Site icon Vistara News

Shoaib Malik : ಬರೇ ಮೋಸ; ಸಾನಿಯಾ ಕಣ್ತಪ್ಪಿಸಿ ಸನಾ ಜತೆ ಸುತ್ತಾಡುತ್ತಿದ್ದ ಶೋಯೆಬ್​ ಮಲಿಕ್​!

Shoaib Malik

ಶೋಯೆಬ್ ಮಲಿಕ್ (Shoaib Malik) ಟಿವಿ ನಟಿ ಮತ್ತು ರೂಪದರ್ಶಿ ಸನಾ ಜಾವೇದ್ ಅವರನ್ನು ಮದುವೆಯಾಗಿ ಒಂದು ವಾರವಾಗಿದೆ. ಸಾನಿಯಾ ಮಿರ್ಜಾ ಡೈವೋರ್ಸ್​ ತೆಗೆದುಕೊಂಡು ಆರಾಮವಾಗಿದ್ದಾರೆ. ಆದರೆ, ಸಾನಿಯಾ ಜತೆ ಇರುವಾಗಲೂ ಶೋಯೆಬ್​ ಸಿಕ್ಕಾಪಟ್ಟೆ ಕಳ್ಳಾಟ ಆಡುತ್ತಿದ್ದ ಹಾಗೂ ಕಣ್ತಪ್ಪಿಸಿ ಸನಾ ಜತೆ ಸುತ್ತಾಡುತ್ತಿದ್ದ ಎಂಬುವ ಸುದ್ದಿ ಬಹಿರಂಗಗೊಂಡಿದೆ.

ಸಾನಿಯಾ ಮಿರ್ಜಾ ಜತಗೆ ಮದುವೆ ಸಂಬಂಧ ಇದ್ದರೂ ಮಲಿಕ್ ಮತ್ತು ಸನಾ ಕಳೆದ ಮೂರು ವರ್ಷಗಳಿಂದ ನಿಕಟ ಸಂಬಂಧವನ್ನು ಹೊಂದಿದ್ದರು ಎಂದು ಸುದ್ದಿ ಚಾನೆಲ್ ಸಮಾ ಟಿವಿಯ ಪಾಡ್ಕಾಸ್ಟ್ ಇತ್ತೀಚೆಗೆ ಹೇಳಿಕೊಂಡಿದೆ. ಮಲಿಕ್ ಅವರನ್ನು ಮದುವೆಯಾದಾಗ ಸನಾ ತನ್ನ ಮಾಜಿ ಪತಿ ಉಮೈರ್ ಜಸ್ವಾಲ್​ ಅವರಿಂದ ವಿಚ್ಛೇದನ ಪಡೆದು ಕೇವಲ ಮೂರು ತಿಂಗಳು ಆಗಿತ್ತು. ಆದಾಗ್ಯೂ ಅವರ ನಡುವಿನ ಕಳ್ಳಾಟ ಮೊದಲೇ ನಡಯುತ್ತಿತ್ತು ಎಂದು ಹೇಳಲಾಗಿದೆ.

ಜತೆಗೇ ಇರಬೇಕಿತ್ತು ಸನಾ

ಚಾನೆಲ್​​ಗಳಲ್ಲಿ ಯಾವುದೇ ಕಾರ್ಯಕ್ರಮಗಳಿಗೆ ಮಲಿಕ್ ಅವರನ್ನು ಆಹ್ವಾನಿಸಿದಾಗಲೆಲ್ಲಾ, ಸನಾ ಅವರನ್ನು ಸಹ ಕರೆಯಬೇಕು ಎಂಬ ಷರತ್ತಿನ ಮೇಲೆ ಮಾತ್ರ ಅವರು ಕಾಣಿಸಿಕೊಳ್ಳುತ್ತಿದ್ದರು ಎಂದು ಪಾಡ್ಕಾಸ್ಟ್ ಹೇಳಿದೆ. ಅವರು ಕಳೆದ ಮೂರು ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪಾಡ್​ಕಾಸ್ಟ್​ ನಿರ್ಮಾಪಕರು ಹೇಳಿದ್ದಾರೆ.

ಸನಾ ಮಾಜಿ ಪತಿ ಉಮೈರ್​ಗೆ ಈ ಬಗ್ಗೆ ತಿಳಿದಿರಲಿಲ್ಲ. ಆದರೆ ಸಾನಿಯಾ ಮಿರ್ಜಾ ಮತ್ತು ಅವರ ಕುಟುಂಬ ಮತ್ತು ಮಲಿಕ್ ಅವರ ಕುಟುಂಬವು ಕಳೆದ ವರ್ಷ ಈ ಬಗ್ಗೆ ಮಾಹಿತಿ ಪಡೆದುಕೊಂಡಿತ್ತು ಎಂದು ಹೇಳಲಾಗಿದೆ.

ಪರಿಸ್ಥಿತಿಯನ್ನು ಸರಿಪಡಿಸಲು ಸಾಕಷ್ಟು ಪ್ರಯತ್ನಗಳು ನಡೆದಿದ್ದವು. ಆದರೆ ಮಲಿಕ್ ಯಾರ ಮಾತನ್ನೂ ಕೇಳಲಿಲ್ಲ ಎಂದು ನಿರ್ಮಾಪಕರು ಹೇಳಿಕೊಂಡಿದ್ದಾರೆ. ಮಲಿಕ್ ಮತ್ತು ಸಾನಿಯಾ ಈಗ ಬೇರ್ಪಟ್ಟಿದ್ದಾರೆ ಎಂಬುದು ಶೊಯೆಬ್ ಅವರು ಸನಾ ತಮ್ಮ ಮದುವೆಯ ಫೋಟೋವನ್ನು ಹಂಚಿಕೊಂಡ ನಂತರವೇ ಬೆಳಕಿಗೆ ಬಂದಿದೆ.

ಸನಾ ಜಾವೇದ್ ಅವರನ್ನು ಮಲಿಕ್​ ಮದುವೆಯಾಗಿದ್ದಾರೆ ಎಂದು ಬಹಿರಂಗಗೊಂಡ ನಂತರ ಪಾಕಿಸ್ತಾನದ ಜನರಿಂದ ಸಾನಿಯಾ ಮಿರ್ಜಾಗೆ ಬಲವಾದ ಬೆಂಬಲ ಸಿಕ್ಕಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಜನರು ಮಲಿಕ್ ಮತ್ತು ಸನಾ ತಮ್ಮ ವಿವಾಹಗಳನ್ನು ಮುರಿದುಕೊಂಡಿದ್ದಕ್ಕಾಗಿ ಛೀಮಾರಿ ಹಾಕಿದ್ದಾರೆ. ಆದಾಗ್ಯೂ ಮೋಸ ಮಾಡುತ್ತಿದ್ದ ಪತಿಯಿಂದ ವಿಚ್ಛೇದನ ಪಡೆಯುವ ಸಾನಿಯಾ ನಿರ್ಧಾರವನ್ನು ಅನೇಕರು ಬೆಂಬಲಿಸಿದ್ದರು.

ಇದನ್ನೂ ಓದಿ : Ishan Kishan : ಇಶಾನ್ ಕಿಶನ್ ಅಶಿಸ್ತಿಗೆ ಧೋನಿ ಸಲಹೆ ಕಾರಣವೇ?

ಮಲಿಕ್ ಮತ್ತು ಸಾನಿಯಾ 2010ರಲ್ಲಿ ಹೈದರಾಬಾದ್ (ಭಾರತ) ನಲ್ಲಿ ಭಾರಿ ಅಭಿಮಾನಿಗಳ ನಡುವೆ ವಿವಾಹವಾದರು. ಸನಾ ಮತ್ತು ಜಸ್ವಾಲ್ 2020 ರಲ್ಲಿ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಇವೆಲ್ಲದರ ನಡುವೆ ಮಲಿಕ್ ಈಗ ಮತ್ತೊಂದು ವಿಷಯಕ್ಕೆ ಸುದ್ದಿಯಾಗಿದ್ದಾರೆ. ಅದುವೇ ಮ್ಯಾಚ್ ಫಿಕ್ಸಿಂಗ್​​.

ಮ್ಯಾಚ್ ಫಿಕ್ಸಿಂಗ್ ಆರೋಪದ ಮೇಲೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್​ನೊಂದಿಗೆ ಶೋಯೆಬ್ ಮಲಿಕ್ ಅವರ ಒಪ್ಪಂದವನ್ನು ಕೊನೆಗೊಳಿಸಲಾಗಿದೆ ಎಂದು ಬಾಂಗ್ಲಾದೇಶದ ಮಾಧ್ಯಮಗಳು ವರದಿ ಮಾಡಿವೆ.

Exit mobile version