ಬೆಂಗಳೂರು: ಗೌತಮ್ ಗಂಭೀರ್ (Gautam Gambhir) ಗಂಭೀರ ಹಾಗೂ ಸೂಕ್ಷ್ಮ ಮಾತುಗಳ ವ್ಯಕ್ತಿಯಾಗಿರಬಹುದು. ಆದರೆ ಅವರ ಸಾಧನೆ ಮತ್ತು ಧೈರ್ಯವು ಅವರ ಪರವಾಗಿ ಮಾತನಾಡುವಂತೆ ಮಾಡುತ್ತದೆ. ಅದು ಹಾಲಿ ಐಪಿಎಲ್ನಲ್ಲಿ ಅವರ ತಂಡ ಕೆಕೆಆರ್ನ ಪ್ರದರ್ಶನದ ಮೂಲಕ ಸಾಬೀತಾಗಿದೆ. ಹೀಗಾಗಿ ವಿಶ್ವಕಪ್ ವಿಜೇತ ಆಟಗಾರ ತನ್ನ ಹೆಸರನ್ನು ಕೆಲವು ಸಮಯದಿಂದ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಸ್ಥಾನ ಆಕಾಂಕ್ಷಿಗಳ ಪಟ್ಟಿಯಲ್ಲಿ ಚರ್ಚೆ ಮಾಡುವಂತೆ ಮಾಡಿದ್ದಾರೆ. ಅರ್ಜಿ ಸಲ್ಲಿಕೆಯ ಗಡುವು ಸಮೀಪಿಸುತ್ತಿರುವುದರಿಂದ, ಅವರು ಅವರು ಆಕ್ಷಾಂಕ್ಷಿಯೇ ಅಥವಾ ಇಲ್ಲವೇ ಎಂಬ ಬಗ್ಗೆ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಆದಾಗ್ಯೂ ಒಂದು ವಿಷಯ ಸ್ಪಷ್ಟವಾಗಿದೆ. ಅವರು ಸ್ಪಷ್ಟವಾಗಿ ಆ ಹುದ್ದೆಗೆ ನೆಚ್ಚಿನ ಹೆಸರು. ಆದರೆ, ಅವರು ಅಲ್ಲಿಗೆ ಹೋಗದಂತೆ ಶಾರುಖ್ ಖಾನ್ ತಡೆಯುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕಳೆದ ವಾರ ಸಂದರ್ಶನವೊಂದರಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಮತ್ತು ಜಸ್ಟಿನ್ ಲ್ಯಾಂಗರ್ ಅವರನ್ನು ಈ ಹುದ್ದೆಗೆ ಸಂಪರ್ಕಿಸಿದ್ದಾರೆ ಎಂಬ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದರು. ಈ ವರದಿಗಳನ್ನು ನಿರಾಕರಿಸಿದ ಅವರು, ದೇಶೀಯ ಕ್ರಿಕೆಟ್ ಚಟುವಟಿಕೆಗಳನ್ನು ಮುಂದಿನ ಕೋಚ್ ಅರ್ಥಮಾಡಿಕೊಳ್ಳುವುದು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ವಿವರಿಸಿದ್ದರು.
“ಟೀಮ್ ಇಂಡಿಯಾವನ್ನು ನಿಜವಾಗಿಯೂ ಮುಂದಿನ ಹಂತಕ್ಕೆ ಏರಿಸಲು ನಮ್ಮ ತರಬೇತುದಾರರು ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ಆಳವಾದ ಜ್ಞಾನ ಹೊಂದಿರುವುದು ಬಹಳ ಮುಖ್ಯ ಎಂದು ಹೇಳಿದ್ದರು.
ಟೈಮ್ಸ್ ಆಫ್ ಇಂಡಿಯಾ ವರದಿಗಳ ಪ್ರಕಾರ, ಬಿಸಿಸಿಐ ನೇರವಾಗಿ ಗಂಭೀರ್ ಅವರನ್ನು ಸಂಪರ್ಕಿಸಿಲ್ಲ, ಆದರೆ ಆರಂಭಿಕ ಆಟಗಾರನಿಗೆ ಇದರಲ್ಲಿ ಯಾವುದೇ ಸಮಸ್ಯೆಗಳಿಲ್ಲ. ಆದಾಗ್ಯೂ, ಅವರು ಕೆಕೆಆರ್ ಅನ್ನು ತೊರೆದು ಭಾರತಕ್ಕೆ ಸೇರಲು ಆಯ್ಕೆ ಮಾಡಿದರೆ, ಅವರು ತಂಡದ ಮಾಲೀಕ ಶಾರುಖ್ ಖಾನ್ ಅವರ ಜತೆಗೆ ಮಾತುಕತೆ ಮಾಡಬೇಕಾದೀತು ಎಂದು ಹೇಳಿದ್ದಾರೆ.
ಇದನ್ನೂ ಓದಿ: Hardik Pandya: ಪ್ರೇಯಸಿಯ ದೋಖಾದ ಸುಳಿವು ಮೊದಲೇ ಇತ್ತಾ? ಬಹುತೇಕ ಆಸ್ತಿಯನ್ನು ಪೋಷಕರ ಹೆಸರಲ್ಲಿಟ್ಟ ಚಾಲಾಕಿ ಹಾರ್ದಿಕ್!
“ಗಂಭೀರ್ ಅವಕಾಶವನ್ನು ಬಳಸಿಕೊಳ್ಳುವುದಕ್ಕೆ ಮುಂದಾಗಬಹುದು. ಆದರೆ, ಕೆಕೆಆರ್ ಕೋಚ್ ಆಗಿರುವ ಅವರು ಸವಾಲನ್ನು ತೆಗೆದುಕೊಳ್ಳುವ ಮೊದಲು ಶಾರುಖ್ ಜತೆ ಮಾತುಕತೆ ಮಾಡಬಹುದು. ಅವರು ಅದಕ್ಕೆ ಹೇಗೆ ಸ್ಪಂದಿಸುತ್ತಾರೆ ಎಂಬುದೇ ಪ್ರಮುಖ ವಿಷಯ ಎಂದು ಮೂಲಗಳು ತಿಳಿಸಿವೆ.
ಗೌತಮ್ ಗಂಭೀರ್ ಈ ಹಿಂದೆ ಎರಡು ಋತುಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದರು, ನಂತರ ಶಾರುಖ್ ಅವರನ್ನು ಸಂಪರ್ಕಿಸಿ ಐಪಿಎಲ್ 2024 ಋತುವಿನಲ್ಲಿ ಕೆಕೆಆರ್ಗೆ ಮರಳಲು ಮನವೊಲಿಸಿದ್ದರು ಎಂದು ವರದಿಯಾಗಿದೆ. ಕೋಲ್ಕತಾ ನೈಟ್ ರೈಡರ್ಸ್ ತಂಡವು ಈ ಋತುವಿನುದ್ದಕ್ಕೂ ಪ್ರದರ್ಶನದಿಂದ ಹೊಳೆಯುತ್ತಿದೆ. ಈಗ ಐಪಿಎಲ್ 2024 ರ ಫೈನಲ್ನಲ್ಲಿ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಎಸ್ಆರ್ಹೆಚ್ ವಿರುದ್ಧ ಸೆಣಸಲಿದೆ.
ಈ ಋತುವಿನಲ್ಲಿ ಕೆಕೆಆರ್ ಗೆದ್ದರೆ, ಅದು ಕೆಕೆಆರ್ ಮತ್ತು ಗಂಭೀರ್ ಅವರ ಪರಂಪರೆಗೆ ಮತ್ತೊಂದು ಶ್ರೇಯಸ್ಸು ತರುತ್ತದೆ. ಇದು 3 ಬಾರಿ ಐಪಿಎಲ್ ವಿಜೇತ ಗಂಭೀರ್ ಅವರನ್ನು ಬಿಟ್ಟುಕೊಡಲು ಶಾರುಖ್ ಸಿದ್ಧರಿಲ್ಲ ಎಂದು ಹೇಳಲಾಗುತ್ತಿದೆ.