Site icon Vistara News

Shaheen Afridi : ನಾಯಕನಿಗೇ ಆಘಾತ; ಒಂದೇ ಓವರ್​ಗೆ 24 ರನ್​ ಚಚ್ಚಿಸಿಕೊಂಡ ಅಫ್ರಿದಿ

Shaheen Sha Afridi

ಬೆಂಗಳೂರು: ಶುಕ್ರವಾರ ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯಗಳಲ್ಲಿ ಶಾಹೀನ್ ಅಫ್ರಿದಿ (Shaheen Afridi) ನಾಯಕತ್ವದಲ್ಲಿ ಪಾಕಿಸ್ತಾನ ಮೊದಲ ಬಾರಿಗೆ ಮೈದಾನಕ್ಕಿಳಿಯಿತು. ಆದಾಗ್ಯೂ, ಅಫ್ರಿದಿ ಅವರ ನಾಯಕತ್ವದ ಚೊಚ್ಚಲ ಪಂದ್ಯವು ಅವರ ಯೋಜನೆಯಂತೆ ನಡೆಯಲಿಲ್ಲ. ಆ ಪಂದ್ಯದಲ್ಲಿ 46 ರನ್​ಗಳ ಹೀನಾಯ ಸೋಲಿಗೆ ಒಳಗಾಯಿತು ಪಾಕ್ ಬಳಗ. ನಾಯಕನ ಪಾಲಿಗೆ ಇನ್ನೊಂದು ಆಘಾತಕಾರಿ ಸಂಗತಿಯೆಂದರೆ ಒಂದೇ ಓವರ್​ನಲ್ಲಿ 24 ರನ್​ಗಳನ್ನು ಬಿಟ್ಟುಕೊಟ್ಟಿರುವುದ. ಇದು ವಿಶ್ವದ ಅತ್ಯಂತ ಬೌಲರ್ ​ನ ದುಬಾರಿ ಓವರ್ ಆಗಿದೆ. ಪಂದ್ಯದಲ್ಲಿ ಆತಿಥೇಯ ಕಿವೀಸ್​ 20 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಪ್ರತಿಯಾಗಿ ಪಾಕಿಸ್ತಾನ ಇನ್ನೂ ಎರಡು ಓವರ್ ಗಳು ಬಾಕಿ ಇರುವಾಗ 180 ರನ್ ಗಳಿಗೆ ಆಲೌಟ್ ಆಗಿ ಸೋಲೊಪ್ಪಿಕೊಂಡಿತು.

ಆರಂಭಿಕ ಓವರ್​ನಲ್ಲಿ ವಿಕೆಟ್ ಪಡೆದಿದ್ದ ಅಫ್ರಿದಿ ಪಂದ್ಯವನ್ನು ತಮ್ಮದೇ ಶೈಲಿಯಲ್ಲಿ ಪ್ರಾರಂಭಿಸಿದ್ದರು. ಡೆವೊನ್ ಕಾನ್ವೇ ಅಫ್ರಿದಿ ಅವರ ಕೌಶಲಕ್ಕೆ ಬಲಿಯಾಗಿದ್ದರು. ಓವರ್​ನ ಎರಡನೇ ಎಸೆತದಲ್ಲಿ ಆಫ್ ಸ್ಟಂಪ್​ನ ಹೊರಗೆ ಹೋಗುತ್ತಿದ್ದ ಚೆಂಡು ಬ್ಯಾಟ್ ಸವರಿ ಹೋಗಿತ್ತು. ಈ ಓವರ್​ನಲ್ಲಿ ಅಫ್ರಿದಿ ಕೇವಲ ಎರಡು ರನ್​ ಬಿಟ್ಟುಕೊಟ್ಟಿದ್ದರು. ಸತತ ಐದು ಡಾಟ್ ಬಾಲ್​ಗಳನ್ನು ಎಸೆದಿದ್ದರು.

ಇದೇ ಹುಮ್ಮಸ್ಸಿನಲ್ಲಿ ಪಾಕಿಸ್ತಾನ ಟಿ 20ಐ ನಾಯಕ ನಂತರದ ಓವರ್ ಎಸೆದಿದ್ದರು.ಈ ವೇಳೆ ಅವರು ಆಘಾತ ಎದುರಿಸಿದರು. ಐದು ಎಸೆತಗಳಲ್ಲಿ, ಅವರು 6, 4, 4, 4 ,6 ರನ್​ ಬಿಟ್ಟುಕೊಟ್ಟರು. ಈ ವೇಳೆ ಕಿವೀಸ್ ಆರಂಭಿಕ ಆಟಗಾರ ಅಫ್ರಿದಿ ಹಿಂದಿನ ಹಾಕಿದ್ದ ಒತ್ತಡವನ್ನು ನಿವಾರಿಸಿದರು.

ನ್ಯೂಜಿಲೆಂಡ್ ತಂಡಕ್ಕೆ ಭರ್ಜರಿ ಜಯ

ಪಾಕಿಸ್ತಾನ ವಿರುದ್ಧದ ಮೊದಲ ಟಿ 20 ಪಂದ್ಯದಲ್ಲಿ, ಸೌಥಿ ಅವರ ಅಬ್ಬರದ ಬೌಲಿಂಗ್ ಪ್ರದರ್ಶನವು ನ್ಯೂಜಿಲೆಂಡ್ ತಂಡಕ್ಕೆ 46 ರನ್​ಗಳ ಗೆಲುವು ತಂದುಕೊಟ್ಟಿದೆ. ಅವರ ಪ್ರಯತ್ನಗಳು ಮತ್ತು ಆಡಮ್ ಮಿಲ್ನೆ ಮತ್ತು ಬೆನ್ ಸಿಯರ್ಸ್ ಅವರ ಬೌಲಿಂಗ್​ ಕೊಡುಗೆಗಳೊಂದಿಗೆ ಪಾಕಿಸ್ತಾನವನ್ನು 180 ರನ್​ಗಳಿಗೆ ಸೀಮಿತಗೊಳಿಸಲಾಗಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಕಿವೀಸ್ ನಿಗದಿತ 20 ಓವರ್​ಗಳಲ್ಲಿ 226 ರನ್​​ಗಳ ಬೃಹತ್ ಮೊತ್ತವನ್ನು ದಾಖಲಿಸಿತು. ಡ್ಯಾರಿಲ್ ಮಿಚೆಲ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ಆಕರ್ಷಕ ಅರ್ಧಶತಕಗಳೊಂದಿಗೆ ತಂಡಕ್ಕೆ ಮುನ್ನಡೆ ತಂದರು. ಮಿಚೆಲ್ 27 ಎಸೆತಗಳಲ್ಲಿ 61 ರನ್ ಬಾರಿಸಿದ್ದರು.

ಬೌಲಿಂಗ್​ನಲ್ಲಿ ವಿಶೇಷ ದಾಖಲೆ ಮಾಡಿದ ಸೌಥಿ

ಬೆಂಗಳೂರು: ನ್ಯೂಜಿಲೆಂಡ್​ ಕ್ರಿಕೆಟ್​ ತಂಡದ ಅನುಭವಿ ವೇಗಿ ಟಿಮ್ ಸೌಥಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಲ್ಲಿ 150 ವಿಕೆಟ್​ಗಳ ಮೈಲಿಗಲ್ಲನ್ನು ತಲುಪಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆಕ್ಲೆಂಡ್​ನ ಈಡನ್ ಪಾರ್ಕ್​ನಲ್ಲಿ ಶುಕ್ರವಾರ ನಡೆದ ಪಾಕಿಸ್ತಾನ ವಿರುದ್ಧದ ಟಿ20 ಸರಣಿಯ ಆರಂಭಿಕ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಚೆಂಡಿನೊಂದಿಗೆ ಅಬ್ಬರದ ಪ್ರದರ್ಶನ ನೀಡಿದ ಅವರು ಈ ಸಾಧನೆ ಮಾಡಿದರು. ಅವರು ತಮ್ಮ ಸ್ಪೆಲ್​ನಲ್ಲಿ 25 ರನ್​ ನೀಡಿ 4 ವಿಕೆಟ್​ ಪಡೆದು ಮಿಂಚಿದರು.

ಇದನ್ನೂ ಓದಿ : T20 World Cup : ಟಿ20 ವಿಶ್ವಕಪ್ ನಲ್ಲಿ ಭಾರತದ ವಿಕೆಟ್ ಕೀಪರ್ ಯಾರಾಗಬಹುದು?

ಪಾಕಿಸ್ತಾನದ ರನ್ ಚೇಸಿಂಗ್​ನ 18ನೇ ಓವರ್​ನಲ್ಲಿ ಅವರು ಪಂದ್ಯದಲ್ಲಿ ತಮ್ಮ ಮೂರನೇ ವಿಕೆಟ್​ ಪಡೆದು ಈ ಮೈಲುಗಲ್ಲು ದಾಟಿದರು. ಅಬ್ಬಾಸ್ ಅಫ್ರಿದಿ ವಿಕೆಟ್​ ರೂಪದಲ್ಲಿ ಅವರು ಈ ದಾಖಲೆ ಮಾಡಿದರು. ಈ ವಿಕೆಟ್ ಟಿ20 ಪಂದ್ಯಗಳಲ್ಲಿ ಅವರ 150 ನೇ ವಿಕೆಟ್ ಆಗಿದ್ದು, ಒಟ್ಟಾರೆ ಅವರ ಖಾತೆಯಲ್ಲಿ 151 ವಿಕೆಟ್​ಗಳಿವೆ. 35ರ ಹರೆಯದ ಹ್ಯಾರಿಸ್ ರೌಫ್ ಅವರನ್ನು ಅದೇ ಓವರ್​ನಲ್ಲಿ ಔಟ್ ಮಾಡುವ ಮೂಲಕ ಪಾಕಿಸ್ತಾನದ ಬ್ಯಾಟಿಂಗ್ ಬಲವನ್ನು ಕುಗ್ಗಿಸಿದರು. ಈ ಮೂಲಕವೂ ಅವರು ಪಂದ್ಯದಲ್ಲಿ ಮಿಂಚಿದರು.

ಇದನ್ನೂ ಓದಿ :

ಸೌಥಿಯ ಈ ಅದ್ಭುತ ಪ್ರದರ್ಶನದ ನೆರವಿನಿಂದ ಕಿವೀಸ್ ಬಳಗ ಪಾಕಿಸ್ತಾನವನ್ನು 180 ರನ್ ಗಳಿಗೆ ಆಲೌಟ್ ಮಾಡಿತು. ಈ ಪಂದ್ಯದ ಆರಂಭದಲ್ಲಿ ಸೌಥಿ, ಅಪಾಯಕಾರಿ ಬ್ಯಾಟರ್​ಗಳಾದ ಮೊಹಮ್ಮದ್ ರಿಜ್ವಾನ್ ಮತ್ತು ಇಫ್ತಿಖರ್ ಅಹ್ಮದ್ ಅವರನ್ನು ಪೆವಿಲಿಯನ್​ಗೆ ಕಳುಹಿಸಿದ್ದರು. ಸೌಥಿ 118 ಟಿ20 ಪಂದ್ಯಗಳಲ್ಲಿ 8.12ರ ಎಕಾನಮಿ ರೇಟ್​ನಲ್ಲಿ 151 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಈ ಸಾಧನೆಯೊಂದಿಗೆ ಅವರು ಈಗ ಟಿ20 ಐ ವಿಕೆಟ್ ಪಡೆದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಶಕೀಬ್ ಅಲ್ ಹಸನ್ ಮತ್ತು ರಶೀದ್ ಖಾನ್ ಅವರಿಗಿಂತ ಹಿಂದಿದ್ದಾರೆ.

2010 ರಲ್ಲಿ ಪಾಕಿಸ್ತಾನದ ಬ್ಯಾಟರ್​ಗಳಾದ ಯೂನಿಸ್ ಖಾನ್, ಮೊಹಮ್ಮದ್ ಹಫೀಜ್ ಮತ್ತು ಉಮರ್ ಅಕ್ಮಲ್ ಅವರ ವಿಕೆಟ್​ಗಳನ್ನು ಪಡೆಇದ್ದ ಸೌಥಿ ಟಿ 20ಐ ಹ್ಯಾಟ್ರಿಕ್ ಪಡೆದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ನ್ಯೂಜಿಲೆಂಡ್ ವೇಗಿ 374 ವಿಕೆಟ್​ಗಳೊಂದಿಗೆ ಆ ತಂಡದ ಎರಡನೇ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದ ಬೌಲರ್ ಮತ್ತು ಏಕದಿನ ಪಂದ್ಯಗಳಲ್ಲಿ 221 ವಿಕೆಟ್​ಗಳೊಂದಿಗೆ ಮೂರನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ ಒಟ್ಟಾರೆಯಾಗಿ, ಸೌಥಿ ನ್ಯೂಜಿಲೆಂಡ್ ಪರ 375 ಪಂದ್ಯಗಳಲ್ಲಿ 746 ವಿಕೆಟ್​ಗಳನ್ನು ಪಡೆದಿದ್ದಾರೆ, ಇದರಲ್ಲಿ ಇಪ್ಪತ್ತೈದು ಬಾರಿ ಐದು ವಿಕೆಟ್ ಮತ್ತು ಒಂದು ಬಾರಿ ಹತ್ತು ವಿಕೆಟ್ ಸೇರಿವೆ.

Exit mobile version