ಬರ್ಮಿಂಗ್‌ಹ್ಯಾಮ್ : ಕಾಮನ್ವೆಲ್ತ್ ಗೇಮ್ಸ್‌ನಲ್ಲಿ (CWG- 2022) ಪಾಲ್ಗೊಂಡಿರುವ ಭಾರತದ ಬಾಕ್ಸರ್ ಶಿವ ಥಾಪಾ ತಮ್ಮ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ಗೆಲುವು ಸಾಧಿಸುವುದರೊಂದಿಗೆ ೧೬ನೇ ಸುತ್ತಿಗೆ ಪ್ರವೇಶ ಪಡೆದಿದ್ದಾರೆ. ಅವರು ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನದ ಸುಲೇಮಾನ್ ಬಲೂಚ್ ವಿರುದ್ಧ ೫-೦ ಅಂತರದ ಗೆಲುವು ಸಾಧಿಸಿ ಮುಂದಿನ ಸುತ್ತಿಗೆ ಎಂಟ್ರಿ ಪಡೆದರು.
೬೦ರಿಂದ ೬೩ ಕೆ.ಜಿ ವಿಭಾಗದ ಬೌಟ್‌ನಲ್ಲಿ ಸಂಪೂರ್ಣ ಪಾರಮ್ಯ ಮೆರೆದ ಭಾರತದ ಬಾಕ್ಸರ್, ಎದುರಾಳಿ ಸುಲೇಮಾನ್‌ಗೆ ಅಂಕ ಗಳಿಸಲು ಅವಕಾಶವೇ ನೀಡಲಿಲ್ಲ. ಇದು ಭಾರತದ ಬಾಕ್ಸಿಂಗ್ ವಿಭಾಗಕ್ಕೆ ದೊರಕಿದ ಮೊದಲ ಗೆಲುವುದು. ಶಿವ ಥಾಪಾ ಮುಂದಿನ ಸುತ್ತಿನಲ್ಲಿ ಸ್ಕಾಟ್ಲೆಂಡ್‌ನ ರೀಸ್ ಲಿಂಚ್ ವಿರುದ್ಧ ಸೆಣಸಾಡಬೇಕಾಗಿದೆ.
ಇದನ್ನೂ ಓದಿ | CWG-2022 | ಈಜುಪಟು ಕನ್ನಡಿಗ ಶ್ರೀಹರಿ ನಟರಾಜ್ ಸೆಮಿಫೈನಲ್ಸ್‌ಗೆ ಪ್ರವೇಶ