು. ಪಾಕ್ ಪರ ಶಾಹೀನ್​ ಅಫ್ರಿದಿ ಘಾತಕ ಬೌಲಿಂಗ್​ ನಡೆಸಿ 4 ವಿಕೆಟ್​ ಕಿತ್ತು ಮಿಂಚಿದರು.

Exit mobile version