Site icon Vistara News

Shakib Al Hasan: ಚೆಂಡೆಸೆದು ಪಾಕ್​ ಆಟಗಾರ ರಿಜ್ವಾನ್​ ಕೆಣಕಿದ ಶಕಿಬ್​ ಅಲ್​ ಹಸನ್; ವಿಡಿಯೊ ವೈರಲ್​

Shakib Al Hasan

Shakib Al Hasan: Angry Shakib Al Hasan Throws Ball At Mohammad Rizwan, Gets Scolded By Umpire

ರಾವಲ್ಪಿಂಡಿ: ಬಾಂಗ್ಲಾದೇಶದ(Pakistan vs Bangladesh) ಹಿರಿಯ ಕ್ರಿಕೆಟ್​ ಆಟಗಾರ ಶಕಿಬ್​ ಅಲ್​ ಹಸನ್​(Shakib Al Hasan) ಮೈದಾನದಲ್ಲಿ ಅತಿರೇಕದ ವರ್ತನೆ​ ತೋರುವು ಅವರ ಸಾಮಾನ್ಯ ಗುಣ. ಹಲವು ಬಾರಿ ಅವರು ಈ ರೀತಿಯ ವರ್ತನೆ ತೋರಿ ಟೀಕಿಗೆ ಗುರಿಯಾಗಿದ್ದರು. ಇದೀಗ ಪಾಕಿಸ್ತಾನ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿಯೂ ಶಕಿಬ್​ ತಾಳ್ಮೆ ಕಳೆದುಕೊಂಡ(Angry Shakib Al Hasan) ಘಟನೆ ನಡೆದಿದೆ.

ಪಾಕಿಸ್ತಾನದ ಬ್ಯಾಟರ್​ ಮೊಹಮ್ಮದ್​ ರಿಜ್ವಾನ್(Mohammad Rizwan)​ ಕ್ರೀಸ್​ನಲ್ಲಿ ಬ್ಯಾಟಿಂಗ್​ ನಡೆಸುತ್ತಿದ್ದರು. ಶಕಿಬ್​ ಬೌಲಿಂಗ್​ ನಡೆಸಲು ಮುಂದಾದ ವೇಳೆ ರಿಜ್ವಾನ್​ ಏಕಾಏಕಿ ಹಿಂದಕ್ಕೆ ತಿರುಗಿ ಫೀಲ್ಡರ್​ಗೆ ಏನೋ ಸನ್ನೆ ಮಾಡಿ ಬ್ಯಾಟಿಂಗ್​ ನಡೆಸಲು ಸಿದ್ಧರಾಗಲಿಲ್ಲ. ಸಿಟ್ಟಿಗೆದ್ದ ಶಕಿಬ್​​ ಚೆಂಡನ್ನು ನೇರವಾಗಿ ರಿಜ್ವಾನ್ ಕಡೆ ಎಸೆದರು. ಚೆಂಡು ರಿಜ್ವಾನ್ ತೆಲೆಯ ಪಕ್ಕಾದಲ್ಲೇ ಸಾಗಿ ಕೀಪರ್ ಕೈ ಸೇರಿತು. ಈ ವೇಳೆ ಅಂಪೈರ್​ ರಿಚರ್ಡ್‌ ಕೆಟಲ್‌ಬರೋ ಮಧ್ಯ ಪ್ರವೇಶಿಸಿ ಶಬಿಕ್​ಗೆ ವಾರ್ನಿಂಗ್​ ನೀಡಿದರು. ಸದ್ಯ ಈ ವಿಡಿಯೊ ವೈರಲ್(viral video)​ ಆಗಿದೆ.

2 ವಾರಗಳ ಹಿಂದೆ ಗ್ಲೋಬಲ್ ಟಿ20 ಲೀಗ್ ಟೂರ್ನಿಯಲ್ಲಿ ಸೂಪರ್ ಓವರ್(Shakib Al Hasan super over) ಆಡಲು ನಿರಾಕರಿಸಿದ ವಿವಾರವಾಗಿ ಶಕಿಬ್​ ಸುದ್ದಿಯಾಗಿದ್ದರು. ಇವರ ಈ ಕೆಟ್ಟ ನಿರ್ಧಾರದಿಂದ ತಂಡ ಟೂರ್ನಿಯಿಂದಲೇ ಹೊರಬಿದ್ದಿತ್ತು.

ಎಲಿಮಿನೇಟರ್ ಪಂದ್ಯವಾದ ಬಾಂಗ್ಲಾ ಟೈಗರ್ಸ್ ಮತ್ತು ಟೊರೊಂಟೊ ನ್ಯಾಷನಲ್ಸ್ ನಡುವಣ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಫಲಿತಾಂಶ ನಿರ್ಧರಿಸಲು ಆಯೋಜಕರು ಸೂಪರ್ ಓವರ್ ಆಡಲು ನಿರ್ಧರಿಸಿದ್ದರು. ಆದರೆ ಬಾಂಗ್ಲಾ ಟೈಗರ್ಸ್ ತಂಡದ ನಾಯಕ ಶಕಿಬ್‌ ಇದಕ್ಕೆ ಒಪ್ಪಿಗೆ ಸೂಚಿಸಲಿಲ್ಲ. ಕನಿಷ್ಟ 5 ಓವರ್‌ ಆಡಿಸಬೇಕು ಎಂದು ಹಠ ಹಿಡಿದರು. ಇದಕ್ಕೆ ಒಪ್ಪದ ಆಯೋಜಕರು ಪಂದ್ಯವನ್ನೇ ರದ್ದುಗೊಳಿಸಿದರು. ಈ ಪರಿಣಾಮ ಬಾಂಗ್ಲಾ ಟಗರ್ಸ್‌ ತಂಡ ಟೂನಿಯಿಂದಲೇ ಹೊರಬಿದ್ದಿತ್ತು.

ಇದನ್ನೂ ಓದಿ Shakib Al Hasan: ಬಾಂಗ್ಲಾ ತಂಡದ ನಾಯಕ ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್​ ಬಳಿಕ ಕಣ್ಣಿನ ದೃಷ್ಟಿ ಸಮಸ್ಯೆಗೆ ಒಳಗಾಗಿದ್ದ ಶಕೀಬ್​ ಶಸ್ತ್ರಚಿಕಿತ್ಸೆಗೆ ಒಳಗಾಗಿ ಬಹುದಿನಗಳ ವಿಶ್ರಾಂತಿ ಪಡೆದಿದ್ದರು. ಇದೇ ಜೂನ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನಲ್ಲಿ ಆಡುವ ಸಲುವಾಗಿ ಢಾಕಾ ಪ್ರೀಮಿಯರ್ ಲೀಗ್​ನಲ್ಲಿ ಆಡಲಿಳಿದು ವಿಶ್ವಕಪ್‌ ಆಡಿದ್ದರು.

ಶಕಿಬ್​ ವಿರುದ್ಧ ಕೊಲೆ ಪ್ರಕರಣ ದಾಖಲು

ಬಾಂಗ್ಲಾದೇಶದಲ್ಲಿ ನಡೆದ ಹಿಂಸಾಚಾರದ ಸಮಯದಲ್ಲಿ ಆಪಾದಿತ ಕೊಲೆಗೆ ಸಂಬಂಧಿಸಿದಂತೆ 147 ಜನರಲ್ಲಿ ಶಕಿಬ್​ ಕೂಡ ಸೇರಿದ್ದಾರೆ ಎಂದು ಅವರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ರಫೀಕುಲ್ ಇಸ್ಲಾಂ ಎನ್ನುವ ವ್ಯಕ್ತಿ ಪ್ರಕರಣ ದಾಖಲಿಸಿದ್ದು, ಢಾಕಾದಲ್ಲಿ ನಡೆದ ಪ್ರತಿಭಟನೆಯ ವೇಳೆ ತನ್ನ ತಂದೆಯನ್ನು ಕೊಲೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಢಾಕಾದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯನ್ನು ಶಕಿಬ್​ ಅಲ್ ಹಸನ್ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಕಿಬ್ ಮಾತ್ರವಲ್ಲ, ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ ಒಟ್ಟು 500 ಮಂದಿಯನ್ನು ಇದರಲ್ಲಿ ಆರೋಪಿಗಳನ್ನಾಗಿ ಮಾಡಲಾಗಿದೆ.

Exit mobile version