Site icon Vistara News

Shivam Dube : ವಿರಾಟ್​ ಕೊಹ್ಲಿ, ಯುವರಾಜ್​ ಸಿಂಗ್​ ದಾಖಲೆ ಪಟ್ಟಿ ಸೇರಿದ ಶಿವಂ ದುಬೆ

Shivam Dube

ವಿಸ್ತಾರ ನ್ಯೂಸ್ ಬೆಂಗಳೂರು : ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಭಾರತ ತಂಡದ ಆಲ್​ರೌಂಡರ್​ ಶಿವಂ ದುಬೆ ಸತತ ಎರಡನೇ ಅರ್ಧ ಶತಕ ಬಾರಿಸುವ ಜತೆಗೆ ತಲಾ ಒಂದು ವಿಕೆಟ್ ಪಡೆಯುವ ಮೂಲಕ ವಿಶಿಷ್ಟ ಮೈಲಿಗಲ್ಲನ್ನು ಸಾಧಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಶ್ರೇಷ್ಠ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ಯುವರಾಜ್ ಸಿಂಗ್ ಅವರಿರುವ ಎಲೈಟ್​ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಬ್ಯಾಕಪ್ ಆಲ್ರೌಂಡರ್ ಟಿ20 ಐ ಇತಿಹಾಸದಲ್ಲಿ ಎರಡು ಅರ್ಧ ಶತಕ ಗಳಿಸುವ ಜತೆಗೆ ಎರಡು ಅಥವಾ ಹೆಚ್ಚಿನ ಸಂದರ್ಭಗಳಲ್ಲಿ ತಮ್ಮ ತಂಡಕ್ಕಾಗಿ ಒಂದು ವಿಕೆಟ್ ಪಡೆದ ಮೂರನೇ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ವೈಟ್ ಬಾಲ್ ದಂತಕಥೆಗಳಾದ ಯುವರಾಜ್ ಸಿಂಗ್​ ಮತ್ತು ವಿರಾಟ್​ ಕೊಹ್ಲಿ ಮಾತ್ರ ಈ ಅಪರೂಪದ ಪಟ್ಟಿಯಲ್ಲಿ ಮೊದಲೆರಡು ಸ್ಥಾನ ಪಡೆದಿದ್ದರು.

ಮೊಹಾಲಿಯಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ 40 ಎಸೆತಗಳಲ್ಲಿ ಅಜೇಯ 60 ರನ್ ಗಳಿಸಿದ್ದ ಅವರು ತಮ್ಮ ಬೌಲಿಂಗ್ ಸ್ಪೆಲ್​ನ ಮೊದಲ 2 ಓವರ್​ಗಳಲ್ಲಿ 9 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಇಂದೋರ್​ನಲ್ಲಿ ನಡೆದ ಸರಣಿಯ ಕೊನೆಯ ಪಂದ್ಯದಲ್ಲಿ 32 ಎಸೆತಗಳಲ್ಲಿ 36 ರನ್​ ನೀಡಿ 1 ವಿಕೆಟ್ ಪಡೆದಿದ್ದರು. ಅದೇ 63* ರನ್ ಗಳಿಸುವ ಮೂಲಕ ತಮ್ಮ ಅದ್ಭುತ ಪ್ರದರ್ಶನ ನೀಡಿದ್ದರು.

ಮೂರು ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ಅಜೇಯ ಮುನ್ನಡೆ ಸಾಧಿಸಲು ಸಹಾಯ ಮಾಡಿದ ದುಬೆ ಸತತ ಆಲ್​ರೌಂಡ್​ ಪ್ರದರ್ಶನದೊಂದಿಗೆ ದುಬೆ ಟಿ 20 ಐ ಇತಿಹಾಸದಲ್ಲಿ ಎರಡು ಸಂದರ್ಭಗಳಲ್ಲಿ ಅರ್ಧಶತಕ ಮತ್ತು ಒಂದು ವಿಕೆಟ್ ಪಡೆದ ಅಪರೂಪದ ಭಾರತೀಯ ಆಟಗಾರರ ಪಟ್ಟಿಗೆ ಸೇರಿದರು.

ಮಿರ್​ಪುರದಲ್ಲಿ ನಡೆದ 2012ರ ಆವೃತ್ತಿಯ ಟಿ20 ವಿಶ್ವಕಪ್​ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ವಿರಾಟ್​ ಕೊಹ್ಲಿ ಇದೇ ರೀತಿ ಸಾಧನೆ ಮಾಡಿರುವ ಜತೆಗೆ ಇನ್ನೊಂದು ಬಾರಿ ಅರ್ಧ ಶತಕ ಹಾಗೂ ವಿಕೆಟ್​ ಪಡೆದಿದ್ದರು. ಈ ಪಟ್ಟಿಗೆ ಇದೀಗ ದುಬೆ ಸೇರಿಕೊಂಡಿದ್ದಾರೆ.

ಯುವರಾಜ್​ಗೆ ಅಗ್ರಸ್ಥಾನ

ಯುವರಾಜ್ ಈ ವಿಶಿಷ್ಟ ಸಾಧನೆಯಲ್ಲಿ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ/ ಕ್ರಿಕೆಟಿಗನ ಉತ್ತುಂಗದ ಸಮಯದಲ್ಲಿ ಈ ರೀತಿ ಮೂರು ಬಾರಿ ಸಾಧನೆ ಮಾಡಿದ್ದಾರೆ. ಮಧ್ಯಮ ಕ್ರಮಾಂಕದ ಎಡಗೈ ಬ್ಯಾಟ್ಸ್ಮನ್ ಅರೆಕಾಲಿಕ ಸ್ಪಿನ್ನರ್ ಆಗಿದ್ದ ಯುವರಾಜ್​ ಸಿಂಗ್​ ಚುಟುಕು ಕ್ರಿಕೆಟ್ ಮಾದರಿಯಲ್ಲಿ ಎರಡು ಬಾರಿ ಎರಡು ಮತ್ತು ಅದಕ್ಕಿಂತ ಹೆಚ್ಚು ಅರ್ಧ ಶತಕ ಹಾಗೂ ಒಂದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಈ ಮೂಲಕ ಅವರು ಅಗ್ರಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ : Sachin Tendulkar : ಸಾರಾ ಬಳಿಕ ಇದೀಗ ಸಚಿನ್​​​ಗೂ ಡೀಪ್​ಫೇಕ್​​ ​ ವಿಡಿಯೊ ಕಾಟ

ಬೆಂಗಳೂರಿನಲ್ಲಿ ಬುಧವಾರ (ಜನವರಿ 17) ನಡೆಯಲಿರುವ ಸರಣಿಯ ಮೂರನೇ ಮತ್ತು ಅಂತಿಮ ಟಿ 20 ಪಂದ್ಯದಲ್ಲಿ ಮತ್ತೊಂದು ಆಕರ್ಷಕ ಪ್ರದರ್ಶನ ನೀಡಿದರೆ ಶಿವಂ ದುಬೆ ಮತ್ತೊಂದು ಐತಿಹಾಸಿಕ ಮೈಲುಗಲ್ಲನ್ನು ಸ್ಥಾಪಿಸಲಿದ್ದಾರೆ.

Exit mobile version