Site icon Vistara News

ICC World Cup 2023: ವಿಶ್ವಕಪ್​ಗೆ ಬಾಲಿವುಡ್​ ಬಾದ್​ ಷಾ ರಾಯಭಾರಿ; ಆ ಒಂದು ‘ದಿನ’ಕ್ಕೆ ಶತಕೋಟಿ ಮಿಡಿತ

ICC Shares Picture Of Shah Rukh Khan With World Cup Trophy

ದುಬೈ: ಬಾಲಿವುಡ್​ನ(bollywood) ಸ್ಟಾರ್​ ಹಾಗೂ ಹಿರಿಯ ನಟ ಶಾರುಖ್‌ ಖಾನ್(Shah Rukh Khan) ಅವರು ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್(ICC World Cup 2023)​ ಟೂರ್ನಿಯ ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆಯಾಗಿದ್ದಾರೆ. ವಿಶ್ವ ಕಪ್​ ಟ್ರೋಫಿಯೊಂದಿಗಿನ(ICC World Cup trophy ಅವರ ಫೋಟೊ ಮತ್ತು ಪ್ರೋಮೊವನ್ನು(World Cup promo) ಐಸಿಸಿ ತನ್ನ ಅಧಿಕೃತ ಟ್ವಿಟರ್​ ಮತ್ತು ವೆಬ್​ಸೈಟ್​ನಲ್ಲಿ ಪ್ರಕಟಿಸಿದೆ. ಟ್ರೋಫಿ ಮುಂದೆ ನಿಂತಿರುವ ಶಾರುಖ್‌ ಅವರ ಫೋಟೊ ಎಲ್ಲಡೆ ವೈರಲ್​ ಆಗಿದೆ.

ವಿಶ್ವ ಕಪ್​ ಟೂರ್ನಿ ಅಕ್ಟೋಬರ್​ 5 ರಿಂದ ಆರಂಭಗೊಂಡು ನವೆಂಬರ್​ 19 ತನಕ ನಡೆಯಲಿದೆ. ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 15 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

ಇದನ್ನೂ ಓದಿ World Cup 2023 : ವಿಶ್ವ ಕಪ್​ ಆಡಲು ಬರುವುದಿಲ್ಲ, ಪಾಕ್​ ಸಚಿವನ ಹೊಸ ಬಾಂಬ್​!

ಮಹತ್ವದ ಟೂರ್ನಿಗೆ ಎಲ್ಲ ಸಿದ್ಧತೆಗಳು ಬರದಿಂದ ಸಾಗುತ್ತಿದ್ದು, ಇದೀಗ ಐಸಿಸಿ ಟ್ರೋಫಿ ಮತ್ತು ಟೂರ್ನಿಯ ಪ್ರೋಮೊವನ್ನು ಬಡುಗಡೆಗೊಳಿಸಿದೆ. ಬಾಲಿವುಡ್ ಬಾದ್​ ಷಾ ಖ್ಯಾತಿಯ ಶಾರುಖ್‌ ಖಾನ್ ಅವರು ಬ್ರಾಂಡ್‌ ಅಂಬಾಸಿಡರ್‌ ಆಗಿ ಆಯ್ಕೆಯಾಗಿದ್ದಾರೆ. ವಿಶ್ವ ಕಪ್​ ಟೂರ್ನಿಯ ಹಲವು ಸ್ಮರಣೀಯ ಕ್ಷಣವನ್ನು ಶಾರುಖ್‌ ಖಾನ್ ಅವರು ಈ ವಿಡಿಯೊದಲ್ಲಿ ಹೇಳಿದ್ದಾರೆ.

ಈ ವಿಡಿಯೊದಲ್ಲಿ ಎಲ್ಲ 10 ಜೆರ್ಸಿ, ತಂಡಗಳ ಸೋಲು ಗೆಲುವು ಸಂಭ್ರಮದ ಕ್ಷಣ ಮತ್ತು ಅಭಿಮಾನಿಗಳ ಸಂಭ್ರಮಾಚರಣೆ, ಕುತೂಹಲ, ಕಪಿಲ್​ದೇವ್​ ಅವರು ಮೊದಲ ಬಾರಿ ವಿಶ್ವಕಪ್ ಎತ್ತಿ ಹಿಡಿದ ದೃಶ್ಯ, 2011ರ ವಿಶ್ವಕಪ್​ನಲ್ಲಿ ಸಚಿನ್​ ಬ್ಯಾಟಿಂಗ್ ನೋಟ​, ಸಚಿನ್​ ಅವರ ಅಭಿಮಾನಿ ಭಾರತದ ಧ್ವಜವನ್ನು ಬೀಸುತ್ತಾ ಸಚಿನ್​ಗೆ ಚಿಯರ್​ ಅಪ್ ಮಾಡುತ್ತಿರುವುದು, ವಿರಾಟ್​ ಕೊಹ್ಲಿಯ ಫಿಲ್ಡಿಂಗ್​ ಹೀಗೆ ಹಲವು ದೃಶ್ಯಗಳನ್ನು ಈ ವಿಡಿಯೊದಲ್ಲಿ ತೋರಿಸಲಾಗಿದೆ. ಈ ವಿಡಿಯೊದಲ್ಲಿ ದಿನೇಶ್​ ಕಾರ್ತಿಕ್​ ಮತ್ತು ಟೀಮ್​ ಇಂಡಿಯಾದ ಭವಿಷ್ಯದ ತಾರೆ ಎಂದು ಕರೆಯಲ್ಪಡುವ ಶುಭಮನ್​ ಗಿಲ್​ ಕೂಡ ಕಾಣಿಸಿಕೊಂಡಿದ್ದಾರೆ. ಇವರು ಕೂಟ ಈ ವಿಶ್ವಕಪ್​ ಟೂರ್ನಿಯ ಪ್ರಚಾರ ಅಭಿಯಾನದಲ್ಲಿ ಸೇರಿಕೊಂಡಿದ್ದಾರೆ.

ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ

ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ

ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ

ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್

ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ

ಭಾರತ vs ನ್ಯೂಜಿಲ್ಯಾಂಡ್​- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ

ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ

ಭಾರತ vs ಶ್ರೀಲಂಕಾ- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ

ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ

ಭಾರತ vs ನೆದರ್ಲೆಂಡ್ಸ್​ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು

Exit mobile version