Site icon Vistara News

Rohit Sharma : ಶುಭ್​ಮನ್​ ಹೊರಗಿಟ್ಟು ಸೇಡು ತೀರಿಸಿಕೊಂಡ್ರಾ ರೋಹಿತ್​ ಶರ್ಮಾ?

Rohit Sharma

ವಿಸ್ತಾರ ನ್ಯೂಸ್​, ಬೆಂಗಳೂರು: ಇಂದೋರ್​ನಲ್ಲಿ ನಡೆಯಲಿರುವ ಮೂರು ಪಂದ್ಯಗಳ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಭಾರತವು ಅಫ್ಘಾನಿಸ್ತಾನ ನಡುವಿನ ಪಂದ್ಯದ ಪ್ಲೇಯಿಂಗ್ ಇಲೆವೆನ್​ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದೆ. ಪಂದ್ಯದಲ್ಲಿ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಅವರನ್ನು ತಂಡದಿಂದ ಕೈಬಿಟ್ಟಿರುವುದು ರೋಹಿತ್ ಶರ್ಮಾ ಅವರ ಸೇಡಿನ ಕ್ರಮ ಎಂದು ಅಭಿಮಾನಿಗಳು ಆರೋಪಿಸಿದ್ದಾರೆ.

ಮೊದಲ ಟಿ20 ಪಂದ್ಯದಲ್ಲಿ ಶುಭ್ಮನ್ ಗಿಲ್ 12 ಎಸೆತಗಳಲ್ಲಿ 23 ರನ್ ಬಾರಿಸಿದ್ದರು. ಆದಾಗ್ಯೂ, ಅದಕ್ಕಿಂತ ಮೊದಲು ನಾಯಕ ರೋಹಿತ್ ಶರ್ಮಾ ಅವರು ರನ್​ಔಟ್​ ಆಗಲು ಅವರು ಕಾರಣರಾಗಿದ್ದರು. ಶರ್ಮಾ ಚೆಂಡನ್ನು ಬಾರಿಸಿ ರನ್​ಗಾಗಿ ಗಿಲ್​ಗೆ ಕರೆ ಕೊಟ್ಟರು. ಶುಬ್ಮನ್ ಗಿಲ್​, ರೋಹಿತ್ ಅವರ ಕರೆಗೆ ಪ್ರತಿಕ್ರಿಯಿಸಲಿಲ್ಲ. ಭಾರತೀಯ ನಾಯಕ ಓಡಿ ಬಂದಿದ್ದರೂ ಅವರು ಬರಲಿಲ್ಲ. ಕೊನೆಗೆ ರೋಹಿತ್ ಶರ್ಮಾ ತಮ್ಮ ವಿಕೆಟ್ ತ್ಯಾಗ ಮಾಡಿದರು. ಅವರು ಶೂನ್ಯಕ್ಕೆ ಔಟಾದರು. ಕೋಪಗೊಂಡ ರೋಹಿತ್​ ಶುಭಮಮ್​ಗೆ ಬೈದಿದ್ದರು.

ತಮ್ಮನ್ನು ರನ್​ಔಟ್ ಮಾಡಿದ ಕಾರಣಕ್ಕೆ ರೋಹಿತ್​ ಶರ್ಮಾ ಈ ಪಂದ್ಯದಲ್ಲಿ ಶುಭ್​ಮನ್ ಗಿಲ್​ ಅವರನ್ನು ಆಡುವ ಬಳಗದಿಂದ ಹೊರಕ್ಕೆ ಇಟ್ಟಿದ್ದಾರೆ ಎಂಬುದಾಗಿ ಅಭಿಮಾನಿಗಳು ಆರೋಪಿಸಿದ್ದಾರೆ. ವಾಸ್ತವದಲ್ಲಿ ಹಿಂದಿನ ಪಂದ್ಯದಲ್ಲಿ ಜೈಸ್ವಾಲ್ ಸೊಂಟ ನೋವಿನ ಕಾರಣಕ್ಕೆ ಆಡಿರಲಿಲ್ಲ. ಹೀಗಾಗಿ ಗಿಲ್ ಅವಕಾಶ ಪಡೆದುಕೊಂಡಿದ್ದರು. ರೋಹಿತ್ ಜತೆ ಇನಿಂಗ್ಸ್ ಆರಂಭಿಸಲು ಜೈಸ್ವಾಲ್ ಸೂಕ್ತ ಎಂದು ಕೋಚ್​ ದ್ರಾವಿಡ್ ಮೊದಲೇ ಹೇಳಿದ್ದ ಕಾರಣ ಅವರೇ ಮೊದಲ ಆಯ್ಕೆಯಾಗಿದ್ದರು. ಗಿಲ್ ಅವಕಾಶ ಪಡೆಯಲಿಲ್ಲ. ವಿರಾಟ್ ಬಂದ ಕಾರಣ ತಿಲಕ್​ ವರ್ಮಾ ಜಾಗ ಬಿಡಬೇಕಾಯಿತು.

ಎರಡನೇ ಟಿ 20 ಪಂದ್ಯವು ಭಾರತೀಯ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ 14 ತಿಂಗಳ ನಂತರ ಅಂತರರಾಷ್ಟ್ರೀಯ ಸ್ವರೂಪಕ್ಕೆ ಮರಳುವುದನ್ನು ಸೂಚಿಸುತ್ತದೆ. ಇಂಗ್ಲೆಂಡ್ ವಿರುದ್ಧದ ಟಿ 20 ವಿಶ್ವಕಪ್ 2022 ರ ಸೆಮಿಫೈನಲ್ನಲ್ಲಿ ಅವರು ಕೊನೆಯ ಬಾರಿಗೆ ಟಿ 20 ಪಂದ್ಯಗಳಲ್ಲಿ ಭಾರತಕ್ಕಾಗಿ ಕಾಣಿಸಿಕೊಂಡರು.

2024ರ ಟಿ20 ವಿಶ್ವಕಪ್​ಗೂ ಮುನ್ನ ಭಾರತ ಹಾಗೂ ಅಫಘಾನಿಸ್ತಾನ ನಡುವಿನ ಸರಣಿ ಭಾರತಕ್ಕೆ ಕೊನೇ ಸರಣಿಯಾಗಿದೆ. ಭಾರತ ಎರಡನೇ ಪಂದ್ಯವನ್ನು ಗೆದ್ದು ಸರಣಿ ಗೆಲ್ಲುವ ಗುರಿ ಹೊಂದಿದೆ. ಮುಂಬರುವ ಟಿ20 ವಿಶ್ವಕಪ್​ಗಾಗಿ ತಮ್ಮ ಅಂತಿಮ 15 ಆಟಗಾರರನ್ನು ನಿರ್ಧರಿಸಲು ಭಾರತೀಯ ತಂಡಕ್ಕೆ ಇದು ಕೊನೆಯ ಅವಕಾಶವಾಗಿದೆ, ಆದಾಗ್ಯೂ, ಕೆಲವು ಆಟಗಾರರು ಇಂಡಿಯನ್ ಪ್ರೀಮಿಯರ್ ನಲ್ಲಿ ಪರೀಕ್ಷೆಗೆ ಒಳಪಡಲಿದ್ದಾರೆ.

ಇದನ್ನೂ ಓದಿ : Rohit Sharma : ಟಿ20 ಕ್ರಿಕೆಟ್​ನಲ್ಲಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ

ಭಾರತ 11ರ ಬಳಗ : ಭಾರತ: ರೋಹಿತ್ ಶರ್ಮಾ (ನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ (ನಾಯಕ), ಶಿವಂ ದುಬೆ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ರಿಂಕು ಸಿಂಗ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅರ್ಷ್ದೀಪ್ ಸಿಂಗ್, ಮುಖೇಶ್ ಕುಮಾರ್.

ಅಫ್ಘಾನಿಸ್ತಾನ ತಂಡ: ರಹಮಾನುಲ್ಲಾ ಗುರ್ಬಾಜ್ (ವಿಕೆ), ಇಬ್ರಾಹಿಂ ಝದ್ರನ್ (ಸಿ), ಅಜ್ಮತುಲ್ಲಾ ಒಮರ್ಜೈ, ಮೊಹಮ್ಮದ್ ನಬಿ, ನಜೀಬುಲ್ಲಾ ಝದ್ರನ್, ಕರೀಮ್ ಜನತ್, ಗುಲ್ಬಾದಿನ್ ನೈಬ್, ನೂರ್ ಅಹ್ಮದ್, ಫಜಲ್ಹಾಕ್ ಫಾರೂಕಿ, ನವೀನ್-ಉಲ್-ಹಕ್, ಮುಜೀಬ್ ಉರ್ ರಹಮಾನ್.

Exit mobile version