Site icon Vistara News

Shahrukh Khan : ಶಾರುಖ್ ಖಾನ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗಂಭೀರ್​​

Sharukh Khan

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಆವೃತ್ತಿಗೆ ಮುಂಚಿತವಾಗಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಫ್ರಾಂಚೈಸಿಯ ಮಾರ್ಗದರ್ಶಕರಾಗಿ ಸೇರಿರುವುದಕ್ಕೆ ಗೌತಮ್ ಗಂಭೀರ್ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ಫ್ರಾಂಚೈಸಿ ಸಹ ಮಾಲೀಕ ಮತ್ತು ಜಾಗತಿಕ ಸಿನಿಮಾ ಐಕಾನ್ ಶಾರುಖ್ ಖಾನ್ (Shahrukh Khan) ಅವರೊಂದಿಗೆ ಮತ್ತೆ ಕೆಲಸ ಮಾಡಲು ಅವಕಾಶ ಪಡೆದಿರುವ ಕುರಿತು ಕೆಲವೊಂದು ಹೇಳಿಕೆಗಳನ್ನು ನೀಡಿದ್ದಾರೆ. ಅಭಿಮಾನಿಗಳ ಜತೆ ಮಾತನಾಡುವ ವೇಳೆ ಅವರು ಈ ಹೇಳಿಕೆಗಳನ್ನು ಕೊಟ್ಟಿದ್ದಾರೆ.

2012 ಮತ್ತು 2014 ರಲ್ಲಿ ಎರಡು ಬಾರಿ ಕೆಕೆಆರ್​ಗೆ ಪ್ರಶಸ್ತಿ ತಂದುಕೊಟ್ಟಿದ್ದ ಗೌತಮ್​ ಗಂಭೀರ್​ ಆ ತಂಡ ಪ್ರಮುಖ ಆಟಗಾರ ಎಂಬ ಖ್ಯಾತಿ ಹೊಂದಿದ್ದಾರೆ. ನಿವೃತ್ತಿ ಪಡೆದ ಬಳಿಕ ಅವರು ಅವರು ಲಕ್ನೊ ತಂಡದ ಮಾರ್ಗದರ್ಶಕರಾಗಿ ಮತ್ತೆ ಐಪಿಎಲ್​​ಗೆ ಪ್ರವೇಶ ಪಡೆದುಕೊಂಡರು. ಇತ್ತೀಚಿನ ಐಪಿಎಲ್ 2024 ಮಿನಿ ಹರಾಜಿನಲ್ಲಿ ಕೆಕೆಆರ್​​ ತಂಡದ ಮೆಂಟರ್ ಆಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ : Virat Kohli : ವರ್ಷದ ಕ್ರಿಕೆಟ್​ ತಂಡದಲ್ಲಿ ವಿರಾಟ್​ ಕೊಹ್ಲಿ, ಸ್ಟ್ರೀವ್ ಸ್ಮಿತ್​ಗೆ ಸ್ಥಾನವಿಲ್ಲ!

ಗಂಭೀರ್ ಕೆಕೆಆರ್​ ಜತೆ ಒಪ್ಪಂದಕ್ಕೆ ಸಹಿ ತಕ್ಷಣ ಫ್ರಾಂಚೈಸಿಯ ಅಭಿಮಾನಿಗಳು ಕೆಕೆಆರ್​ನ ವೈಭವದ ದಿನಗಳು ಮರಳಲಿವೆ ಎಂದು ಸಂಭ್ರಮಪಟ್ಟಿದ್ದರು. ಅಂತೆಯೇ ಫ್ರಾಂಚೈಸಿ ಮಾಲೀಕ ಶಾರುಖ್​ ಕೂಡ ಮಾಜಿ ಕ್ರಿಕೆಟಿಗನಿಗೆ ಆತ್ಮೀಯ ಸ್ವಾಗತ ನೀಡಿದ್ದರು.

ಸಂಭ್ರಮ

ಟ್ವಿಟರ್​​ನಲ್ಲಿ ತಮ್ಮ ಅಪಾರ ಅಭಿಮಾನಿ ಬಳಗದೊಂದಿಗೆ ಮತ್ತೊಂದು ವಿಶೇಷ #AskSRK ಸೆಷನ್​ನಲ್ಲಿ ಶಾರುಖ್ ಸಂತೋಷ ವ್ಯಕ್ತಪಡಿಸಿದ್ದರು. ನಮ್ಮ ಚಾಂಪಿಯನ್ ಗಂಭೀರ್ ಅವರೊಂದಿಗೆ ಐಪಿಎಲ್​ ಋತುವರನ್ನು ಸ್ವಾಗತಿಸಲು ಉತ್ಸುಕನಾಗಿದ್ದೇನೆ. ಅವರು ಲಕ್ನೋ ಸೂಪರ್ ಜೈಂಟ್ಸ್ (ಎಲ್ಎಸ್ಜಿ) ನಲ್ಲಿ ಮಾರ್ಗದರ್ಶಕರಾಗಿ ಎರಡು ವರ್ಷಗಳ ಕಾಲ ಕೆಲಸ ಮಾಡಿದ ನಂತರ ಅವರ ಪ್ರಭಾವ ಅರಿವಿಗೆ ಬಂದಿತ್ತು ಎಂದು ಹೇಳಿದ್ದಾರೆ.

ಈಗ ಅದೇ ವೇದಿಕೆಯಲ್ಲಿ ಅಭಿಮಾನಿಗಳೊಂದಿಗಿನ #AskGG ಅಧಿವೇಶನದಲ್ಲಿ ಗಂಭೀರ್ ಅವರಿಗೆ ಇದೇ ಪ್ರಶ್ನೆಯನ್ನು ಕೇಳಿದಾಗ, 2011 ರ ವಿಶ್ವಕಪ್ ಚಾಂಪಿಯನ್ ಕೆಕೆಆರ್​ ತಂಡದೊಂದಿಗೆ ಪಾಲುಪಡೆಯಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. ಮುಂದುವರಿದ ಅವರು ಶಾರುಖ್ ಅವರನ್ನು ತಮ್ಮ ಕುಟುಂಬದ ಸದಸ್ಯ ಎಂದು ಗಂಭೀರ್ ಕರೆದಿದ್ದಾರೆ. ಕೆಕೆಆರ್ ಕೇವಲ ಫ್ರಾಂಚೈಸಿಯಲ್ಲ. ಮಾಜಿ ನಾಯಕ ಮತ್ತು ಆಟಗಾರನಾಗಿ ಉತ್ತಮ ಭಾವನೆ ಎಂದು ಹೇಳಿದ್ದಾರೆ.

ಡಿಸೆಂಬರ್ 19 ರಂದು ದುಬೈನಲ್ಲಿ ನಡೆದ ಮಿನಿ ಹರಾಜಿನಲ್ಲಿ ಗಂಭೀರ್ ಕೆಕೆಆರ್ ಪರ ಪ್ರಮುಖ ಪಾತ್ರ ವಹಿಸಿದ್ದರು, ಆಸೀಸ್ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ ಅವರ ಸೇವೆಗಳನ್ನು ಪಡೆಯಲು ಫ್ರಾಂಚೈಸಿ 24.75 ಕೋಟಿ ರೂ.ಗೆ ಬಿಡ್ ಮಾಡುವ ಮೂಲಕ ಹುಬ್ಬೇರುವಂತೆ ಮಾಡಿತು. 2018 ರ ಆವೃತ್ತಿಯ ನಂತರ ಒಮ್ಮೆ ಮಾತ್ರ ಪ್ಲೇಆಫ್ ತಲುಪಿದ ಕೆಕೆಆರ್ ಕಠಿಣ ಟಿ 20 ಲೀಗ್​​ನಲ್ಲಿ ಪುನರುಜ್ಜೀವನದ ಗುರಿಯನ್ನು ಹೊಂದಿರುವುದರಿಂದ ತಮ್ಮ ಮಾಜಿ ನಾಯಕನ ಸ್ಪರ್ಶವು ತನ್ನ ಮ್ಯಾಜಿಕ್ ಅನ್ನು ಮಾಡುತ್ತದೆ ಎಂದು ಆಶಿಸುತ್ತಿದೆ.

Exit mobile version