ಮುಂಬೈ: ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ (Mohammed Shami) ಮತ್ತೊಂದು ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಕ್ರಿಕೆಟ್ ವಿಶ್ವಕಪ್ನಲ್ಲಿ ತಮ್ಮ ಕನಸಿನ ಓಟವನ್ನು ಮುಂದುವರಿಸಿದ್ದಾರೆ. 33ರ ಹರೆಯದ ಬಲಗೈ ವೇಗಿ 7 ವಿಕೆಟ್ ಕಬಳಿಸುವ ಮೂಲಕ ನ್ಯೂಜಿಲೆಂಡ್ ತಂಡವನ್ನು 327 ರನ್ಗಳಿಗೆ ಕಟ್ಟಿಹಾಕಲು ಭಾರತ ತಂಡಕ್ಕೆ ವಿಶ್ವಕಪ್ ಫೈನಲ್ ಪ್ರವೇಶಿಸಲು ನೆರವಾದರು.
ಭಾರತದ ಅನುಭವಿ ವೇಗಿ ತಮ್ಮ ಅಸಾಧಾರಣ ಸ್ಪೆಲ್ ಮೂಲಕ ಅನೇಕ ದಾಖಲೆಗಳನ್ನು ನಿರ್ಮಿಸಿದರು. ಅವರ 57 ರನ್ಗೆ 7 ವಿಕೆಟ್ ಭಾರತ ತಂಡದ ಯಾವುದೇ ಬೌಲರ್ ಪಾಲಿಗೆ ಏಕದಿನ ಕ್ರಿಕೆಟ್ನಲ್ಲಿ ಗರಿಷ್ಠ ವಿಕೆಟ್ ಸಾಧನೆಯಾಗಿದೆ ಈ ಹಿಂದೆ 2014ರಲ್ಲಿ ಬಾಂಗ್ಲಾದೇಶ ವಿರುದ್ಧ ಸ್ಟುವರ್ಟ್ ಬಿನ್ನಿ 6-4 ವಿಕೆಟ್ ಪಡೆದಿರುವುದ ದೊಡ್ಡ ಸಾಧನೆಯಾಗಿತ್ತು.
ವಿಶ್ವಕಪ್ ಟೂರ್ನಿಯಲ್ಲಿ ನಾಲ್ಕನೇ ಬಾರಿ 5 ವಿಕೆಟ್ ಸಾಧನೆ ಮಾಡಿದ ಶಮಿ ವಿಶ್ವಕಪ್ನಲ್ಲಿ ಅತಿ ಹೆಚ್ಚು ಬಾರಿ 5 ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 2019ರಲ್ಲಿ 2 ಹಾಗೂ 2015ರ ವಿಶ್ವಕಪ್ನಲ್ಲಿ 1 ಬಾರಿ ಐದ ವಿಕೆಟ್ ಸಾಧನೆ ಮಾಡಿದ್ದರು. ಅವರ ದಾಖಲೆಯನ್ನು ಶಮಿ ಮುರಿದಿದ್ದಾರೆ.
This is an Iconic moment. 🔥
— Johns. (@CricCrazyJohns) November 15, 2023
– Shami, the hero. pic.twitter.com/6c3xFnMEmu
ವಿಶ್ವಕಪ್ ಒಂದೇ ಆವೃತ್ತಿಯಲ್ಲಿ ಮೂರು ಬಾರಿ ಐದು ವಿಕೆಟ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೂ ಶಮಿ ಪಾತ್ರರಾಗಿದ್ದಾರೆ. ಮೊಹಮ್ಮದ್ ಶಮಿ ಹಾಲಿ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಆಡಮ್ ಜಂಪಾ ಅವರನ್ನು ಹಿಂದಿಕ್ಕಿ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡರು. ಜಂಪಾ 22 ವಿಕೆಟ್ ಪಡೆದಿದ್ದರೆ, ಶಮಿ 23 ವಿಕೆಟ್ ಉರುಳಿಸಿದ್ದಾರೆ.
ಇದನ್ನೂ ಓದಿ : Mohammed Shami : ವಿಶ್ವ ಕಪ್ನಲ್ಲಿ ವಿಕೆಟ್ಗಳ ಅರ್ಧ ಶತಕ ಬಾರಿಸಿ ನೂತನ ದಾಖಲೆ ಬರೆದ ಶಮಿ
ಮೊಹಮ್ಮದ್ ಶಮಿಯ ದಾಖಲೆಗಳು
- ಏಕದಿನ ಇತಿಹಾಸದಲ್ಲಿ ಭಾರತದ ಬೌಲರ್ ಒಬ್ಬರ ಅತ್ಯುತ್ತಮ ಬೌಲಿಂಗ್ ಅಂಕಿಅಂಶಗಳು.
- ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರ.
- ವಿಶ್ವಕಪ್ ನಲ್ಲಿ ಅತಿ ಹೆಚ್ಚು ಬಾರಿ ಐದು ವಿಕೆಟ್ ಸಾಧನೆ.
- ವಿಶ್ವಕಪ್ ನಲ್ಲಿ ಭಾರತೀಯರ ಅತ್ಯುತ್ತಮ ಬೌಲಿಂಗ್ ಅಂಕಿಅಂಶ.
- ವಿಶ್ವಕಪ್ ನಲ್ಲಿ ಅತಿ ವೇಗದ 50 ವಿಕೆಟ್ ಗಳು.
ನನ್ನ ಸಮಯಕ್ಕೆ ಕಾಯುವೆ
ಸಾಧನೆಗಳನ್ನು ಮಾಡಿದ ಬಳಿಕ ಮಾತನಾಡಿದ ಶಮಿ. ಮ್ಯಾಜಿಕ್ ಸ್ಪೆಲ್ನ ಗುಟ್ಟು ಬಗ್ಗೆ ತೆರೆದಿಟ್ಟರು ಮತ್ತು “ನನ್ನ ಸರದಿಗಾಗಿ ಕಾಯುತ್ತಿದ್ದೇನೆ” ಎಂದು ಹೇಳಿದರು. ವಿಶೇಷವೆಂದರೆ, ಶಮಿ ಭಾರತದ ಮೊದಲ ಮೂರು ಪಂದ್ಯಗಳನ್ನು ಆಡಲಿಲ್ಲ. ನಂತರ ಅವಕಾಶ ಪಡೆದು ಇದೀಗ ಕೇವಲ ಏಳು ಪಂದ್ಯಗಳಲ್ಲಿ 23 ವಿಕೆಟ್ ಉರುಳಿಸಿದ್ದಾರೆ.
“ನಾನು ನನ್ನ ಸರದಿಗಾಗಿ ಕಾಯುತ್ತಿದ್ದೆ. ನಾನು ಹೆಚ್ಚು ವೈಟ್ ಬಾಲ್ ಕ್ರಿಕೆಟ್ ಆಡುತ್ತಿರಲಿಲ್ಲ. ನನ್ನ ಮನಸ್ಸಿನಲ್ಲಿತ್ತು, ನಾವು ಯಾರ್ಕರ್ ಗಳು ಮತ್ತು ನಿಧಾನಗತಿಯ ಚೆಂಡುಗಳಂತಹ ಬಹಳಷ್ಟು ವಿಷಯಗಳ ಬಗ್ಗೆ ಮಾತನಾಡುತ್ತೇವೆ. ನಾನು ಹೊಸ ಚೆಂಡಿನೊಂದಿಗೆ ವಿಕೆಟ್ ಪಡೆಯಲು ಪ್ರಯತ್ನಿಸಿದೆ. ಹೊಸ ಚೆಂಡಿನೊಂದಿಗೆ ನಾನು ಸಾಧ್ಯವಾದಷ್ಟು ವಿಕೆಟ್ ಪಡೆಯಲು ಪ್ರಯತ್ನಿಸುತ್ತೇನೆ”ಎಂದು ಶಮಿ ಹೇಳಿದರು.
ನವೆಂಬರ್ 19 ರಂದು ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಸೆಮಿಫೈನಲ್ ಪಂದ್ಯದ ವಿಜೇತರನ್ನು ಟೀಮ್ ಇಂಡಿಯಾ ಫೈನಲ್ನಲ್ಲಿ ಎದುರಿಸಲಿದೆ.