Site icon Vistara News

CWG-2022 | ಪುರುಷರ ಟಿಟಿ ಡಬಲ್ಸ್‌ ತಂಡದ ಬೆಳ್ಳಿ ಪದಕದ ಕಮಾಲ್‌

CWG-2022

ಬರ್ಮಿಂಗ್ಹಮ್‌ : ಅಚಂತಾ ಶರತ್‌ ಕಮಾಲ್‌ ಹಾಗೂ ಜಿ ಸತಿಯನ್‌ ಅವರಿದ್ದ ಭಾರತದ ಪುರುಷರ ಟೇಬಲ್‌ ಟೆನಿಸ್‌ ತಂಡ ಕಾಮನ್ವೆಲ್ತ್‌ ಗೇಮ್ಸ್‌ (CWG- 2022) ಕ್ರೀಡಾಕೂಟದಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿದ್ದಾರೆ. ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ ಇಂಗ್ಲೆಂಡ್‌ನ ಪಾಲ್ ಡ್ರಿಂಕಾಲ್‌ ಹಾಗೂ ಲಿಯಾಮ್‌ ಪಿಚ್‌ಫೋರ್ಡ್‌ ವಿರುದ್ಧ ೩-೨ ಅಂತರದಿಂದ ಸೋಲು ಕಂಡರು. ಇವರ ಬೆಳ್ಳಿಯ ಪದಕದೊಂದಿಗೆ ಭಾರತಕ್ಕೆ ೧೩ ಬೆಳ್ಳಿ ಪದಕಗಳು ಸಿಕ್ಕಂತಾಗಿದೆ. ಒಟ್ಟಾರೆ ಪದಕಗಳ ಸಂಖ್ಯೆ ೪೯ಕ್ಕೆ ಏರಿದ್ದು, `೧೭ ಬಂಗಾರ ಹಾಗೂ ೧೯ ಕಂಚಿನ ಪದಕಗಳೂ ಇವೆ.

ಮೊದಲ ಸೆಟ್‌ನಲ್ಲಿ ಪ್ರಭಾವಿ ಪ್ರದರ್ಶನ ನೀಡಿದ ಭಾರತದ ಜೋಡಿ ಇಂಗ್ಲೆಂಡ್‌ ಆಟಗಾರರ ವಿರುದ್ಧ ೧೧-೮ ಅಂಕಗಳಿಂದ ಗೆಲುವು ಸಾಧಿಸಿದರು. ಆದರೆ, ೮-೧೧, ೩-೧೧ ಅಂಕಗಳಿಂದ ಮುಂದಿನೆರಡು ಪಂದ್ಯಗಳನ್ನು ಕಳೆದುಕೊಂಡರು. ಆದರೆ, ಆದರೆ, ನಾಲ್ಕನೇ ಸೆಟ್‌ನಲ್ಲಿ ತಿರುಗೇಟು ನೀಡಿದ ಭಾರತದ ೧೧-೭ ಅಂಕಗಳಿಂದ ಗೆಲುವು ಸಾಧಿಸಿತು. ಹೀಗಾಗಿ ಪಂದ್ಯ ಐದನೇ ಹಾಗೂ ನಿರ್ಣಾಯಕ ಸೆಟ್‌ಗೆ ಮುಂದುವರಿಯಿತು. ಆದರೆ, ಸೆಟ್‌ನಲ್ಲಿ ಹಿನ್ನಡೆ ಅನುಭವಿಸಿ ೪-೧೧ರಿಂದ ಸೋಲು ಕಂಡಿತು.

ಅದಕ್ಕಿಂತ ಮೊದಲು ಮಹಿಳೆಯರ ಸಿಂಗಲ್ಸ್‌ನ ಕಂಚಿನ ಪದಕದ ಪಂದ್ಯದಲ್ಲಿ ಭಾರತದ ಶ್ರೀಜಾ ಅಕುಲಾ, ಆಸ್ಟ್ರೇಲಿಯಾದ ಯಾಂಗ್ಜಿ ಲಿಯು ವಿರುದ್ಧ ಸೋಲು ಅನುಭವಿಸಿದ್ದರು.

ಇದನ್ನೂ ಓದಿ | CWG- 2022 | ವಿಶ್ವ ಚಾಂಪಿಯನ್‌ ನಿಖತ್ ಜರೀನ್‌ಗೆ ಕಾಮನ್ವೆಲ್ತ್‌ನಲ್ಲೂ ಬಂಗಾರದ ಪದಕ

Exit mobile version