Site icon Vistara News

Shivam Dube: ಧೋನಿ ಸಲಹೆಯಿಂದ ಐರ್ಲೆಂಡ್​ ಸರಣಿಯಲ್ಲಿ ಅವಕಾಶ ಸಿಕ್ಕಿತು; ದುಬೆ

Shivam Dube and ms dhoni

ಮುಂಬಯಿ: ಐರ್ಲೆಂಡ್​ ವಿರುದ್ಧದ ಟಿ20 ಸರಣಿಯಲ್ಲಿ(ireland t20 series) ಸ್ಥಾನ ಪಡೆಯುವ ಮೂಲಕ ಮತ್ತೆ ಟೀಮ್​ ಇಂಡಿಯಾಕ್ಕೆ ಕಬ್​ಬ್ಯಾಕ್​ ಮಾಡಿದ ಬಗ್ಗೆ ಆಲ್​ರೌಂಡರ್​ ಶಿವಂ ದುಬೆ(shivam dube) ಅವರು ಮುಕ್ತವಾಗಿ ಮಾತನಾಡಿದ್ದಾರೆ. ತಮ್ಮ ಈ ಕಮ್​ಬ್ಯಾಕ್​ಗೆ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರ ಅತ್ಯಮೂಲ್ಯ ಸಲಹೆಯೇ ಕಾರಣ ಎಂದು ಹೇಳಿದ್ದಾರೆ.

ದೇವಧರ್ ಟ್ರೋಫಿಯಲ್ಲಿ ಪಶ್ಚಿಮ ವಲಯವನ್ನು ಮುನ್ನಡೆಸುತ್ತಿರುವ ಶಿವಂ ದುಬೆ ಐರ್ಲೆಂಡ್​ ಸರಣಿಗೆ ಆಯ್ಕೆಯಾದ ವಿಚಾರವಾಗಿ ಮಾತನಾಡುವ ವೇಳೆ ಧೋನಿಯ ಸಲಹೆಯನ್ನು ನೆನಪಿಸಿಕೊಂಡರು. “ನಾನು ಭಾರತ ಪರ 4 ವರ್ಷಗಳ ಹಿಂದೆಯೇ ಆಡಿದ್ದರೂ ಬಳಿಕ ಕಳಪೆ ಫಾರ್ಮ್​ನಿಂದಾಗಿ ತಂಡದಿಂದ ಹೊರಗುಳಿದಿದ್ದೆ. ಐಪಿಎಲ್​ನಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲನಾಗುತ್ತಿದೆ. ಇನ್ನೇನು ನನ್ನ ಕ್ರಿಕೆಟ್​ ಕೆರಿಯನ್​ ಅಂತ್ಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಧೋನಿ ಅವರ ತಂಡದಲ್ಲಿ ಆಡುವ ಅವಕಾಶವೊಂದು ಲಭಿಸಿತು. ಚೆನ್ನೈ(chennai super kings) ಪರ ಆಡುವ ವೇಳೆ ಧೋನಿ ನೀಡಿದ ಸಲಹೆ ಮತ್ತೆ ನನ್ನ ಕ್ರಿಕೆಟ್​ ಬಾಳ್ವೆಯನ್ನು ಬದಲಿಸಿತು. ಆಟದಲ್ಲಿನ ನ್ಯೂನತೆಗಳು ಸರಿಪಡಿಸಿಕೊಂಡು ಈ ಬಾರಿಯ ಐಪಿಎಲ್​ನಲ್ಲಿ ಶ್ರೇಷ್ಠ ಪ್ರದರ್ಶನ ತೋರುವಂತಾಯಿತು. ಧೋನಿ ಅವರ ಸಲಹೆ ನನ್ನ ಕ್ರಿಕೆಟ್​ ವೃತ್ತಿಜೀವನದ ಮಹತ್ವದ ತಿರುವು” ಎಂದು ದುಬೆ ಹೇಳಿದರು.

2019ರಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದ ಶಿವಂ ದುಬೆ ಒಂದು ಏಕದಿನ ಮತ್ತು 13 ಟಿ20 ಪಂದ್ಯಗಳನ್ನು ಆಡಿದ್ದಾರೆ. ಟಿ20ಯಲ್ಲಿ ಒಂದು ಅರ್ಧಶತಕ ಬಾರಿಸಿ ಒಟ್ಟು 105 ರನ್​ ಗಳಿಸಿದ್ದಾರೆ. 51 ಐಪಿಎಲ್​ ಪಂದ್ಯಗಳಿಂದ 1106 ರನ್​ ಕಲೆಹಾಕಿದ್ದಾರೆ. ಇದೀಗ ನಾಲ್ಕು ವರ್ಷಗಳ ಬಳಿಕ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಷ್ಯನ್​ ಗೇಮ್ಸ್​ನಲ್ಲಿಯೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. 16ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2023) 16 ಪಂದ್ಯಗಳನ್ನಾಡಿದ ದುಬೆ ವಿಸ್ಫೋಟಕ ಬ್ಯಾಟಿಂಗ್​ ನಡೆಸಿ 418 ರನ್ ಬಾರಿಸಿ ಚೆನ್ನೈ ಸೂಪರ್​ ಕಿಂಗ್ಸ್​ ಪರ 3ನೇ ಗರಿಷ್ಠ ಮೊತ್ತ ಬಾರಿಸಿದ ಆಟಗಾರನಾಗಿ ಮೂಡಿ ಬಂದಿದ್ದರು.

ಇದನ್ನೂ ಓದಿ Team India : ಕ್ರಿಕೆಟ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌; ಐರ್ಲೆಂಡ್‌ ಸರಣಿಗೆ ತಂಡ ಸೇರಿಕೊಳ್ಳಲಿದ್ದಾರೆ ಮಾರಕ ವೇಗಿ!

ಕಳೆದ 11 ತಿಂಗಳಿಂದ ಗಾಯಾಳಾಗಿ ಭಾರತ ತಂಡದಿಂದ ಬೇರ್ಪಟ್ಟಿದ್ದ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಅವರು ಐರ್ಲೆಂಡ್​ ವಿರುದ್ಧದ ಸರಣಿಯ ಮೂಲಕ ಕಮ್​ಬ್ಯಾಕ್​ ಮಾಡಲಿದ್ದಾರೆ. ಜತೆಗೆ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್​ನಲ್ಲಿ 5 ಸಿಕ್ಸರ್​ ಬಾರಿಸಿದ ರಿಂಕು ಸಿಂಗ್​ ಕೂಡ ಸ್ಥಾನ ಪಡೆದಿದ್ದಾರೆ. ಭಾರತ ಮತ್ತು ಐರ್ಲೆಂಡ್​ ನಡುವಣ ಟಿ20 ಸರಣಿ ಆಗಸ್ಟ್​ 18-23ರ ಅವಧಿಯಲ್ಲಿ ನಡೆಯಲಿದೆ.

ಭಾರತ ತಂಡ

ಜಸ್‌ಪ್ರೀತ್‌ ಬುಮ್ರಾ (ನಾಯಕ), ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಜಿತೇಶ್‌ ಶರ್ಮ, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಶಾಬಾಜ್‌ ಅಹ್ಮದ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್​ದೀಪ್‌ ಸಿಂಗ್‌, ಮುಕೇಶ್‌ ಕುಮಾರ್‌, ಆವೇಶ್‌ ಖಾನ್‌.

Exit mobile version