Site icon Vistara News

Shakib Al Hasan : ಕ್ರೀಡಾ ಸ್ಫೂರ್ತಿ ಮರೆತ ಶಕಿಬ್​ ವಿಶ್ವ ಕಪ್​ ಟೂರ್ನಿಯಿಂದಲೇ ಔಟ್​​

Shakib al hasan

ಬೆಂಗಳೂರು: ಲಂಕಾ ತಂಡದ ಬ್ಯಾಟರ್​ ಏಂಜೆಲೋ ಮ್ಯಾಥ್ಯೂಸ್ ಅವರನ್ನು ಟೈಮ್ಡ್​ ಔಟ್ ಮಾಡಿ ಟೀಕೆಗೆ ಒಳಗಾಗಿದ್ದ ಬಾಂಗ್ಲಾದೇಶ ತಂಡದ ನಾಯಕ ಶಕಿಬ್ ಅಲ್​ ಹಸನ್ (Shakib Al Hasan) ವಿಶ್ವ ಕಪ್​ ಟೂರ್ನಿಯಿಂದ ಹೊರಕ್ಕೆ ಬಿದ್ದಿದ್ದಾರೆ. ಎದುರಾಳಿ ತಂಡದ ಆಟಗಾರನೊಬ್ಬನ್ನು ನಿಯಮದ ನೆಪ ಹೇಳಿ ಔಟ್ ಮಾಡಿದ್ದ ಶಕಿಬ್​ ಬಗ್ಗೆ ಕ್ರಿಕೆಟ್ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತಗೊಂಡಿದೆ. ಏತನ್ಮಧ್ಯೆ ಅವರು ಮುಂದಿನ ಪಂದ್ಯಕ್ಕೆ ಇಲ್ಲ ಎಂಬುವ ಮಾಹಿತಿ ಬಂದಿದೆ. ಅಂದ ಹಾಗೆ ಬಾಂಗ್ಲಾದೇಶ ತಂಡ ವಿಶ್ವ ಕಪ್​ ಟೂರ್ನಿಯ 9 ಪಂದ್ಯಗಳಲ್ಲಿ 8ರಲ್ಲಿ ಆಡಿ ಕೇವಲ ಎರಡು ಪಂದ್ಯಗಳನ್ನು ಗೆದ್ದಿದೆ. ಈ ಮೂಲಕ ಹಾಲಿ ಟೂರ್ನಿಯಿಂದ ಹೊರಕ್ಕೆ ಬಿದ್ದಿದೆ. ಹೀಗಾಗಿ ಒಂದೇ ಒಂದು ಪಂದ್ಯ ಬಾಕಿ ಉಳಿದಿದೆ. ಅದಕ್ಕೆ ಅವರು ಲಭ್ಯರಿಲ್ಲ.

ಬಾಂಗ್ಲಾದೇಶದ ನಾಯಕ ಶಕೀಬ್ ಅಲ್ ಹಸನ್ ಎಡಗೈ ತೋರುಬೆರಳಿಗೆ ಗಾಯ ಮಾಡಿಕೊಂಡಿದ್ದರು. ದೆಹಲಿಯಲ್ಲಿ ಸೋಮವಾರ ನಡೆದ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡುವಾಗ ಸ್ಟಾರ್ ಆಲ್​ರೌಂಡರ್​ ಗಾಯಗೊಂಡರು. ಅವರು ಕೇವಲ 65 ಎಸೆತಗಳಲ್ಲಿ 82 ರನ್ ಗಳಿಸಿದ್ದರು ಹಾಗೂ ತಂಡದ ಗೆಲುವಿಗೆ ಕಾರಣರಾಗಿದ್ದರು. ಹೀಗಾಗಿ ಬಾಂಗ್ಲಾದೇಶವು 53 ಎಸೆತಗಳು ಬಾಕಿ ಇರುವಾಗ ಮೂರು ವಿಕೆಟ್​​ಗಳಿಂದ ಗೆಲುವು ಸಾಧಿಸಿತ್ತು.

ಇದನ್ನೂ ಓದಿ : Shakib Al Hasan: ‘ನಾವು ಯುದ್ಧದ್ದಲ್ಲಿದ್ದೆವು’ ಟೀಕಿಸಿದವರಿಗೆ ತಿರುಗೇಟು ನೀಡಿದ ಶಕೀಬ್‌

ಪಂದ್ಯದ ನಂತರ ಎಕ್ಸ್-ರೇ ಪರೀಕ್ಷೆಯು ಮೂಳೆ ಮುರಿತವನ್ನು ದೃಢಪಡಿಸಿತು, ಇದರಿಂದಾಗಿ ಅವರು ನವೆಂಬರ್ 11 ರಂದು ಪುಣೆಯಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ವಿರುದ್ಧದ ಹಣಾಹಣಿಯಿಂದ ಹೊರಗುಳಿಯಬೇಕಾಯಿತು. ಬಾಂಗ್ಲಾ ರಾಷ್ಟ್ರೀಯ ತಂಡದ ಫಿಸಿಯೋ ಬೈದುಲ್ ಇಸ್ಲಾಂ ಖಾನ್ ಗಾಯದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿದ್ದಾರೆ.

“ಇನ್ನಿಂಗ್ಸ್​​ ಆರಂಭದಲ್ಲಿ ಶಕೀಬ್ ಅವರ ಎಡ ತೋರುಬೆರಳಿಗೆ ಪೆಟ್ಟಾಗಿತ್ತು. ಆದರೆ ಟ್ಯಾಪಿಂಗ್ ಮತ್ತು ನೋವು ನಿವಾರಕಗಳೊಂದಿಗೆ ಬ್ಯಾಟಿಂಗ್ ಮುಂದುವರಿಸಿದರು ಎಂದು ಅವರು ಹೇಳಿದ್ದಾರೆ. ಪಂದ್ಯದ ನಂತರ ಅವರನ್ನು ದೆಹಲಿಯಲ್ಲಿ ತುರ್ತು ಎಕ್ಸ್-ರೇಗೆ ಒಳಪಡಿಸಲಾಯಿತು/ ಇದು ಎಡ ಪಿಐಪಿ ಕೀಲಿನ ಮೂಳೆ ಮುರಿತವನ್ನು ದೃಢಪಡಿಸಿತು. ಚೇತರಿಕೆ ಅವಧಿ ಮೂರರಿಂದ ನಾಲ್ಕು ವಾರ ಎಂದು ಅಂದಾಜಿಸಲಾಗಿದೆ. ಅವರು ತಮ್ಮ ಪುನಶ್ಚೇತನವನ್ನು ಪ್ರಾರಂಭಿಸಲು ಇಂದು ಬಾಂಗ್ಲಾದೇಶಕ್ಕೆ ತೆರಳಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಬಾಂಗ್ಲಾ ತಂಡಕ್ಕೂ ಅನಿವಾರ್ಯ ಪಂದ್ಯ

ಬಾಂಗ್ಲಾದೇಶ ತಂಡವು ಈಗಾಗಲೇ ವಿಶ್ವಕಪ್ 2023 ರ ಸೆಮಿಫೈನಲ್ ಸ್ಪರ್ಧೆಯಿಂದ ಹೊರಗುಳಿದಿದೆ. ಆದರೆ ಚಾಂಪಿಯನ್ಸ್ ಟ್ರೋಫಿ 2025 ರ ಅರ್ಹತೆಗೆ ಈ ಪಂದ್ಯವು ನಿರ್ಣಾಯಕ ಎನಿಸಿಕೊಂಡಿದೆ. ಅಗ್ರ 7 ತಂಡಗಳು ಮತ್ತು ಆತಿಥೇಯ ರಾಷ್ಟ್ರ ಪಾಕಿಸ್ತಾನ 2025ರಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗೆ ಅರ್ಹತೆ ಪಡೆಯಲಿವೆ.

ಬಾಂಗ್ಲಾದೇಶ ಪ್ರಸ್ತುತ ಪಾಯಿಂಟ್ಸ್ ಟೇಬಲ್​​ನಲ್ಲಿ 8 ನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ವಿರುದ್ಧ ಗೆದ್ದರೆ ಐಸಿಸಿ ಪಂದ್ಯಾವಳಿಗೆ ಅರ್ಹತೆಯನ್ನು ಖಚಿತಪಡಿಸುತ್ತದೆ.

Exit mobile version