Site icon Vistara News

Shanghai Masters: ಬೋಪಣ್ಣ–ಎಬ್ಡೆನ್‌ ಜೋಡಿ ರನ್ನರ್​ ಅಪ್

rohan bopanna

ಶಾಂಘೈ: ಭಾರತದ ರೋಹನ್ ಬೋಪಣ್ಣ (Rohan Bopanna) ಮತ್ತು ಮ್ಯಾಥ್ಯೂ ಎಬ್ಡೆನ್‌(Matthew Ebden) ಜೋಡಿ ಶಾಂಘೈ ಓಪನ್(Shanghai Masters)​ ಟೆನಿಸ್​ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದ ಫೈನಲ್​ನಲ್ಲಿ ಸೋಲು ಕಂಡು ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.

ನಾಲ್ಕನೇ ಶ್ರೇಯಾಂಕ ಹೊಂದಿದ್ದ ಬೋಪಣ್ಣ– ಎಬ್ಡೆನ್‌ ಜೋಡಿ ಫೈನಲ್​ನಲ್ಲಿ 5–7, 6–2, 10–7 ಅಂತರದಿಂದ ಸ್ಪೇನ್‌ನ ಮಾರ್ಸೆಲ್‌ ಗ್ರಾನೊಲೆರ್ಸ್‌ ಮತ್ತು ಅರ್ಜೆಂಟೀನಾದ ಹೊರಾಸಿಯೊ ಝೆಬೆಲೊಸ್‌ ವಿರುದ್ಧ ಸೋಲು ಕಂಡರು. ಮೊದಲ ಸೆಟ್‌ ಗೆದ್ದು ಉತ್ತಮ ಆರಂಭ ಪಡೆದಿದ್ದ ಇಂಡೋ-ಆಸೀಸ್​ ಜೋಡಿ ಆ ಬಳಿಕದ ಸೆಟ್​ನಲ್ಲಿ ಇದೇ ಲಯವನ್ನು ಮುಂದುವರಿಸುವಲ್ಲಿ ಎಡವಿತು. ಏಳನೇ ಶ್ರೇಯಾಂಕದ ಗ್ರಾನೊಲೆರ್ಸ್‌ ಮತ್ತು ಝೆಬೆಲೊಸ್‌ ಅವರು ಆಕ್ರಮಣಕಾರಿ ಆಟವಾಡಿ ಪಂದ್ಯವನ್ನು ಗೆದ್ದರು. ಈ ಪಂದ್ಯ ಒಂದು ಗಂಟೆ 23 ನಿಮಿಷಗಳ ಕಾಲ ನಡೆಯಿತು.

ಏಷ್ಯನ್​ ಗೇಮ್ಸ್​ನಲ್ಲಿ ಚಿನ್ನ

ಇದೇ ಅಕ್ಟೋಬರ್ ಮೊದಲ ವಾರ ಚೀನಾದಲ್ಲಿ ಮುಕ್ತಾಯ ಕಂಡ ಏಷ್ಯನ್​ ಗೇಮ್ಸ್​ನಲ್ಲಿ(Asian Games 2023) ರೋಹನ್‌ ಬೋಪಣ್ಣ(Rohan Bopanna) ಅವರು ರುತುಜಾ ಭೋಸಲೆ(Rutuja Bhosale) ಜತೆ ಮಿಕ್ಸೆಡ್‌ ಡಬಲ್ಸ್ ಆಡಿ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಒಂದು ವಾರದ ಅಂತರದಲ್ಲಿ ಮತ್ತೊಂದು ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಮೆಚ್ಚಲೇ ಬೇಕು.

43 ವರ್ಷದ ಕೊಡಗಿನವರಾದ ರೋಹನ್ ಬೋಪಣ್ಣ ಅವರು ಕಳೆದ ತಿಂಗಳು ನಡೆದಿದ್ದ ಯುಎಸ್ ಓಪನ್‌ 2023ರ(US Open 2023) ಪುರುಷರ ಡಬಲ್ಸ್ ವಿಭಾಗದಲ್ಲಿ ರನ್ನರ್​ಅಪ್​ ಸ್ಥಾನ ಪಡೆದಿದ್ದರು. ಜತೆಗೆ ಗ್ರ್ಯಾಂಡ್ ಸ್ಲಾಮ್ ಡಬಲ್ಸ್ ಫೈನಲ್ ತಲುಪಿದ ಅತ್ಯಂತ ಹಿರಿಯ ಆಟಗಾರ ಎಂಬ ವಿಶ್ವ ದಾಖಲೆ ಬರೆದಿದ್ದರು. ಇದೇ ವರ್ಷ ದೋಹಾ ಮತ್ತು ಇಂಡಿಯನ್ ವೆಲ್ಸ್‌ನಲ್ಲಿ ಪ್ರಶಸ್ತಿ ಗೆದ್ದಿದ್ದರು. ಎರಡು ತಿಂಗಳ ಹಿಂದೆ ನಡೆದಿದ್ದ ವಿಂಬಲ್ಡನ್​ ಟೂರ್ನಿಯ(Wimbledon 2023) ಸೆಮಿಫೈನಲ್‌ ಪ್ರವೇಶಿಸಿದ ಸಾಧನೆ ಮಾಡಿತ್ತು. ಆದರೆ ಇಲ್ಲಿ ಅಗ್ರ ಶ್ರೇಯಾಂಕದ ನೆದರ್ಲೆಂಡ್ಸ್‌-ಬ್ರಿಟಿಷ್‌ ಜೋಡಿಯಾದ ವೆಸ್ಲೆ ಕೂಲ್‌ಹೋಫ್ ಮತ್ತು ನೀಲ್‌ ಸ್ಕಾಪ್‌ಸ್ಕಿ ಎದುರು ಸೋಲು ಕಂಡಿದ್ದರು. 

ಇದನ್ನೂ ಓದಿ Rohan Bopanna: ಡೇವಿಸ್‌ ಕಪ್​ ವಿದಾಯಕ್ಕೆ ರೋಹನ್‌ ಬೋಪಣ್ಣ ನಿರ್ಧಾರ

2010ರ ಯುಎಸ್ ಓಪನ್‌ನಲ್ಲಿ ಬೋಪಣ್ಣ ಅವರು ಪಾಕಿಸ್ತಾನದ ಐಸಾಮ್-ಉಲ್-ಹಕ್ ಖುರೇಷಿ ಜತೆಗೆ ಕಣಕ್ಕಿಳಿದು ಈ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದ್ದರು. ಆದರೆ ಇಲ್ಲಿ 7–6(7–5), 7–6(7–4) ಅಂತರದಿಂದ ಸೋತು ರನ್ನರ್​ ಅಪ್​ಗೆ ತೃಪ್ತಿಪಟ್ಟಿದ್ದರು. 

Exit mobile version